ಕರ್ನಾಟಕ

karnataka

ಗೀತಾ ಶಿವರಾಜಕುಮಾರ್​ರಿಂದ ಸಕ್ರೆಬೈಲು ಆನೆ ಬಿಡಾರದಲ್ಲಿ ರಿಲ್ಯಾಕ್ಸ್​; ಸಿಗಂದೂರಿನಲ್ಲಿ ಬಿಫಾರಂಗೆ ಪೂಜೆ - Geetha Shivarajkumar

By ETV Bharat Karnataka Team

Published : Apr 14, 2024, 10:53 PM IST

Updated : Apr 14, 2024, 11:00 PM IST

ಸಕ್ರೆಬೈಲು ಆನೆ ಬಿಡಾರಕ್ಕೆ ಗೀತಾ ಶಿವರಾಜಕುಮಾರ್ ತಮ್ಮ ಕುಟುಂಬದ ಸಮೇತ ಭೇಟಿ ನೀಡಿದರು.

geetha-shivarajkumar
ಗೀತಾ ಶಿವರಾಜ್ ಕುಮಾರ್

ಗೀತಾ ಶಿವರಾಜಕುಮಾರ್​ರಿಂದ ಸಕ್ರೆಬೈಲು ಆನೆ ಬಿಡಾರದಲ್ಲಿ ರಿಲ್ಯಾಕ್ಸ್

ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ತಮ್ಮ ಪ್ರಚಾರದ ನಡುವೆ ಕುಟುಂಬ ಸಮೇತ ರಿಲ್ಯಾಕ್ಸ್‌ ಮೂಡ್​ಗೆ ಜಾರಿದರು. ಭಾನುವಾರ ಶಿವಮೊಗ್ಗದಿಂದ ರಾಜ್ಯದ ಪ್ರಸಿದ್ಧ ಆನೆ ಬಿಡಾರವಾದ ಸಕ್ರೆಬೈಲು ಬಿಡಾರಕ್ಕೆ ತಮ್ಮ ಕುಟುಂಬ ಸಮೇತ ಭೇಟಿ ನೀಡಿದ್ದರು.

ಪತಿ ಶಿವರಾಜಕುಮಾರ್ ತಮ್ಮ ಇಬ್ಬರು ಹೆಣ್ಣು ಮಕ್ಕಳು, ಅಳಿಯ, ಮೊಮ್ಮಕ್ಕಳು ಸೇರಿದಂತೆ ಸಹೋದರಿಯರು ಹಾಗೂ ಸಹೋದರ ಮಧು ಬಂಗಾರಪ್ಪ ಅವರ ಕುಟುಂಬದ ಸಮೇತ ಭೇಟಿ ನೀಡಿದ್ದರು. ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ‌ ನೀಡಿದ ವೇಳೆ ಆನೆಗಳಿಗೆ ಕಬ್ಬು ನೀಡಿದರು. ಜೊತೆಗೆ ಅಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು. ನಂತರ ಆನೆ ಸಾಗರನ ಮೇಲೆ ಸವಾರಿ ನಡೆಸಿದರು. ನಂತರ ತುಂಗಾ ಅಣೆಕಟ್ಟೆಯ ಹಿನ್ನೀರಿನಲ್ಲಿ ಬೋಟಿಂಗ್​ನಲ್ಲಿ ವಿಹರಿಸಿದರು.

ಸಿಗಂದೂರು ಚೌಡೇಶ್ವರಿ ಮುಂದೆ ಬಿಫಾರಂಗೆ ಪೂಜೆ

ಸಿಗಂದೂರು ಚೌಡೇಶ್ವರಿ ಮುಂದೆ ಬಿಫಾರಂಗೆ ಪೂಜೆ:ಸಕ್ರೆಬೈಲು ಆನೆ ಬಿಡಾರದಿಂದ ಗೀತಾ ಶಿವರಾಜಕುಮಾರ್ ಅವರು ಸಾಗರ ತಾಲೂಕು ಶರಾವತಿ ಹಿನ್ನೀರಿನ ಸಿಗಂದೂರಿನ ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ, ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ತಮ್ಮ ಬಿ ಫಾರಂಗೆ ಪೂಜೆ ಸಲ್ಲಿಸಿ, ತಮ್ಮ ಗೆಲುವಿಗೆ ತಾಯಿ ಚೌಡೇಶ್ವರಿ ಆಶೀರ್ವಾದ ಮಾಡುವಂತೆ ಬೇಡಿಕೊಂಡರು. ನಂತರ ಸೊರಬದ ಬಂಗಾರ ಧಾಮಕ್ಕೆ ಭೇಟಿ ನೀಡಿದ್ದರು.

ಇದನ್ನೂ ಓದಿ :ಕಳೆದ ಬಾರಿಗಿಂತ ಈ ಬಾರಿ ಗೆಲುವಿನ ವಿಶ್ವಾಸ ಹೆಚ್ಚಿದೆ : ಈಟಿವಿ ಭಾರತದೊಂದಿಗೆ ಗೀತಾ ಶಿವರಾಜಕುಮಾರ್ ಮಾತು - GEETA SHIVARAJ KUMAR INTERVIEW

Last Updated : Apr 14, 2024, 11:00 PM IST

ABOUT THE AUTHOR

...view details