ಕರ್ನಾಟಕ

karnataka

ಮಂಗಳೂರಿನಲ್ಲಿ ನಡೆಯಬೇಕಿದ್ದ ಮೋದಿ ಸಮಾವೇಶ ರದ್ದು, ರೋಡ್ ಶೋ ಮಾತ್ರ - Modi Road Show

By ETV Bharat Karnataka Team

Published : Apr 10, 2024, 7:10 PM IST

Updated : Apr 11, 2024, 2:41 PM IST

ಮಂಗಳೂರಿನಲ್ಲಿ ಏಪ್ರಿಲ್​ 14ರಂದು ಆಯೋಜನೆಗೊಂಡಿದ್ದ ಪ್ರಧಾನಿ ಮೋದಿ ಸಮಾವೇಶ ರದ್ದಾಗಿದೆ.

BJP district president Satish Kumpala
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ಮಂಗಳೂರು:ನಗರದ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಏಪ್ರಿಲ್ 14ರಂದು ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶ ಕೊನೆಯ ಕ್ಷಣದಲ್ಲಿ ರದ್ದಾಗಿದೆ. ಸಮಾವೇಶದ ಬದಲು ಬರೀ ರೋಡ್ ಶೋ ನಡೆಸಲು ನಿರ್ಧರಿಸಲಾಗಿದೆ.

ಈ ‌ಬಗ್ಗೆ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, "ಮೋದಿ ಅವರ ಸಮಾವೇಶಕ್ಕೆ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಇಂದು ಚಪ್ಪರ ಮುಹೂರ್ತವೂ ನಡೆದಿತ್ತು. ಆದರೆ ಕೆಲವು ಕಾರಣಗಳಿಂದ ಸಮಾವೇಶ ರದ್ದುಗೊಂಡಿದೆ. ಕೇಂದ್ರ ನಾಯಕರ ಸೂಚನೆಯಂತೆ ಸಮಾವೇಶದ ಬದಲು ಸಂಜೆ ರೋಡ್ ಶೋ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ" ಎಂದರು.

"ನಾರಾಯಣ ಗುರು ವೃತ್ತದಿಂದ ನವಭಾರತ ಸರ್ಕಲ್ ಮೂಲಕ ಹಂಪನಕಟ್ಟೆವರೆಗೆ ರೋಡ್ ಶೋ ಇರಲಿದೆ. ಸಂಜೆ 5.30ಕ್ಕೆ ಆರಂಭವಾಗಲಿದ್ದು, 2.5 ಕಿ.ಮೀ ರೋಡ್ ಶೋ ಇರಲಿದೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:'ಬೂತ್ ಗೆದ್ದು ಬಿಜೆಪಿ ಗೆಲ್ಲಿಸಿ': ಪಕ್ಷದ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಕರೆ - PM Modi

Last Updated : Apr 11, 2024, 2:41 PM IST

ABOUT THE AUTHOR

...view details