ಕರ್ನಾಟಕ

karnataka

ಚಿಕ್ಕಬಳ್ಳಾಪುರ ನಗರಕ್ಕೆ ನಮ್ಮ ಮೆಟ್ರೋ ತರುವುದಾಗಿ ಶಾಸಕ ಪ್ರದೀಪ್ ಈಶ್ವರ್ ಭರವಸೆ

By ETV Bharat Karnataka Team

Published : Feb 18, 2024, 10:23 AM IST

ಚಿಕ್ಕಬಳ್ಳಾಪುರ ನಗರಕ್ಕೆ ನಮ್ಮ ಮೆಟ್ರೋ ತಂದೇ ತರುತ್ತೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಭರವಸೆ ನೀಡಿದರು.

Chikkaballapur  ಚಿಕ್ಕಬಳ್ಳಾಪುರ  ನಮ್ಮ ಮೆಟ್ರೋ  ಶಾಸಕ ಪ್ರದೀಪ್ ಈಶ್ವರ್  MLA Pradeep Eshwar
ಶಾಸಕ ಪ್ರದೀಪ್ ಈಶ್ವರ್

ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯೆ

ಚಿಕ್ಕಬಳ್ಳಾಪುರ:ಈಗ ದೇವನಹಳ್ಳಿವರೆಗೆ ನಮ್ಮ ಮೆಟ್ರೋ ವಿಸ್ತರಣೆ ಆಗುತ್ತಿದ್ದು,ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ನಗರಕ್ಕೆ ನಮ್ಮ ಮೆಟ್ರೋ ಯೋಜನೆಯನ್ನು ತರುವುದಾಗಿ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ಮುಂದಿನ ದಿನಗಳಲ್ಲಿ ಮೆಟ್ರೋ ರೈಲನ್ನು ಚಿಕ್ಕಬಳ್ಳಾಪುರ ಬರಲು ಮನವಿ ಮಾಡುತ್ತಿದ್ದು, ಎಷ್ಟೇ ವರ್ಷಗಳಾದ್ರೂ ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ರೈಲು ತರಲಾಗುವುದು. ಈಗಾಗಲೇ ದೇವನಹಳ್ಳಿಯವರಿಗೂ ವಿಸ್ತಾರವಾದ ಮೆಟ್ರೋ ರೈಲನ್ನು ಚಿಕ್ಕಬಳ್ಳಾಪುರ ನಗರಕ್ಕೂ ತೆಗೆದುಕೊಂಡುಬರಲು ಶ್ರಮಿಸುತ್ತೇನೆ'' ಎಂದು ತಿಳಿಸಿದರು.

''ಎತ್ತಿನ ಹೊಳೆ ಯೋಜನೆ ಆದಷ್ಟು ಬೇಗ ಬರಬೇಕು. ಈ ಎತ್ತಿನ ಹೊಳೆ ಬಂದರೆ, ಜಿಲ್ಲೆಯ ರೈತರಿಗೆ ಅನುಕೂಲ ಆಗಲಿದೆ. ನೀರಾವರಿ ಯೋಜನೆಗಳ ಬಗ್ಗೆ ಸದನದಲ್ಲಿ ಮಾತನಾಡುವಂತೆ ರೈತ ಹೋರಾಟಗಾರರು ಒತ್ತಾಯ ಮಾಡಿದ್ದಾರೆ. ಇದರ ಬಗ್ಗೆ ನಮ್ಮ ಸರ್ಕಾರದ ಮೇಲೆ ಒತ್ತಡ ತರುತ್ತೇನೆ. ನಾನು ಸಹಾ ಮೂರನೇ ಹಂತದ ಶುದ್ಧೀಕರಣ ಪರ ಇದ್ದೇನೆ. ಈ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತುತ್ತೇನೆ'' ಎಂದು ಹೇಳಿದರು.

