ಕರ್ನಾಟಕ

karnataka

ಚುನಾವಣೆಯಲ್ಲಿ ಶೆಟ್ಟರ್ ಸೋತರೂ ಎಂಎಲ್​ಸಿ ಮಾಡಿದ್ವಿ: ಸಚಿವ ಡಾ.ಶರಣಪ್ರಕಾಶ್ ಪಾಟೀಲ್

By ETV Bharat Karnataka Team

Published : Jan 26, 2024, 6:38 PM IST

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್​ ತೊರೆದು ಬಿಜೆಪಿಗೆ ಮರು ಸೇರ್ಪಡೆಯಾಗಿರುವ ಬಗ್ಗೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿಕೆ

ರಾಯಚೂರು :ವಿಧಾನಸಭಾ ಚುನಾವಣೆಯಲ್ಲಿ ಸೋತರು ಕೂಡ ಮಾಜಿ ಸಿಎಂ ಜಗದೀಶ್ ಶೆಟ್ಟರ್​ ಅವರನ್ನು ಎಂಎಲ್ ಸಿ ಮಾಡಿದ್ದೆವು.
ಕಾಂಗ್ರೆಸ್​ನಲ್ಲಿ ಸೋತವರಿಗೆ ಯಾರಿಗೂ ಎಂಎಲ್​ಸಿ ಮಾಡಿದ ಉದಾಹರಣೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.

ನಗರದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿರು. ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್​ ಬಂದಾಗ ನಾವು ಗೌರವ ನೀಡಿದ್ದೇವೆ. ಕಾಂಗ್ರೆಸ್ ಬಿಟ್ಟು ಹೋಗಿರುವುದು ಅವರ ವೈಯಕ್ತಿಕ ನಿರ್ಧಾರವಾಗಿದೆ. ಇದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿದೆ. ಯಾರು ಯಾವ ಪಕ್ಷಕ್ಕೆ ಬೇಕಾದರೂ ಹೋಗಬಹುದು. ವ್ಯಕ್ತಿಗಳಿಂದ ಪಕ್ಷ ಬೆಳೆಯಲ್ಲ. ಪಕ್ಷದಿಂದ ವ್ಯಕ್ತಿ ಬೆಳೆಯುತ್ತಾನೆ. ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನ ‌ಇಲ್ಲ. ಶೆಟ್ಟರ್ ಬಿಜೆಪಿಯಿಂದ ಬಂದಿದ್ದರು, ಮತ್ತೆ ಬಿಜೆಪಿಗೆ ಹೋಗಿದ್ದಾರೆ. ಆದರೆ ಲಕ್ಷ್ಮಣ ಸವದಿ ಹೋಗುವುದು ಊಹಾಪೋಹ ಎಂದರು.

ಕಾಂಗ್ರೆಸ್ ನಿಂದ ಅನೇಕ ಜನರು ಬಿಜೆಪಿ ಸೇರ್ಪಡೆಯಾಗುತ್ತಾರೆ ಎನ್ನುವ ಬಿಜೆಪಿಯ ನಾಯಕರ ಹೇಳಿಕೆ ಪ್ರಕ್ರಿಯಿಸಿದ ಶರಣಪ್ರಕಾಶ್ ಪಾಟೀಲ್, ಈಗ ಬಿಜೆಪಿಯವರು ಹತಾಶೆರಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಬೇಸತ್ತು, ಜನರು ನಮಗೆ ಅಧಿಕಾರ ನೀಡಿದ್ದಾರೆ. ಬಿಜೆಪಿಯವರಿಗೆ ರಾಜ್ಯದ ಜನರೇ ಮೂಲೆ ಗುಂಪು ಮಾಡಿದ್ದಾರೆ. ಬಿಜೆಪಿಯವರಿಗೆ ಜನರ ಬಳಿಗೆ ಹೋಗಲು ಮುಖವಿಲ್ಲ. ಹಾಗಾಗಿ ಒಬ್ಬರು ನಾಯಕರಿಗೆ ಎಳೆದುಕೊಂಡು ಪಕ್ಷ ಕಟ್ಟುವ ಕೆಲಸ ಶುರು ಮಾಡಿದ್ದಾರೆ. ರಾಜ್ಯದ ಜನರು ಬುದ್ಧಿವಂತರು ಇದ್ದಾರೆ, ಬರುವ ಲೋಕಸಭೆಯಲ್ಲಿ ರಾಜ್ಯದ ಜನರು ಮತ್ತೊಮ್ಮೆ ಪಾಠ ಕಲ್ಲಿಸುತ್ತಾರೆ ಎಂದು ತಿಳಿಸಿದರು.

