ಕರ್ನಾಟಕ

karnataka

ಆಪರೇಷನ್​ ಥಿಯೇಟರ್​ನಲ್ಲಿ ಪ್ರಿ ವೆಡ್ಡಿಂಗ್​ ಶೂಟ್​: ವೈದ್ಯ ಸೇವೆಯಿಂದಲೇ ಮದುಮಗ ವಜಾ

By ETV Bharat Karnataka Team

Published : Feb 9, 2024, 7:53 PM IST

Updated : Feb 9, 2024, 10:56 PM IST

ಸರ್ಕಾರಿ ಆಸ್ಪತ್ರೆಯ ಆಪರೇಷ​ನ್​ ಥಿಯೇಟರ್‌ನಲ್ಲಿ ಪ್ರಿ ವೆಡ್ಡಿಂಗ್​ ಶೂಟ್​ ಮಾಡಿಸಿಕೊಂಡ ಗಂಭೀರ ಆರೋಪದಲ್ಲಿ ಡಾ.ಅಭಿಷೇಕ್​ ಎಂಬವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

pre wedding shoot
ಪ್ರಿ ವೆಡ್ಡಿಂಗ್​ ಶೂಟ್​

ಚಿತ್ರದುರ್ಗ: ಇಲ್ಲಿನ ಭರಮಸಾಗರ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬನಿಗೆ ಆಪರೇಷನ್​ ಮಾಡುವಂತೆ ಪ್ರಿ ವೆಡ್ಡಿಂಗ್​ ಶೂಟ್​ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ವಿಡಿಯೋ ವೈರಲ್ ಬೆನ್ನಲ್ಲೇ ಜೋಡಿಯ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಇದೀಗ ನಿಯಮಬಾಹಿರ ನಡೆ ಹಾಗೂ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಗುತ್ತಿಗೆ ಆಧಾರಿತ ವೈದ್ಯ ಡಾ.ಅಭಿಷೇಕ್​ ಅವರನ್ನು ಸೇವೆಯಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್​ ಆದೇಶ ಹೊರಡಿಸಿದ್ದಾರೆ.

ಘಟನೆ ಬಗ್ಗೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್​ ಮಾಡಿದ್ದು, "ಚಿತ್ರದುರ್ಗದ ಭರಮಸಾಗರ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲಿ ಪ್ರಿ ವೆಡ್ಡಿಂಗ್ ಶೋಟ್ ನಡೆಸಿದ ವೈದ್ಯರನ್ನ ಸೇವೆಯಿಂದ ವಜಾಗೊಳಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಿರುವುದು ಜನರ ಆರೋಗ್ಯ ಸೇವೆಗೆ ಹೊರತು ವೈಯಕ್ತಿಕ ಕೆಲಸಗಳಿಗಲ್ಲ. ವೈದ್ಯರಿಂದ ಇಂಥಹ ಅಶಿಸ್ತುಗಳನ್ನ ನಾನು ಸಹಿಸುವುದಿಲ್ಲ. ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ಗುತ್ತಿಗೆ ನೌಕರರು ಸೇರಿದಂತೆ ವೈದ್ಯರು, ಸಿಬ್ಬಂದಿ ವರ್ಗದವರು ಸರ್ಕಾರಿ ಸೇವಾ ನಿಯಮಾವಳಿಗಳ ಅನ್ವಯ ಕರ್ತವ್ಯ ನಿರ್ವಹಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೀತಿಯ ದುರುಪಯೋಗಳು ಆಗದಂತೆ ಎಚ್ಚರಿಕೆ ವಹಿಸಲು ಸಂಬಂಧಪಟ್ಟ ವೈದ್ಯರು ಹಾಗೂ ಎಲ್ಲಾ ಸಿಬ್ಬಂದಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಸರ್ಕಾರಿ ಆಸ್ಪತ್ರೆಗಳಿಗೆ ಸರ್ಕಾರ ಒದಗಿಸಿರುವ ಸೌಕರ್ಯಗಳು ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ಎಂಬುದನ್ನ ಅರಿತು ಕರ್ತವ್ಯ ನಿರ್ವಹಿಸುವತ್ತಾ ಎಲ್ಲರೂ ಗಮನಹರಿಸಬೇಕು" ಎಂದು ತಿಳಿಸಿದ್ದಾರೆ.

ಡಿಹೆಚ್​ಒ ಡಾ.ರೇಣು ಪ್ರಸಾದ್​ ಪ್ರತಿಕ್ರಿಯೆ

ಈ ಘಟನೆ ಸಂಬಂಧ ಚಿತ್ರದುರ್ಗದ ಡಿಹೆಚ್​ಒ ಡಾ.ರೇಣು ಪ್ರಸಾದ್​ ಪ್ರತಿಕ್ರಿಯಿಸಿದ್ದು, "ತಿಂಗಳ ಹಿಂದೆ ಎನ್​ಹೆಚ್​ಎಂನಲ್ಲಿ ಡಾ.ಅಭಿಷೇಕ್​​ ಗುತ್ತಿಗೆ ಆಧಾರದಲ್ಲಿ ವೈದ್ಯಾಧಿಕಾರಿಯಾಗಿ ನೇಮಕವಾಗಿದ್ದರು. ಕೆಲವು ತಿಂಗಳುಗಳಿಂದ ಆಪರೇಷನ್​ ಥಿಯೇಟರ್​ ಸ್ಥಗಿತವಾಗಿತ್ತು. ಅದೇ ಥಿಯೇಟರ್​ನಲ್ಲಿ ಪ್ರಿ ವೆಡ್ಡಿಂಗ್​ ಶೂಟ್​ ಮಾಡಿದ್ದಾರೆ. ಆಪರೇಷನ್​ ಥಿಯೇಟರ್​ ದುರ್ಬಳಕೆಯಾಗಿದೆ. ಭರಮಸಾಗರ ಆಸ್ಪತ್ರೆಯ ವೈದ್ಯಾಧಿಕಾರಿಗೆ ನೋಟಿಸ್​ ನೀಡಿದ್ದೇವೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.

ಇದನ್ನೂ ಓದಿ:ಭಾರತದಲ್ಲಿ ಪ್ರಿ ವೆಡ್ಡಿಂಗ್​ ಶೂಟ್​ಗೆ ಸ್ಥಳ ಹುಡುಕುತ್ತಿದ್ರೆ, ಇಲ್ಲಿವೆ ನೋಡಿ ರಮಣೀಯ ತಾಣಗಳು

Last Updated : Feb 9, 2024, 10:56 PM IST

ABOUT THE AUTHOR

...view details