ಕರ್ನಾಟಕ

karnataka

ಕಾಫಿನಾಡಲ್ಲಿ ಮೊಗ್ಗಿನ ಜಡೆಯಂತೆ ಅರಳಿರುವ ಕಾಫಿ ಹೂವಿಗೆ ಮನಸೋತ ಪ್ರವಾಸಿಗರು - coffee flower

By ETV Bharat Karnataka Team

Published : Apr 30, 2024, 1:03 PM IST

ಕಾಫಿನಾಡಲ್ಲಿ ಕಾಫಿ ಹೂವುಗಳ ದರ್ಬಾರ್​ ನಡೆಯುತ್ತಿದೆ. ಸರಾಗ ಮಳೆಯಾಗದಿದ್ದರೂ ಮೊನ್ನೆಯಿಂದ ಸುರಿಯುತ್ತಿರುವ ಮಳೆಗೆ ತೋಟದಲ್ಲಿ ಕಾಫಿ ಹೂವುಗಳು ಅರಳಿ ನಿಂತಿವೆ.

ಕಾಫಿ ಹೂವಿನ ಸುವಾಸನೆ
ಕಾಫಿ ಹೂವಿನ ಸುವಾಸನೆ

ಮೊಗ್ಗಿನ ಜಡೆಯಂತೆ ಅರಳಿರುವ ಕಾಫಿ ಹೂವಿಗೆ ಮನಸೋತ ಪ್ರವಾಸಿಗರು

ಚಿಕ್ಕಮಗಳೂರು:ಚಿಕ್ಕಮಗಳೂರು ಜಿಲ್ಲೆ ತುಂಬಾ ಈಗ ಕಾಫಿ ಹೂವಿನ ಘಮ ಘಮ ಸುವಾಸನೆ. ಕಾಫಿ ತೋಟದಲ್ಲಿ ಹಾಲಿನಂತೆ ಅರಳಿನಿಂತಿರುವ ಕಾಫಿ ಹೂಗಳು ದಾರಿಹೋಕರು ಹಾಗೂ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿವೆ. ದಾರಿಯ ಇಕ್ಕೆಲದಲ್ಲಿ ತಮ್ಮ ಸೌಂದರ್ಯವನ್ನು ಅನಾವರಣಗೊಳಿಸುತ್ತಿವೆ. ಇದನ್ನು ನೋಡಿ ಸ್ಥಳೀಯರು ಹಾಗೂ ಪ್ರವಾಸಿಗರು ಮನ ಸೋತಿದ್ದಾರೆ.

ಈ ಕಾಫಿ ಹೂವಿನ ಪರಿಮಳ ಹಾಗೂ ಸುಗಂಧದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ರೊಬೊಸ್ಟಾ ಹಾಗೂ ಅರೇಬಿಕಾ ಕಾಫಿಯನ್ನು ಬೆಳೆಯಲಾಗುತ್ತದೆ. ಕಳೆದ ಕೆಲ ದಿನಗಳ ಹಿಂದೇ ಸುರಿದ ಮಳೆಯಿಂದ ಕಾಫಿ ಗಿಡಗಳಲ್ಲಿ ಹೂಗಳು ಅರಳಿ ನಿಂತಿದ್ದು, ತನ್ನ ಸುವಾಸನೆ ಎಲ್ಲೆಡೆ ಬೀರಲು ಪ್ರಾರಂಭ ಮಾಡಿದೆ. ತಣ್ಣನೆಯ ವಾತಾವರಣದ ಮಧ್ಯೆ ಈ ಹೂಗಳ ಚೆಲುವು ಪ್ರತಿಯೊಬ್ಬರನ್ನು ಮಂತ್ರ ಮುಗ್ಧರನ್ನಾಗಿಸಿದೆ.