ರಾಮ ರಾಜ್ಯ ನಿರ್ಮಾಣ ಮಂದಿರ ಕಟ್ಟುವುದರಿಂದ ಆಗುವುದಿಲ್ಲ. ಆಡಳಿತದ ಮುಖಾಂತರ ರಾಮ ರಾಜ್ಯ ಮಾಡಬೇಕು. ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಜನರಿಗೆ ನೀಡಬೇಕು. ಬಡವರ ಹಿತದೃಷ್ಟಿಯಿಂದ ಆಡಳಿತ ನೀಡಬೇಕು, ಆಗ ರಾಮ ರಾಜ್ಯ ಆಗುತ್ತದೆ. ಗುಡಿ ಕಟ್ಟಿ ಅಧಿಕಾರ ಸಿಕ್ಕಾಗ ಶೇ.40ರಷ್ಟು ಭ್ರಷ್ಟಾಚಾರ ಮಾಡಿದರೆ, ಅದು ರಾಮರಾಜ್ಯ ಮಾಡಲು ಆಗುತ್ತಾ ಎಂದು ಶರಣಪ್ರಕಾಶ್ ಪಾಟೀಲ್ ಪ್ರಶ್ನಿಸಿದವರು.

ಇಂಡಿಯಾ ಮೈತ್ರಿಕೂಟದಿಂದ ಮಮತಾ ಬ್ಯಾನರ್ಜಿ ಹೊರಗೆ ಹೋಗಿಲ್ಲ. ಬಿಜೆಪಿ ವಿರುದ್ಧವೇ ನಮ್ಮ ಹೋರಾಟ ಎಂದು ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವ ವಹಿಸಬೇಕೆಂದು ಮಮತಾ ಬ್ಯಾನರ್ಜಿ ಹೇಳಿದ್ದರೆ. ಸ್ಥಾನಗಳ ಹಂಚಿಕೆಯಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ ಎಂದು ಶರಣಪ್ರಕಾಶ್ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಯಾವುದೇ ಒಳ ಜಗಳ ಇಲ್ಲ. ರಾಜಕೀಯ ಪಕ್ಷ ಎಂದರೆ ಒಳಗೆ ವ್ಯತ್ಯಾಸ ಇದ್ದರೆ, ಅದು ರಾಜಕೀಯ ಪಕ್ಷ ಅನ್ನಿಸುತ್ತದೆ. ಏನು ಮೋದಿಯವರ ತರಹ ಏಕವ್ಯಕ್ತಿ ಆಡಳಿತ ಇರಬೇಕಾ?, ನಮ್ಮಲ್ಲಿ ನಿಜವಾದ ಜೀವಂತ ಪ್ರಜಾಪ್ರಭುತ್ವ ಇದೆ. ಕಾಂಗ್ರೆಸ್​ನಲ್ಲಿ ವಿಭಿನ್ನ ಅಭಿಪ್ರಾಯಗಳು ಇವೆ ಎಂದು ಶರಣಪ್ರಕಾಶ್ ಪಾಟೀಲ್ ಸಮಜಾಯಿಷಿ ನೀಡಿದರು.

ಇದನ್ನೂ ಓದಿ :ಶೆಟ್ಟರ್​​​ ಬಿಜೆಪಿ ಸೇರ್ಪಡೆ ವಿಚಾರದಲ್ಲಿ ಸಿದ್ದರಾಮಯ್ಯ ಇಂಟಲಿಜೆನ್ಸಿ ಫೇಲ್‌ ಆಗಿದೆ: ಬಿ.ವೈ.ವಿಜಯೇಂದ್ರ ವ್ಯಂಗ್ಯ

ABOUT THE AUTHOR

...view details