ಕರ್ನಾಟಕ

karnataka

ಅಡ್ಡಮತದಾನ ಮಾಡಿದ ಎಸ್​ಟಿ ಸೋಮಶೇಖರ್ ಮನೆ ಬಳಿ ಪ್ರತಿಭಟನೆ ಸಾಧ್ಯತೆ: ಭದ್ರತೆ ನೀಡಿದ ಪೊಲೀಸರು

By ETV Bharat Karnataka Team

Published : Feb 27, 2024, 5:18 PM IST

ಅಡ್ಡಮತದಾನ ಮಾಡಿದ ಎಸ್​ಟಿ ಸೋಮಶೇಖರ್ ಮನೆ ಬಳಿ ಪ್ರತಿಭಟನೆ ಸಾಧ್ಯತೆಯಿದ್ದು, ಪೊಲೀಸರು ಅವರ ನಿವಾಸದ ಬಳಿ ಬ್ಯಾರಿಕೇಡ್ ಹಾಕಿ ಭದ್ರತೆ ನೀಡಿದ್ದಾರೆ.

ST Somashekhar house  cross ಭದ್ರತೆ ನೀಡಿದ ಪೊಲೀಸರುvote issue  Police security  ಸೋಮಶೇಖರ್ ಅಡ್ಡ ಮತದಾನ  ಭದ್ರತೆ ನೀಡಿದ ಪೊಲೀಸರು
ಭದ್ರತೆ ನೀಡಿದ ಪೊಲೀಸರು

ಎಸ್​ಟಿ ಸೋಮಶೇಖರ್ ಮನೆಗೆ ಪೊಲೀಸ್​ ಭದ್ರತೆ

ಬೆಂಗಳೂರು: ರಾಜ್ಯಸಭಾ ಚುನಾವಣೆ ಹಿನ್ನೆಲೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್​.ಟಿ. ಸೋಮಶೇಖರ್ ಅಡ್ಡಮತದಾನ ಮಾಡಿರುವ ಹಿನ್ನೆಲೆ ಅವರ ಮನೆ ಮುಂದೆ ಪ್ರತಿಭಟನೆ ನಡೆಯುವ ಸಾಧ್ಯತೆಯಿದೆ. ಈ ಹಿನ್ನೆಲೆ ಶಾಸಕ ಸೋಮಶೇಖರ್ ಮನೆಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

ಬಿಟಿಎಂ‌ ಬಡಾವಣೆಯಲ್ಲಿರುವ ಸೋಮಶೇಖರ್ ಮನೆಗೆ ಭದ್ರತೆ ಒದಗಿಸಲಾಗಿದೆ.‌ ಇಂದು ನಡೆದ ಚುನಾವಣೆಯಲ್ಲಿ ಸೋಮಶೇಖರ್ ಬಿಜೆಪಿ ಅಭ್ಯರ್ಥಿಯನ್ನು ಬಿಟ್ಟು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದರು. ಈ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಸೋಮಶೇಖರ್ ವಿರುದ್ಧ ಪ್ರತಿಭಟನೆ ನಡೆಸಿ ಮನೆಗೆ ಮುತ್ತಿಗೆ ಹಾಕುವ ಸಾಧ್ಯತೆಯಿದೆ. ಈ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಎಸ್​ಟಿಎಸ್ ಮನೆ ಮುಂದೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಅಡ್ಡ ಮತದಾನ ಹಿನ್ನೆಲೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಅಸಮಾಧಾನಗೊಂಡಿದ್ದಾರೆ. ಈ ಸಂಬಂಧ ಬಿಜೆಪಿ ಮಂಡಲ ಕಚೇರಿ ಬಳಿ ಪ್ರತಿಭಟನೆ‌ ನಡೆಸುತ್ತಿದ್ದಾರೆ. ಶಾಸಕ ಸೋಮಶೇಖರ್​ ವಿರುದ್ಧ ದಿಕ್ಕಾರ ಕೂಗಿದ್ದಾರೆ.

ಓದಿ:ಬಿಜೆಪಿ ಶಾಸಕನಿಂದ ಅಡ್ಡಮತದಾನ?, ನಾನು ಆತ್ಮ ಸಾಕ್ಷಿಯಿಂದ ಮತ ಹಾಕಿದ್ದೇನೆ: ಎಸ್.ಟಿ.ಸೋಮಶೇಖರ್

ABOUT THE AUTHOR

...view details