ಕರ್ನಾಟಕ

karnataka

ನಾಳಿನ ಲೋಕಸಭಾ ಚುನಾವಣೆ ಮತದಾನಕ್ಕೆ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ - Mandya election

By ETV Bharat Karnataka Team

Published : Apr 25, 2024, 11:00 AM IST

Updated : Apr 25, 2024, 1:58 PM IST

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಾಳೆ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ಎಲ್ಲ ರೀತಿಯ ತಯಾರಿ ನಡೆದಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.

mandya
ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆ

ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಮಂಡ್ಯ:ಏಪ್ರಿಲ್​ 26 (ನಾಳೆ) ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6ರ ವರೆಗೆ ಮತದಾನ ಪ್ರಕ್ರಿಯೆ ನಡೆಯುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಬುಧವಾರ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ.

  • ಮಂಡ್ಯ ಜಿಲ್ಲೆಯಲ್ಲಿ ಒಟ್ಟು ಮತಗಟ್ಟೆಗಳು - 2,076.
  • ಸೂಕ್ಷ್ಮ ಮತಗಟ್ಟೆಗಳ ಸಂಖ್ಯೆ - 693.
  • ಮಂಡ್ಯ ಜಿಲ್ಲೆಯಲ್ಲಿ ಒಟ್ಟು ಮತದಾರರ ಸಂಖ್ಯೆ- 17,79,243.
  • ಪುರುಷ ಮತದಾರರು - 8,76,112.
  • ಮಹಿಳಾ ಮತದಾರರು - 9,02,963.
  • ಇತರೆ ಮತದಾರರು - 168.

ಮಂಡ್ಯದಲ್ಲಿ ನಿನ್ನೆ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಮತಗಟ್ಟೆಗಳ 200 ಮೀ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಾಗಿದ್ದು, ರಾಜಕೀಯ ಟೆಂಟ್​ಗೆ ನಿಷೇಧ ಹೇರಲಾಗಿದೆ. ಮತಗಟ್ಟೆಯಲ್ಲಿ ಮೂರು ಜನ ಏಜೆಂಟ್ ನೇಮಕ ಮಾಡಿಕೊಳ್ಳುವ ಅವಕಾಶ ಮಾಡಲಾಗಿದೆ. ನಿನ್ನೆ ಸಂಜೆ 5 ಗಂಟೆಯಿಂದ ಏ.27ರ ಸಂಜೆ 6ರ ವರೆಗೆ ಜಿಲ್ಲಾದ್ಯಂತ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಹಾಗೇ ಜಿಲ್ಲಾದ್ಯಂತ 3,366 ಪೊಲೀಸ್ ಸಿಬ್ಬಂದಿಗಳ ನಿಯೋಜನೆ. ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗಾಗಿ ವೀಲ್​ ಚೇರ್​ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲ ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶಾಮಿಯಾನದ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ. ಮತಗಟ್ಟೆಗಳಲ್ಲಿ ಮೊಬೈಲ್ ನಿಷೇಧಿಸಿದ್ದು, ಒಬ್ಬ PROಗೆ ಮಾತ್ರ ಮೊಬೈಲ್​ ಬಳಕೆಗೆ ಅವಕಾಶವಿದೆ.

ಚುನಾವಣೆಗಾಗಿ ಜಿಲ್ಲಾದ್ಯಂತ 373 ವಾಹನಗಳ ಬಳಕೆ, 8,396 ಮತದಾನ ಸಿಬ್ಬಂದಿ ನೇಮಕ ಮಾಡಲಾಗಿದೆ. ಹಾಗೇ ನಾಳೆ ನಡೆಯುವ ಸಂತೆ, ಜಾತ್ರೆ, ಉತ್ಸವಕ್ಕೆ ನಿಷೇಧ ಹೇರಲಾಗಿದೆ. ಚೆಕ್ ಪೋಸ್ಟ್​ಗಳು ಮತಷ್ಟು ಅಲರ್ಟ್ ಆಗಿದ್ದು, ಅಕ್ರಮ ಹಣ ಸಾಗಣೆ ಕಂಡು ಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಹಾಗೇ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚೆರಿಕೆ ವಹಿಸಲಾಗಿದ್ದು, ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಲೋಕಸಭಾ ಚುನಾವಣೆಗೆ ಮಾಸ್ಟರಿಂಗ್​/ಡಿ ಮಾಸ್ಟರಿಂಗ್​ ಕೇಂದ್ರವಿರಲಿದೆ.

  • ಮಳವಳ್ಳಿ ಶಾಂತಿ ಪಿಯು ಕಾಲೇಜು.
  • ಮದ್ದೂರು ಪಟ್ಟಣದ ಹೆಚ್ಕೆ ವೀರಣ್ಣಗೌಡ ಕಾಲೇಜು.
  • ಪಾಂಡವಪುರದ PSSK ಹೈಸ್ಕೂಲ್.
  • ಮಂಡ್ಯದ ವಿಶ್ವವಿದ್ಯಾಲಯ.
  • ಶ್ರೀರಂಗಪಟ್ಟಣದ ಪಿಯು ಕಾಲೇಜು.
  • ನಾಗಮಂಗಲ ಸರ್ಕಾರಿ ಪಿಯು ಕಾಲೇಜು.
  • ಕೆ.ಆರ್.ಪೇಟೆಯ ಕೃಷ್ಣ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್.
  • ಕೆ.ಆರ್.ನಗರದ ಸರ್ಕಾರಿ ಡಿಗ್ರಿ ಕಾಲೇಜು.

ಇದನ್ನೂ ಓದಿ:ನಾಳೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮತದಾನ: ಎಲ್ಲ ಸಿದ್ಧತೆಗಳು, ನಿಯಮಗಳ ಬಗ್ಗೆ ಚುನಾವಣಾಧಿಕಾರಿ ಮಾಹಿತಿ - Chikkaballapur

Last Updated : Apr 25, 2024, 1:58 PM IST

ABOUT THE AUTHOR

...view details