ಕರ್ನಾಟಕ

karnataka

'ಚುನಾವಣೆಯಲ್ಲಿ ಹಾರ್ಟ್ ಸ್ಟ್ರಾಟಜಿಯಷ್ಟೇ': ಕಾಂಗ್ರೆಸ್ ಅಭ್ಯರ್ಥಿ ಗೀತಾ ಪರ ಶಿವರಾಜ್​ಕುಮಾರ್ ಮತಬೇಟೆ - Geetha Shivarajkumar

By ETV Bharat Karnataka Team

Published : Mar 24, 2024, 5:12 PM IST

ಕಾಂಗ್ರೆಸ್​​​ನಿಂದ ಲೊಕಸಭಾ ಅಖಾಡಕ್ಕಿಳಿದಿರುವ ಗೀತಾ ಶಿವರಾಜ್​ಕುಮಾರ್ ಪರ ಪತಿ, ನಟ ಶಿವರಾಜ್​ಕುಮಾರ್ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.

Shivarajkumar election campaign with wife Geetha
ಪತ್ನಿ ಗೀತಾ ಅವರೊಂದಿಗೆ ನಟ ಶಿವರಾಜ್​ಕುಮಾರ್ ಚುನಾವಣಾ ಪ್ರಚಾರ

ನಟ ಶಿವರಾಜ್​ಕುಮಾರ್

ಶಿವಮೊಗ್ಗ: ''ಕಳೆದ ಚುನಾವಣೆಗಿಂತ ಈ ಚುನಾವಣೆಯಲ್ಲಿ ನಮಗೆ ಪಾಸಿಟಿವ್ ವಾತಾವರಣವಿದೆ. ಚುನಾವಣೆ ಎಂಬುದು ಮೈಂಡ್ ಸ್ಟ್ರಾಟಜಿ ಅಲ್ಲ, ಹಾರ್ಟ್ ಸ್ಟ್ರಾಟಜಿ. ಎಲ್ಲವೂ ಹೃದಯದಿಂದಲೇ ನಡೆಯೋದು'' ಎಂದು ನಟ ಶಿವರಾಜ್​ಕುಮಾರ್ ಹೇಳಿದ್ರು.

ಇಂದಿನಿಂದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್ ತಮ್ಮ ಪ್ರಚಾರವನ್ನು ಅಧಿಕೃತವಾಗಿ ಪ್ರಾರಂಭಿಸಿದ್ದಾರೆ. ಬೆಳಗ್ಗೆ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಪತಿ, ನಟ ಶಿವರಾಜ್​​​ಕುಮಾರ್​​, ಕಳೆದ ವಾರ ಎರಡು ದಿನ ಪ್ರವಾಸ ಮಾಡಿದ್ದೆವು. ನಮಗೆ ಭದ್ರಾವತಿಯಲ್ಲಿ ಒಳ್ಳೆಯ ಸ್ವಾಗತ ಸಿಕ್ಕಿತ್ತು. ಈ ಬಾರಿ ಹೊಸತನವಿದೆ, ಆತ್ಮವಿಶ್ವಾಸವಿದೆ. ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಇಲ್ಲಿ ಎಷ್ಟು‌ ಜನ ಸೇರುತ್ತಾರೆ ಅನ್ನೋದಕ್ಕಿಂತ, ಚುನಾವಣೆಯನ್ನು ಹೇಗೆ ನೋಡುತ್ತಾರೆ ಅನ್ನೋದು ಮುಖ್ಯ. ಎಲ್ಲಾರಿಗೂ ಬದಲಾವಣೆ ಬೇಕು ಎಂದು ನನಗನಿಸುತ್ತಿದೆ ಎಂದರು.

ಜನರಿಗೆ ನಮ್ಮ ಕೆಸಲದ ಕುರಿತು‌ ನಂಬಿಕೆ ಬರಬೇಕು. ಬೇರೆಯವರಂತೆ ನಾವು ತಿರುಚಿ ಮಾತನಾಡುವವರಲ್ಲ. ನಮ್ಮದು ನೇರ ಮಾತನಾಡುವ ಕುಟುಂಬ. ಬಹಳ ನಿಯತ್ತಿನಲ್ಲಿ ಇರುವಂತಹವರು ನಾವು. ಹೃದಯಕ್ಕೆ ಏನನಿಸುತ್ತದೆಯೋ, ಅದೇ ಬಾಯಲ್ಲೂ ಬರುತ್ತದೆ. ಗೀತಾ ಒಂದು ಪಕ್ಷದಿಂದ ಬಂದವರು. ಆ ಪಕ್ಷವನ್ನು‌ ಫಾಲೋ‌ ಮಾಡಿ, ಜನರಿಗೆ ಏನು ಬೇಕೋ ಅದನ್ನು ಕೊಡಬೇಕು. ನಾನು ಈಗಾಗಲೇ ಗೀತಾ ಅವರ ಬಳಿ ಮಾತನಾಡಿದ್ದೇನೆ.‌ ಇಲ್ಲಿನ ಸಮಸ್ಯೆ ಏನೆಂಬುದನ್ನು ಅರಿತು, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಕರ್ನಾಟಕ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆ ಇದೆ. ಮಹಿಳೆಯರಿಗೆ ಅವಕಾಶ ಸಿಗಬೇಕೆಂದರು.