ಕಳೆದ ವರ್ಷ ಮಲೆನಾಡು ಭಾಗದಲ್ಲಿ ಒಂದು ಮಟ್ಟಿಗೆ ಧಾರಾಕಾರ ಮಳೆ ಸುರಿದು ಬಹು ಬೇಗನೇ ಕಾಫಿನಾಡು ಹೂಗಳು ಅರಳಿ ನಿಂತಿದ್ದವು. ಈ ವರ್ಷ ಬರಗಾಲ ಆವರಿಸಿ ಸರಿಯಾಗಿ ಮಳೆ ಇನ್ನೂ ಪ್ರಾರಂಭವಾಗಿಲ್ಲ. ಆದರೆ ಕಳೆದ ಒಂದು ವಾರದಿಂದ ಮಲೆನಾಡು ಸುತ್ತಮುತ್ತ ಪ್ರದೇಶದಲ್ಲಿ ಸುರಿದ ಮಳೆಯಿಂದ ಕಾಫಿ ಗಿಡದಲ್ಲಿ ಮೊಗ್ಗಿನ ಜಡೆಯಂತೆ ಹೂಗಳು ಅರಳಿ ನಿಂತಿವೆ.

ಕಾಫಿ ಬೆಳೆಗೆ ಉತ್ತಮ ಬೆಲೆ ಇದ್ದು, ಕಾಫಿ ಬೆಳೆಗಾರರು ಇದರಿಂದ ಸ್ವಲ್ಪ ಸಂತೋಷದ ನಿಟ್ಟಿಸಿರು ಬಿಡುವಂತಾಗಿದೆ. ಕಾಫಿ ಗಿಡಗಳ ಮೇಲೆ ಮಂಜಿನ ಹನಿಗಳಂತೆ ಸಾಲು ಸಾಲಾಗಿ ಅರಳಿ ನಿಂತಿರುವ ಹೂವಿನ ದಳಗಳು ಪ್ರತಿಯೊಬ್ಬರಲ್ಲೂ ಸಂತೋಷದ ಜೊತೆ ಪ್ರಕೃತಿಯ ಪ್ರೇಮ ಮೂಡಿಸುತ್ತಿದ್ದು, ವಿಭಿನ್ನ ಹಾಗೂ ವಿಶೇಷ ಲೋಕಕ್ಕೆ ಹೋಗಿ ಬಂದಂತೆ ಭಾಸವಾಗುತ್ತಿದೆ.

ಸದ್ಯ ಈ ಸಮಯದಲ್ಲಿ ಕಾಫಿ ನಾಡಿಗೆ ಬರುವ ಪ್ರವಾಸಿಗರಿಗೆ ಈ ಕಾಫಿ ಹೂಗಳು ವಿಶೇಷ ಅನುಭವ ನೀಡುತ್ತಿದ್ದು, ಕಾಫಿ ಹೂಗಳ ಜೊತೆ ಸುಮಧುರ ಕ್ಷಣಗಳನ್ನು ಕಳೆಯೋದಕ್ಕೆ ಹೇಳಿ ಮಾಡಿಸಿದಂತಿದೆ. ಒಟ್ಟಾರೆಯಾಗಿ, ಕಾಫಿ ಗಿಡಗಳ ಮೇಲೆ ಮಂಜಿನ ಹನಿಗಳು ಪೋಣಿಸಿದಂತೆ ಅರಳಿಕೊಂಡಿರೋ ಹೂಗಳು ಕಾಫಿನಾಡ ಇತಿಹಾಸದ ಬಗ್ಗೆ ಹೇಳುತ್ತಿದ್ದು, ಇದರ ಸೌಂದರ್ಯ ಸವಿಯುವುದೇ ವಿಶೇಷ ಅನುವಭ.

ಇದನ್ನೂ ಓದಿ:ಒಂದು ಎಕರೆ ಜಮೀನಿನಲ್ಲಿ ಮಾವಿನ ಬೆಳೆ: ವರ್ಷಕ್ಕೆ 5 ಟನ್​ ಮಾರಾಟ, ಈ ಯಶಸ್ವಿ ರೈತನ ಗುಟ್ಟೇನು? - Mango Cultivation

ABOUT THE AUTHOR

...view details