ಕರ್ನಾಟಕ

karnataka

ಕಾಂಗ್ರೆಸ್​ನಲ್ಲೇ ಬೇರೆ ಬೇರೆ ಕಾಂಗ್ರೆಸ್​ಗಳಿವೆ, ಈಗ ಇರೋದು ನಕಲಿ ಕಾಂಗ್ರೆಸ್: ಜೋಶಿ ಟೀಕೆ - Fake Congress

By ETV Bharat Karnataka Team

Published : Apr 10, 2024, 8:59 AM IST

ಕಾಂಗ್ರೆಸ್​ನಲ್ಲೇ ಬೇರೆ ಬೇರೆ ಕಾಂಗ್ರೆಸ್​ಗಳಿವೆ. ಈಗ ಇರೋದು ನಕಲಿ ಕಾಂಗ್ರೆಸ್ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.

CENTRAL MINISTER PRALHAD JOSHI  JOSHI FIRE ON STATE GOVERNMENT  DHARWAD
ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ

ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಹೇಳಿಕೆ

ಧಾರವಾಡ:ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್​ ಜೋಶಿ ಅವರ ಟೆಂಪಲ್ ರನ್ ಮುಂದುವರೆದಿದೆ. ನಗರದ ಕಾಳಿಕಾ ದೇವಿ ದೇವಸ್ಥಾನ, ನಗರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.

ದೇವಿಯರ ದರ್ಶನದ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅವರು, ನಮ್ಮ ಪ್ರಚಾರ ಅದ್ಭುತವಾಗಿ ನಡೆಯುತ್ತಿದೆ. ಜನರ ಪ್ರತಿಕ್ರಿಯೆ, ಸ್ಪಂದನೆ ಅತ್ಯುತ್ತಮವಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ವಿಚಾರ ಮೇಲೆ ಬರಲು ಬಿಡುವುದಿಲ್ಲ. ಹೀಗಾಗಿ ತಮಗೆ ಬೇಕಾದ ವಿಚಾರ ಮಾತ್ರ ಹೇಳ್ತಾರೆ. ಈ ದೇಶದಲ್ಲಿ ಯಾವೆಲ್ಲ ಅಭಿವೃದ್ಧಿಯಾಗಿತ್ತು. ಎಷ್ಟು ರೈಲು, ಎಷ್ಟು ಹೈವೇ ಮೊದಲು ಆಗಿದ್ದವು ಅಂತೆಲ್ಲ ಹೇಳುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಸ್ಥಿತಿಗತಿ ಬಗ್ಗೆ ಮಾತನಾಡುವುದಿಲ್ಲ ಎಂದು ಹರಿಹಾಯ್ದರು.

ಆರ್ಟಿಕಲ್ 370 ಬಗ್ಗೆ ಕರ್ನಾಟಕದಲ್ಲಿ ಯಾಕೆ ಹೇಳುತ್ತೀರಿ ? ಅಂತಾರೆ. ಕಾಶ್ಮೀರದಲ್ಲಿ ಉಗ್ರವಾದಿ ಚಟುವಟಿಕೆ ಹೆಚ್ಚಾಗಲು ಆಗಲು ಆರ್ಟಿಕಲ್ 370 ಕಾರಣವಾಗಿತ್ತು. ಡಿಕೆಶಿ-ಸಿದ್ದರಾಮಯ್ಯ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ.‌ ಕಾಂಗ್ರೆಸ್​ನಲ್ಲೇ ಬೇರೆ ಬೇರೆ ಕಾಂಗ್ರೆಸ್​ಗಳಿವೆ. ಈಗ ಇರೋದು ನಕಲಿ ಕಾಂಗ್ರೆಸ್. ಈ ನಕಲಿ ಕಾಂಗ್ರೆಸ್ ಲೋವೆಸ್ಟ್ ಎವರ್ ಸ್ಪರ್ಧೆ ಮಾಡ್ತಿದೆ. ಕಳೆದ 76 ವರ್ಷಗಳಲ್ಲಿ ಇದು ಅತ್ಯಂತ ಕಡಿಮೆ, ಆದರೂ ಮೋದಿಗೆ ಬೈಯ್ಯೋದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರ ಪರಿಹಾರ ವಿಷಯ ಸದ್ಯ ಕೋರ್ಟ್​ನಲ್ಲಿದೆ.‌ ಕೇಂದ್ರ ಸರ್ಕಾರ ಪಾರದರ್ಶಕವಾಗಿ ನಡೆಯುತ್ತಿದೆ. ಚುನಾವಣೆ ಆಯೋಗ ಏನು ಅನುಮತಿ ಕೊಡುತ್ತೆ ನೋಡಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ದಿಂಗಾಲೇಶ್ವರ ಶ್ರೀ ಸ್ಪರ್ಧೆ ವಿಚಾರಕ್ಕೆ ಮಾತನಾಡಿದ ಅವರು, ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಅವರು ಏನೇ ಹೇಳಿದರೂ ಅದೆಲ್ಲವೂ ನನಗೆ ಆರ್ಶೀವಾದ ಎಂದು ಹೇಳಿದರು.

ಓದಿ:ಏ.15ರಂದು ಶೆಟ್ಟರ್, ಮೃಣಾಲ್​ ನಾಮಪತ್ರ ಸಲ್ಲಿಕೆ: ಎರಡೂ ಪಕ್ಷಗಳಿಂದ ಶಕ್ತಿ ಪ್ರದರ್ಶನ ನಿರೀಕ್ಷೆ - lokashab elcetion

ABOUT THE AUTHOR

...view details