ನಮ್ಮದು ಮೈಂಡ್ ಸ್ಟ್ರಾಟಜಿ ಅಲ್ಲ, ನಮ್ಮದು ಹಾರ್ಟ್ ಸ್ಟ್ರಾಟಜಿ. ಮಾಧ್ಯಮದವರಿಗೆ ಇಲ್ಲಿನ ಸಮಸ್ಯೆ ಮತ್ತು ಜನರಿಗೆ ಏನು ಬೇಕು ಎಂಬುದು ನಿಮಗೆ ತಿಳಿದಿರುತ್ತದೆ. ಅದನ್ನು ನಮಗೆ ತಿಳಿಸಿ ಎಂದರು. ಇನ್ನು, ನನಗೆ 62 ವರ್ಷ. ನಾನು ವೋಟ್ ಮಾಡಲು ಶುರು ಮಾಡಿ 40 ವರ್ಷ ಆಯಿತು. ನನಗೆ ಸ್ವಲ್ಪ ಸ್ವಲ್ಪ ರಾಜಕೀಯ ಅರ್ಥವಾಗುತ್ತಿದೆ. ನಾನೇ ರಾಜಕೀಯಕ್ಕೆ ಬರಬೇಕು ಎಂದೇನಿಲ್ಲ. ಗೀತಾ ಅವರು ರಾಜಕೀಯಕ್ಕೆ ಬಂದಿದ್ದಾರೆ. ನಾನು ಅವರಿಗೆ ಬೆಂಬಲ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಲೊಕಸಭಾ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್

ಶೋಭಾ ಕರದ್ಲಾಂಜೆ ಅವರು ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರನ್ನು ಭೇಟಿಯಾದ ವಿಷಯಕ್ಕೆ ಪ್ರತಿಕ್ರಿಯಿಸಿ, ಎಲ್ಲರೂ ಎಲ್ಲರನ್ನೂ ಭೇಟಿ ಆಗಲಿ. ಅದರಲ್ಲಿ ತಪ್ಪೇನಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಶಿವರಾಜ್ ಕುಮಾರ್ ಅಭಿನಯದ ಚಿತ್ರಗಳು: ಜಾಹೀರಾತಿಗೆ ನಿರ್ಬಂಧ ಹಾಕಲು ಚುನಾವಣಾ ಆಯೋಗಕ್ಕೆ ಬಿಜೆಪಿ ಒತ್ತಾಯ - Loksabha election

ಲೊಕಸಭಾ ಅಭ್ಯರ್ಥಿ ಗೀತಾ ಶಿವರಾಜ್​ಕುಮಾರ್ ಮಾತನಾಡಿ, ಕಳೆದ ವಾರ ನಾವು ಭದ್ರಾವತಿ, ಶಿವಮೊಗ್ಗ ಮುಗಿಸಿ ಬೈಂದೂರಿಗೆ ಹೋಗಿದ್ದೆವು. ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.‌ ನಾವು ಹೋದ ಕಡೆಯಲ್ಲಿ ಹೆಚ್ಚು ಯುವಕರು ಕಂಡು ಬರುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ನಮ್ಮ ರಾಜ್ಯ ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ. ಸರ್ಕಾರದ ಜೊತೆ ಸೇರಿ ನಾವು ಸಹ ಕೆಲಸ ಮಾಡುತ್ತೇವೆ ಎಂದರು.

ಇದನ್ನೂ ಓದಿ:'38 ವರ್ಷ ಸಂಸಾರ ನಡೆಸಿದ್ದಕ್ಕಿಂತ ಹೆಚ್ಚು ಅನುಭವ ಬೇಕೇ?': ಪತ್ನಿ ಗೀತಾ ಪರ ಶಿವರಾಜ್​​ಕುಮಾರ್ ಮತ ಪ್ರಚಾರ - Geetha Shivarajkumar

ಈಗಾಗಲೇ ನಮ್ಮ ರಾಜ್ಯ ಸರ್ಕಾರ ಐದು ಗ್ಯಾರಂಟಿ ಜೊತೆ ಇನ್ನಷ್ಟು ಯೋಜನೆಗಳನ್ನು ಜಾರಿ ಮಾಡುವ ಚಿಂತನೆಯಲ್ಲಿದೆ. ಅದರ ಜೊತೆಗೆ ಜನರಿಗ ಏನು ಬೇಕೋ ಅದನ್ನು ಮಾಡಲು ರೆಡಿ ಇದ್ದೇನೆ. ಮಧು ಬಂಗಾರಪ್ಪನವರು ಜಿಲ್ಲಾ ಉಸ್ತುವಾರಿ ಸಚಿವರಾದ ಕಾರಣ ಚುನಾವಣೆಗೆ ಅನುಕೂಲಕರವಾಗಿದೆ ಎಂದು ಹೇಳಿದರು.

ABOUT THE AUTHOR

...view details