ಕರ್ನಾಟಕ

karnataka

48 ಗಂಟೆಗಳಲ್ಲಿ ಮಗುವಿನ ಚಿಕಿತ್ಸೆಗೆ ದಾನಿಗಳಿಂದ 60.62 ಲಕ್ಷ ಸಂಗ್ರಹ: ಇನ್ಮುಂದೆ ಹಣ ಹಾಕಬೇಡಿ ಎಂದು ತಂದೆ - ತಾಯಿ ಮನವಿ - Just 48 hours collect 60 lakhs

By ETV Bharat Karnataka Team

Published : May 2, 2024, 12:21 PM IST

ಐದು ತಿಂಗಳಿನ ಮಗುವಿನ ಶಸ್ತ್ರ ಚಿಕಿತ್ಸೆಗೆ 50 ಲಕ್ಷ ರೂ ಅಗತ್ಯವಿದೆ ಎಂದು ಎರಡು ದಿನಗಳ ಹಿಂದೆ ಮಂಗಳೂರಿನ ಸಂತೋಷ್ ಪ್ರಿಯಾ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್​ಗೆ ದೇಶ-ವಿದೇಶದ ದಾನಿಗಳು ಹಣದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

DONORS HELPED
ಸಾಮಾಜಿಕ ಕಾರ್ಯಕರ್ತರೊಂದಿಗೆ ಮಗುವಿನ ಪೋಷಕರು (Etv Bharat)

ಮಂಗಳೂರು:ಇಮ್ಯುನೊ ಡಿಫಿಷಿಯನ್ಸಿ ಕಾಯಿಲೆಯಿಂದ ಬಳಲುತ್ತಿದ್ದ ಐದು ತಿಂಗಳಿನ ಮಗುವಿನ ಶಸ್ತ್ರ ಚಿಕಿತ್ಸೆಗೆ 50 ಲಕ್ಷ ರೂ ಅಗತ್ಯವಿದೆ ಎಂದು ಎರಡು ದಿನಗಳ ಹಿಂದೆ ಹೆತ್ತವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್​ಗೆ ದೇಶ - ವಿದೇಶಗಳಿಂದ ದಾನಿಗಳು ಸ್ಪಂದಿಸಿದ್ದಾರೆ. ಮಗುವಿನ ಚಿಕಿತ್ಸೆಗೆ 48 ಗಂಟೆಗಳ ಅವಧಿಯಲ್ಲಿ 60.62 ಲಕ್ಷ ರೂ. ಜಮೆಯಾಗಿದೆ.

ಈ ಮಗುವಿನ ಚಿಕಿತ್ಸೆಗೆ ಅಗತ್ಯವಿದ್ದ ಹಣ ಸಂಗ್ರಹ ಆಗಿರುವುದರಿಂದ ಈ ಖಾತೆಗೆ ಇನ್ನು ಹಣ ನೀಡುವುದು ಬೇಡ ಎಂದು ಮಗುವಿನ ತಂದೆ ತಾಯಿಗಳಾದ ಮಂಗಳೂರಿನ ಕೊಣಾಜೆ ನಿವಾಸಿ ಸಂತೋಷ್ ಮೊಂತೇರೊ ಮತ್ತು ಪ್ರಿಯಾ ಮನವಿ ಮಾಡಿದ್ದಾರೆ.

ಇಮ್ಯುನೊ ಡಿಫಿಷಿಯನ್ಸಿ ಕಾಯಿಲೆ:ಮಗುವಿನ ಚಿಕಿತ್ಸೆಗೆ ಸ್ಪಂದಿಸುವಂತೆ ಸಾಮಾಜಿಕ ಕಾರ್ಯಕರ್ತ ಫಯಾಝ್ ಮಾಡೂರು ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಹಾಕಿದ್ದರು. ಇಮ್ಯುನೊ ಡಿಫಿಷಿಯನ್ಸಿ ಎಂಬ ಮಾರಕ ಕಾಯಿಲೆಯಿಂದ ಮಗು ಬಳಲುತ್ತಿದ್ದು, ಚಿಕಿತ್ಸೆಗೆ ಸಂಬಂಧಿಸಿದಂತೆ ಹೆತ್ತವರು ಸಹಕರಿಸುವಂತೆ ವಿಡಿಯೋ ಮಾಹಿತಿಯನ್ನು ಬಿತ್ತರಿಸಿದ್ದರು.

