ಕರ್ನಾಟಕ

karnataka

ETV Bharat / state

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ: 10 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ, ಒಂದು ತಿರಸ್ಕೃತ - Dakshina Kannada

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು 11 ಮಂದಿ ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ ಹತ್ತು ಮಂದಿಯ ನಾಮಪತ್ರ ಕ್ರಮಬದ್ಧವಾಗಿದೆ.

nomination-papers-of-10-lok-sabha-candidates-are-in-order-in-dakshina-kannada
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ: 10 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ, ಒಬ್ಬರದ್ದು ತಿರಸ್ಕೃತ

By ETV Bharat Karnataka Team

Published : Apr 5, 2024, 8:32 PM IST

ಮಂಗಳೂರು:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಹನ್ನೊಂದು ಮಂದಿ ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ ಒಬ್ಬರ ನಾಮಪತ್ರ ತಿರಸ್ಕೃತವಾಗಿದೆ. ಇನ್ನುಳಿದ 10 ಮಂದಿಯ ನಾಮಪತ್ರ ಕ್ರಮಬದ್ಧವಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ದೀಪಕ್ ರಾಜೇಶ್ ಕುಯೆಲ್ಲೋ ಎಂಬವರು ಮೂರು ಸೆಟ್ ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ ಒಂದು ನಾಮಪತ್ರ ತಿರಸ್ಕೃತವಾಗಿದೆ. ಉಳಿದ 2 ನಾಮಪತ್ರ ಕ್ರಮಬದ್ಧವಾಗಿದೆ. ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಫ್ರಾನ್ಸಿಸ್ ಲ್ಯಾನ್ಸಿ ಮಾಡ್ತಾ ಅವರ ನಾಮಪತ್ರ ತಿರಸ್ಕೃತವಾಗಿದ್ದು, ಚುನಾವಣಾ ಕಣದಿಂದ ಹೊರಗುಳಿದಿದ್ದಾರೆ.

ಕ್ಷೇತ್ರದಿಂದ ಸ್ಪರ್ಧಿಸಲು 11 ಅಭ್ಯರ್ಥಿಗಳು 21 ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ತಲಾ 4 ಸೆಟ್ ನಾಮಪತ್ರ ಸಲ್ಲಿಸಿದ್ದು, ಇವೆಲ್ಲವೂ ಕ್ರಮಬದ್ಧವಾಗಿದೆ. ಇನ್ನುಳಿದಂತೆ ಬಿಎಸ್​ಪಿಯ ಕಾಂತಪ್ಪ, ಜನಹಿತಪಕ್ಷ ಮತ್ತು ಜನತಾದಳ (ಯು) ನಿಂದ ನಾಮಪತ್ರ ಸಲ್ಲಿಸಿದ್ದ ಸುಪ್ರೀತ್ ಕುಮಾರ್ ಪೂಜಾರಿ, ಉತ್ತಮ ಪ್ರಜಾಕೀಯ ಪಾರ್ಟಿಯ ಕೆ.ಇ.ಮನೋಹರ, ಕೆ.ಆರ್. ಎಸ್‌ನ ರಂಜಿನಿ, ಕರುನಾಡು ಸೇವಕರ ಪಾರ್ಟಿಯ ದುರ್ಗಾಪ್ರಸಾದ್ , ಪಕ್ಷೇತರ ಆಗಿ ನಾಮಪತ್ರ ಸಲ್ಲಿಸಿದ್ದ ಸತೀಶ್ ಬಿ, ಮ್ಯಾಕ್ಷಿಂ ಪಿಂಟೋ ಅವರ ನಾಮಪತ್ರ ಕ್ರಮಬದ್ದವಾಗಿದೆ. ಒಟ್ಟಾರೆ 10 ಅಭ್ಯರ್ಥಿಗಳ 19 ನಾಮಪತ್ರಗಳು ಕ್ರಮಬದ್ದವಾಗಿದೆ.

ಇದನ್ನೂ ಓದಿ:ದ.ಕ.ಲೋಕಸಭಾ ಚುನಾವಣೆ: ಓರ್ವ ಅಭ್ಯರ್ಥಿ ಎರಡು ಪಕ್ಷದಿಂದ ನಾಮಪತ್ರ ಸಲ್ಲಿಕೆ! - Dakshina Kannada

ABOUT THE AUTHOR

...view details