''ಬಿಜೆಪಿಯವರು ಎಲ್ಲದರಲ್ಲೂ ಧರ್ಮವನ್ನು ತರುತ್ತಾರೆ. ನಮಗೆಲ್ಲರಿಗೂ ದೇವರ ಮೇಲೆ ಭಕ್ತಿ ಇದೆ. ನಮ್ಮಂತ ಹಿಂದುಳಿದವರಿಗೆ ಶ್ರೀರಾಮನು ದೇವರೇ ಅಂಬೇಡ್ಕರ್ ಅವರೂ ದೇವರೇ. ನಾನು ಅಂಬೇಡ್ಕರ್ ಅವರಿಂದಲೇ ಶಾಸಕನಾಗಿದ್ದು. ನಗರದ ಶಿಡ್ಲಘಟ್ಟ ಸರ್ಕಲ್ ಬಳಿ ಡಾ.ಬಿ.ಆರ್​. ಅಂಬೇಡ್ಕರ್ ವಿಗ್ರಹವನ್ನು ಮುಂದಿನ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಪ್ರತಿಷ್ಠಾಪನೆ ಮಾಡುವುದು'' ಎಂದು ತಿಳಿಸಿದರು.

44 ಕಿಮೀ ಮೆಟ್ರೋ ಮಾರ್ಗ ಸೇರ್ಪಡೆ:ಬೆಂಗಳೂರಲ್ಲಿ ಬಿಎಂಟಿಸಿ ಸೇವೆಯೊಂದಿಗೆ ಮೆಟ್ರೋ ರೈಲು ಹಾಗೂ ಸಬ್-ಅರ್ಬನ್ ರೈಲು ಯೋಜನೆಗಳು ಸೇರಿ ಬಹುವಿಧ ಸಾರಿಗೆ ವ್ಯವಸ್ಥೆಗಳ ಒಗ್ಗೂಡಿಸುವಿಕೆಯ ಯೋಜನೆಗೆ ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ. 2025ರೊಳಗೆ 44 ಕಿಮೀ ಮೆಟ್ರೋ ಮಾರ್ಗ ಸೇರ್ಪಡೆಗೆ ಒತ್ತು ಕೊಡಲಾಗಿದೆ. 15,611 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಸರ್ಕಾಪುರ ಅಗ್ರಹಾರ, ಕೋರ ಮಂಗಳ ಡೈರಿ ವೃತ್ತ, ಮೇಕ್ರಿ ವೃತ್ತ, ಹೆಬ್ಬಾಳ ಸಂಪರ್ಕಿಸುವ ಮಾರ್ಗಗಳು ಸೇರಿವೆ. ಬೆಂಗಳೂರು ಉಪ ರೈಲು ಯೋಜನೆಯಡಿ ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣವರ, ಹೀಲಲಿಗೆಯಿಂದ ರಾಜಾನಕುಂಟೆ ವರೆಗೆ 42.2 ಕಿಲೋ ಮೀಟರ್​ವರೆಗಿನ ಮಾರ್ಗದ ನಿರ್ಮಾಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.

ಇನ್ನು ಕ್ಷೇತ್ರಕ್ಕೆ ರಸ್ತೆ, ಕುಡಿಯುವ ನೀರು ಸರಬರಾಜು ಘಟಕ, ಬಸ್ ನಿಲ್ದಾಣ ಸೇರಿ ಹಲವು ಕಾರ್ಯಕ್ರಮಗಳಿಗೆ ಅನುದಾನ ಬಂದಿದ್ದು, ಶೀಘ್ರದಲ್ಲೇ ಯಾವ ಕೆಲಸಕ್ಕೆ ಎಷ್ಟು ಅನುದಾನ ಎಂಬುದನ್ನು ಪಾಂಪ್ಲೆಟ್ ಮೂಲಕ ಜನರಿಗೆ ಮಾಹಿತಿ ನೀಡುತ್ತೇನೆ ಎಂದು ಶಾಸಕರು ತಿಳಿಸಿದರು.

ಇದನ್ನೂ ಓದಿ:ಅಲ್ಪಸಂಖ್ಯಾತರಿಗೆ ಬಜೆಟ್​ನಲ್ಲಿ ಕೊಟ್ಟಿದ್ದು ಶೇ 0.8 ರಷ್ಟು ಮಾತ್ರ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details