ಕರ್ನಾಟಕ

karnataka

ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯೂ ಮೂಲ ಸಂಸ್ಕೃತಿಯ ಪುನರುತ್ಥಾನದ ಸಾಕ್ಷಿಯಾಗಿದೆ: ಮೋಹನ್ ಭಾಗವತ್

By ETV Bharat Karnataka Team

Published : Feb 3, 2024, 4:14 PM IST

ಅಖಿಲ ಭಾರತೀಯ ಕಲಾ ಸಾಧಕ ಸಂಗಮ ಕಾರ್ಯಕ್ರಮದಲ್ಲಿ ಕಲಾಸಾಧಕರಿಗೆ ಮೋಹನ್​ ಭಾಗವತ್​ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಅಖಿಲ ಭಾರತೀಯ ಕಲಾ ಸಾಧಕ ಸಂಗಮ ಕಾರ್ಯಕ್ರಮ
ಅಖಿಲ ಭಾರತೀಯ ಕಲಾ ಸಾಧಕ ಸಂಗಮ ಕಾರ್ಯಕ್ರಮ

ಬೆಂಗಳೂರು: ಭಾರತ ಹಂತ ಹಂತವಾಗಿ ಜಾಗೃತಿಗೊಳ್ಳುತ್ತಿದೆ. ತನ್ನ ಮೂಲ ಸಂಸ್ಕೃತಿಯನ್ನು ಮತ್ತೆ ಕಂಡುಕೊಳ್ಳುತ್ತಿದೆ. ಜನವರಿ 22ರಂದು ನಡೆದ ಅಯೋಧ್ಯೆಯಲ್ಲಿ ಸಂಪನ್ನಗೊಂಡಿರುವ ಬಾಲರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆಯೂ ನಮ್ಮ ಮೂಲ ಸಂಸ್ಕೃತಿಯ ಪುನರುತ್ಥಾನದ ಸಾಕ್ಷಿಯಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದರು.

ಬೆಂಗಳೂರು ಹೊರವಲಯದಲ್ಲಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಆವರಣದಲ್ಲಿ ಆಯೋಜಿಸಲಾಗಿರುವ ಸಂಸ್ಕಾರ ಭಾರತಿ ಸಂಸ್ಥೆಯ ಅಖಿಲ ಭಾರತೀಯ ಕಲಾ ಸಾಧಕ ಸಂಗಮ ಕಾರ್ಯಕ್ರಮದಲ್ಲಿ ಭರತಮುನಿ ವಿಶೇಷ ಪ್ರಶಸ್ತಿಯನ್ನು ಕಲಾಸಾಧಕರಿಗೆ ಪ್ರದಾನ ಮಾಡಿ ಮಾತನಾಡಿದ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಘಟನೆಯು ಪ್ರತಿ ಗ್ರಾಮ ನಗರಗಳಲ್ಲಿ ಭಾರತೀಯತೆ ಜನಮಾನಸಗಳನ್ನು ಬೆಸೆಯುತ್ತಿದೆ. ಈ ವಿದ್ಯಮಾನವು ರಾಷ್ಟ್ರದ ಪ್ರಗತಿಯ ಧ್ಯೋತಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಲಾ ಸಾಧಕರಿಗೆ ಪ್ರಶಸ್ತಿ ಪ್ರಧಾನ

ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡರೂ ಭಾರತೀಯತೆಯನ್ನು ಪ್ರತಿನಿಧಿಸುವ ಕಲಾ ಸಾಧಕರು ಹಲವು ಕಾರಣಗಳಿಂದ ಅಷ್ಟಾಗಿ ಮುನ್ನಲೆಗೆ ಬಂದಿರಲಿಲ್ಲ. ಬಹುತೇಕ ವರ್ಷಗಳ ಕಾಲ ಅಂತವರು ಯಾವುದೇ ಪ್ರಾಮುಖ್ಯತೆಯನ್ನು ಪಡೆಯದೆ ಉಳಿಯುವಂತಾಯಿತು. ಇತ್ತೀಚಿನ ದಿನಗಳಲ್ಲಿ ಅಂತಹ ಕಲಾತಪಸ್ವಿಗಳು ಮತ್ತೆ ಜನಮಾನಸದಲ್ಲಿ ಜಾಗವನ್ನು ಪಡೆಯುತ್ತಿದ್ದಾರೆ. ಈ ರೀತಿ ಮತ್ತೆ ನಮ್ಮ ಮೂಲಕ ಕಲೆಗಳ ಪ್ರತಿಪಾದಕರು ಗುರುತಿಸುವಂತೆ ಮಾಡಿರುವುದು ಸಂಸ್ಕಾರ ಭಾರತಿ ಅಂತಹ ಸಂಸ್ಥೆಗಳ ಪ್ರಯತ್ನದಿಂದಾಗಿದೆ ಎಂದು ಅಭಿಪ್ರಾಯಪಟ್ಟರು.

