ಕರ್ನಾಟಕ

karnataka

ಮಂಗಳೂರು: ಹೃದಯಾಘಾತದಿಂದ ಪತ್ನಿ ಸಾವು, ಪತಿ ಆತ್ಮಹತ್ಯೆ

By ETV Bharat Karnataka Team

Published : Feb 29, 2024, 11:00 PM IST

ಹೃದಯಾಘಾತದಿಂದ ಪತ್ನಿ ಮೃತಪಟ್ಟ ನಂತರ ಪತಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಸೇಸಪ್ಪ ಪೂಜಾರಿ, ಮೀನಾಕ್ಷಿ
ಸೇಸಪ್ಪ ಪೂಜಾರಿ, ಮೀನಾಕ್ಷಿ

ಮಂಗಳೂರು:ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಪತ್ನಿ ಮೃತಪಟ್ಟ ಸುದ್ದಿ ತಿಳಿದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ರಾತ್ರಿ ಗ್ರಾಮ ಚಾವಡಿಯಲ್ಲಿ ನಡೆದಿದೆ.

ಗ್ರಾಮಚಾವಡಿಯ ಸೇಸಪ್ಪ ಪೂಜಾರಿಯವರ ಪತ್ನಿ ಮೀನಾಕ್ಷಿಯವರಿಗೆ ಕಳೆದ ಕೆಲ ತಿಂಗಳ ಹಿಂದೆ ಹೃದಯಾಘಾತವಾಗಿದ್ದು, ಬಳಿಕ ಗುಣಮುಖವಾಗಿದ್ದರು. ಆದರೆ ಎರಡು ದಿನದ ಹಿಂದೆ ಅವರಿಗೆ ಮತ್ತೆ ಎದೆನೋವು ಕಾಣಿಸಿಕೊಂಡಿದೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಬುಧವಾರ ರಾತ್ರಿ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಇದನ್ನು ತಿಳಿದು ಸೇಸಪ್ಪ ಪೂಜಾರಿ ಮನನೊಂದು ಆಸ್ಪತ್ರೆಯಿಂದ ಮನೆಗೆ ಬಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ತಿಳಿದು ತಕ್ಷಣ ನೆರೆಮನೆಯವರು ಆಸ್ಪತ್ರೆಗೆ ಕೊಂಡೊಯ್ದರೂ ದಾರಿಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.

ಶಾಲಾ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಸೇಸಪ್ಪ ಪೂಜಾರಿ ಹಾಗೂ ಮೀನಾಕ್ಷಿ ದಂಪತಿಗೆ ಮಕ್ಕಳಿರಲಿಲ್ಲ. ಗುರುವಾರ ಪತಿ, ಪತ್ನಿಯ ಮೃತದೇಹಕ್ಕೆ ಜೊತೆಯಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಗಂಗಾವತಿ: ಕೋರ್ಟ್​ ಆವರಣದಲ್ಲಿ ಹೃದಯಾಘಾತ, ಬಡವರಿಗೆ ನ್ಯಾಯ ಕೊಡಿಸುತ್ತಿದ್ದ ವಕೀಲ ವಿಧಿವಶ

ABOUT THE AUTHOR

...view details