ಸಂಗ್ರಹ ಚಿತ್ರ (Etv Bharat)

ದೇಶ ವಿದೇಶದಿಂದ ಉತ್ತಮ ಸ್ಪಂದನೆ:ಮಗುವಿನ ತಾಯಿ ಪ್ರಿಯಾ ಅವರ ಮಗುವಿನ ಸ್ಥಿತಿ ಕುರಿತು ನಾರಾಯಣ ಹೃದಯಾಲಯ ಆಸ್ಪತ್ರೆಯಿಂದ ವಿಡಿಯೋ - ರೆಕಾರ್ಡ್ ಮಾಡಿ ವಿವಿಧ ಮಾಧ್ಯಮಗಳಲ್ಲಿ ಮನವಿ ಮಾಡಿದ್ದರು. 48 ಗಂಟೆಗಳಲ್ಲಿ ದೇಶ ವಿದೇಶದಿಂದ ಉತ್ತಮ ಸ್ಪಂದನೆ ಸಿಕ್ಕಿದೆ.

ಒಂದು ರೂ.ಗಳಿಂದ ಒಂದು ಲಕ್ಷ ರೂಪಾಯಿ ವರೆಗೆ ದಾನಿಗಳು ಸಹಾಯ ಮಾಡಿದ್ದಾರೆ. ದಾನಿಗಳಿಂದ ಮಗುವಿನ ತಾಯಿ ಮತ್ತು ತಂದೆಯ ಬ್ಯಾಂಕ್ ಖಾತೆಗೆ ಹಣ ಹರಿದು ಬಂದಿದೆ. ಒಟ್ಟಾರೆ 60. 62 ಲಕ್ಷ ರೂ ಸಂಗ್ರಹವಾಗಿದೆ. ಎಲ್ಲ ಜಾತಿ ಧರ್ಮದ ಸಂಘ - ಸಂಸ್ಥೆಗಳು, ದಾನಿಗಳು ಸಹಾಯ ಹಸ್ತ ನೀಡಿದ್ದಾರೆ ಎಂದು ದಂಪತಿ ಮಾಹಿತಿ ನೀಡಿದ್ದು, ದಾನಿಗಳಿಗೆ ಕೃತಜ್ಞತೆ ಕೂಡಾ ಸಲ್ಲಿಸಿದ್ದಾರೆ.

ನಾರಾಯಣ ಹೃದಯಾಲಯದಲ್ಲಿ ಮಗುವಿಗೆ ಒಂದು ಹಂತದ ಶಸ್ತ್ರ ಚಿಕಿತ್ಸೆ ನಡೆದಿದೆ. ಮಗು ಆರೋಗ್ಯವಾಗಿದೆ ಎಂದು ಮಗುವಿನ ತಂದೆ ತಾಯಿ ಇದೇ ವೇಳೆ ತಿಳಿಸಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಬತ್ತಿದ ಜಲ ಮೂಲಗಳು: ಪ್ರಾಣಿಗಳ ದಾಹ ನೀಗಿಸಲು ಕೆರೆಗೆ ಟ್ಯಾಂಕರ್​ ನೀರು - Tanker Water For wild animals

ಸಾಂಸ್ಕೃತಿಕ ನಗರದಲ್ಲಿ ಗಮನ ಸೆಳೆಯುತ್ತಿರುವ ಹನಿ ಟ್ರೀ: ಇದರ ವಿಶೇಷತೆ ಗೊತ್ತೇ? - Honey Tree

ಹೆಚ್ಚಿದ ಬಿಸಿಲಿನ ಬೇಗೆ : 'ಬೆಂಗಳೂರು ಹುಡುಗರು' ತಂಡದಿಂದ ವಿಶಿಷ್ಟ 'ಕೂಲ್ ಟ್ರೀ' ಅಭಿಯಾನ - Cool Tree campaign

ABOUT THE AUTHOR

...view details