ಕಲಾ ಸಾಧಕರಿಗೆ ಪ್ರಶಸ್ತಿ ಪ್ರಧಾನ

ಸಂಸ್ಕಾರ ಭಾರತೀಯ ಸಂಸ್ಥೆ ಹಲವು ವರ್ಷಗಳಿಂದ ಅಸ್ತಿತ್ವದಲ್ಲಿದ್ದು ಭಾರತೀಯ ಸಂಸ್ಕೃತಿ ಕಲೆ ವಿಚಾರಗಳನ್ನು ಪಸರಿಸುವ ಕೆಲಸ ಮಾಡುತ್ತಿದೆ. ಜಾತಿ, ಮತದ, ಧರ್ಮದ ಭೇದವಿಲ್ಲದೆ ನಮ್ಮ ದೇಶದ ಜನರನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದೆ. ಆದರೆ ಈಗ ಅಖಿಲ ಭಾರತೀಯ ಕಾಲ ಸಾಧಕ ಸಂಗಮ ನಡೆಸುವ ಮೂಲಕ ಹೊಸ ಇತಿಹಾಸವನ್ನು ರಚಿಸುತ್ತಿದೆ. ತಪಸ್ವಿಗಳಂತಿರುವ ಸಾಧಕರನ್ನು ಜನರಿಗೆ ಪರಿಚಯಿಸಿ ಅವರಿಗೆ ಗೌರವವನ್ನು ವಿಶೇಷ ರೀತಿಯಲ್ಲಿ ಸಲ್ಲಿಸುತ್ತಿರುವುದು ಶ್ಲಾಘನಿಯ ಕಾರ್ಯವಾಗಿದೆ ಎಂದು ಹೇಳಿದರು.

ಮನುಷ್ಯನ ಅಸ್ತಿತ್ವವೇ ಆತನ ಸಂವೇದನೆಯಿಂದಾಗಿದೆ. ಈ ಸಂವೇದನೆಯಿಂದಲೇ ಕಲೆಗಳನ್ನು ಪ್ರಸ್ತುತಪಡಿಸುವ ಆರಾಧಿಸುವ ಕಾರ್ಯಗಳು ನಡೆಯುತ್ತವೆ. ಕಲೆಗಳೊಂದಿಗೆ ಜನರ ನಡುವಿನ ಸಾಮರಸ್ಯ ಉಂಟಾಗುತ್ತದೆ. ನಮ್ಮ ಎದೆ ಬಡಿತವು ಸಂಗೀತದ ತಾಳದಂತಿದೆ. ನಮ್ಮ ಮಾತುಗಳಲ್ಲೇ ಸ್ವರದ ಅಡಕವಾಗಿದೆ. ತಮ್ಮನ್ನು ತಾವು ಕನ್ನಡಿಯಲ್ಲಿ ನೋಡಿಕೊಳ್ಳುವುದು ಮತ್ತು ಪ್ರಪಂಚವನ್ನು ನೋಡುವುದು ಸಹ ಬಣ್ಣಗಳ ಮೂಲಕವೇ ಆಗಿದೆ. ಹೀಗೆ ಹಲವು ವಿಧದ ಕಲೆಗಳ ಮೂಲಕ ಭಾರತೀಯ ಸಂಸ್ಕೃತಿಯಲ್ಲಿ ಮನುಷ್ಯನ ವಿಕಾಸವನ್ನು ಬಿಂಬಿಸಲಾಗಿದೆ ಎಂದು ವ್ಯಾಖ್ಯಾನಿಸಿದರು.

ಭರತ ಮುನಿಗಳ ಹೆಸರಿನಲ್ಲಿ ಕೊಡಮಾಡಲಾದ ವಿಶೇಷ ಪ್ರಶಸ್ತಿಯನ್ನು ಚಿತ್ರಕಾರರಾದ ವಿಜಯ ದಶರಥ ಆಚರೇಕರ್ ಹಾಗೂ ಲೋಕಕಲಾ ಸಾಧಕ ಗಣಪತ್ ಸಖಾ ರಾಮ್ ಮಸಗೆ ಸ್ವೀಕರಿಸಿದರು.

ಇದನ್ನೂ ಓದಿ:ಎಲ್.ಕೆ. ಅಡ್ವಾಣಿಗೆ ಭಾರತ ರತ್ನ ಘೋಷಣೆ: ಪ್ರಧಾನಿ ಮೋದಿ ಅಭಿನಂದನೆ

ABOUT THE AUTHOR

...view details