ಕರ್ನಾಟಕ

karnataka

ರಾಜ್ಯದ ಜನತೆಗೆ ಬೋಗಸ್ ಗ್ಯಾರಂಟಿಗಳನ್ನು ಕೊಟ್ಟು ದೇವಸ್ಥಾನದ ಹುಂಡಿಗೆ ಕನ್ನ ಹಾಕಲಾಗ್ತಿದೆ: ಸಂಸದ ಮುನಿಸ್ವಾಮಿ ಆರೋಪ

By ETV Bharat Karnataka Team

Published : Feb 25, 2024, 9:07 PM IST

ಕಾಂಗ್ರೆಸ್ ಸರ್ಕಾರದ ಆಡಳಿತ ವ್ಯವಸ್ಥೆ ವಿರುದ್ಧ ಸಂಸದ ಎಸ್​. ಮುನಿಸ್ವಾಮಿ ಅವರು ಆಕ್ರೋಶ ಹೊರಹಾಕಿದ್ದಾರೆ.

ಸಂಸದ ಎಸ್​. ಮುನಿಸ್ವಾಮಿ
ಸಂಸದ ಎಸ್​. ಮುನಿಸ್ವಾಮಿ

ಸಂಸದ ಎಸ್​. ಮುನಿಸ್ವಾಮಿ ಹೇಳಿಕೆ

ಚಿಕ್ಕಬಳ್ಳಾಪುರ :ರಾಜ್ಯದ ಜನತೆಗೆ ಬೋಗಸ್ ಗ್ಯಾರಂಟಿಗಳನ್ನು ಕೊಟ್ಟು ಕಾಂಗ್ರೆಸ್​ ಸರ್ಕಾರ ದೇವಸ್ಥಾನದ ಹುಂಡಿಗಳಿಗೆ ಕನ್ನ ಹಾಕುತ್ತಿದೆ ಎಂದು ಸಂಸದ ಎಸ್​. ಮುನಿಸ್ವಾಮಿ ಗಭೀರ ಆರೋಪ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

''ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿದ್ದು, ಸಿದ್ದರಾಮಯ್ಯ ಸರ್ಕಾರ ದೇವಸ್ಥಾನದ ಹುಂಡಿಗೆ ಕನ್ನ ಹಾಕುತ್ತಿದೆ. ರಾಜ್ಯದ ಜನತೆಗೆ ಬೋಗಸ್ ಗ್ಯಾರಂಟಿಗಳನ್ನು ಕೊಟ್ಟು ಈಗ ದೇವಸ್ಥಾನಗಳನ್ನು ಕಾಂಗ್ರೆಸ್ ಸರ್ಕಾರ ಬಿಡುತ್ತಿಲ್ಲ. ಸದ್ಯ ರಾಜ್ಯದಲ್ಲಿ ಬೋಗಸ್ ಗ್ಯಾರಂಟಿಗಳಿಂದ ಜನ ಹತಾಶರಾಗಿದ್ದಾರೆ. ಭಗವಂತ ಕಾಂಗ್ರೆಸ್ ನಾಯಕರಿಗೆ ಒಳ್ಳೆಯ ಬುದ್ಧಿ ಕೊಟ್ಟು ರಾಜ್ಯದ ಪರವಾಗಿ ಕೆಲಸ ಮಾಡಬೇಕಾಗಿದೆ. ರಾಮಭಕ್ತರು, ದೇಶಭಕ್ತರ ಮೇಲೆ‌ ಕೇಸ್​ಗಳನ್ನು ಕಾಂಗ್ರೆಸ್ ಸರ್ಕಾರ ಹಾಕುತ್ತಿದೆ. ಅವೆಲ್ಲಾ ನಿಲ್ಲಿಸಬೇಕು'' ಎಂದು ಮುನಿಸ್ವಾಮಿ ಎಚ್ಚರಿಕೆ ನೀಡಿದರು.

''ಕಾಂಗ್ರೆಸ್ ನಾಯಕರಿಗೆ ದೇವರ ಮೇಲೆ‌ ನಂಬಿಕೆ ಇಲ್ಲಾ, ಅವರೆಲ್ಲಾ ಪಾಕಿಸ್ತಾನದ ಎಜೆಂಟ್ ರಂತೆ ವರ್ತಿಸುತ್ತಿದ್ದಾರೆ. ಜತೆಗೆ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ರಾಜ್ಯದಲ್ಲಿ ಬರಗಾಲ‌ ಶುರುವಾಗಿದೆ. ಜನರಿಗೆ ಸುಳ್ಳು ಹೇಳಿ‌ ಹುಂಡಿ ಕಳ್ಳತನ ಮಾಡಲು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕೋಟ್ಯಂತರ ಹಣ ಕರ್ನಾಟಕ ರಾಜ್ಯಕ್ಕೆ‌ ಕೊಟ್ಟಿದೆ. ರಸ್ತೆಗಳ‌ ಅಭಿವೃದ್ಧಿ, ಕುಡಿಯುವ ನೀರು ಪೂರೈಕೆ, ಆಯುಷ್ಮಾನ್ ಯೋಜನೆ, ಅಕ್ಕಿ ವಿತರಣೆ ಸೇರಿದಂತೆ ಹಲವು ಯೋಜನೆಗಳನ್ನು ತಂದು ಜನಪರ ಆಡಳಿತ ನಡೆಸುತ್ತಿದೆ'' ಎಂದು ಮುನಿಸ್ವಾಮಿ ಹೇಳಿದರು.

''ರಾಮ ಮಂದಿರ ಉದ್ಘಾಟನೆ ವೇಳೆ ಭಜನೆ ಮಾಡಲು ಅನುಮತಿ ಕೇಳಿದಾಗ ಹಲವು ಶರತ್ತುಗಳನ್ನು ವಿಧಿಸಿದ್ದರು. ಆದರೆ ಬಾಬರ್ ,ಔರಂಗಜೇಬನ್ ಆಚರಣೆಗೆ ಪರ್ಮಿಷನ್ ಬೇಕಾಗಿಲ್ಲ. ಸದ್ಯ ಸಿದ್ದರಾಮಯ್ಯ ಸರ್ಕಾರ ಖಾಲಿ ಡಬ್ಬದಲ್ಲಿ ಕಲ್ಲು ಹಾಕಿ ಬಜೆಟ್ ಅಲ್ಲಾಡಿಸುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರದ ಖಜಾನೆ‌ ಖಾಲಿಯಾಗಿ ಭ್ರಷ್ಟಾಚಾರ ಜಾಸ್ತಿಯಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸಿದ್ದರಾಮಯ್ಯ ಸರ್ಕಾರದಿಂದ ಯಾವುದೇ ಕೆಲಸಗಳು ನಡೆದಿಲ್ಲ. ಇವರು ಕಾರಿನಲ್ಲಿ ಬಂದು ನಾವು ಮಾಡಿದ ಕೆಲಸಗಳಿಗೆ ಟೇಪ್ ಕಟ್ ಮಾಡುತ್ತಿದ್ದಾರೆ. ಅನ್ನ‌ಭಾಗ್ಯ‌ ಯೋಜನೆಯಲ್ಲಿ ಸಿದ್ದರಾಮಯ್ಯ ಮತ್ತು ಸಚಿವ ಕೆ.ಹೆಚ್ ಮುನಿಯಪ್ಪ ಅಕ್ಕಿಯನ್ನು ಕದ್ದಿಯುತ್ತಿದ್ದಾರೆ'' ಎಂದು ಮುನಿಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

ಇದೇ ವೇಳೆ ಸಂಸದರಿಗೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರ ಗೌಡ, ಆನಂದ್ ಗೌಡ, ಸೇರಿದಂತೆ ಹಲವು ಬಿಜೆಪಿ ಪಕ್ಷದ ಮುಖಂಡರು ಕಾರ್ಯಕ್ರರ್ತರು ಭಾಗಿಯಾಗಿ ಸಾಥ್ ಕೊಟ್ಟರು.

ಇದನ್ನೂ ಓದಿ :ಗುಂಪುಗಾರಿಕೆ, ಕ್ರಾಸ್ ವೋಟಿಂಗ್ ಭಯದಿಂದ ಕಾಂಗ್ರೆಸ್​ ರೆಸಾರ್ಟ್ ರಾಜಕಾರಣ ಮಾಡುತ್ತಿದೆ: ಮಾಜಿ ಸಿಎಂ ಬೊಮ್ಮಾಯಿ

ABOUT THE AUTHOR

...view details