ಕರ್ನಾಟಕ

karnataka

ಬೆಳ್ತಂಗಡಿ: ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟದಿಂದ ಮೂವರು ಸಾವು: ಸ್ಥಳಕ್ಕೆ ಎಸ್​ಪಿ ಭೇಟಿ, ಪರಿಶೀಲನೆ

By ETV Bharat Karnataka Team

Published : Jan 28, 2024, 11:00 PM IST

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಬಳಿಯ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿದ ಘಟನಾ ಸ್ಥಳಕ್ಕೆ ಎಸ್​ಪಿ ರಿಷ್ಯಂತ್ ಭೇಟಿ ನೀಡಿದರು.

explosion-in-firecracker-manufacturing-unit-sp-rishyanth-visited-the-spot
ಪಟಾಕಿ ತಯಾರಿಕಾ ಘಟಕದಲ್ಲಿ ಸ್ಪೋಟದಿಂದ ಮೂವರು ಸಾವು: ಸ್ಥಳಕ್ಕೆ ಎಸ್​ಪಿ ಭೇಟಿ, ಪರಿಶೀಲನೆ

ಬೆಳ್ತಂಗಡಿ:ತಾಲೂಕಿನ ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಟಾಕಿ ತಯಾರಿಕಾ ಘಟಕದಲ್ಲಿ ಇಂದು ಸಂಭವಿಸಿದ ಸ್ಫೋಟದಿಂದ ಮೂವರು ಮೃತಪಟ್ಟ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಿಷ್ಯಂತ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಸ್ಫೋಟ ಯಾಕಾಯ್ತು?, ಏನಾಯ್ತು ಅನ್ನುವ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಕುಕ್ಕೇಡಿ ಗ್ರಾಮ ಪಂಚಾಯತಿಯ ಗೊಳಿಯಂಗಡಿ ಬಳಿ ಕಲ್ಲಾಜೆ ಎಂಬಲ್ಲಿ ಸಾಲಿಡ್ ಫೈರ್ ವರ್ಕ್ ಎಂಬ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಮೃತರನ್ನು ಕೇರಳ ಮೂಲದ ವರ್ಗೀಸ್ (62), ಸ್ವಾಮಿ (60) ಹಾಗೂ ಹಾಸನದ ಅರಿಸೀಕೆರೆ ಮೂಲದ ಚೇತನ್ (24) ಎಂದು ಗುರುತಿಸಲಾಗಿದೆ ಎಂದು ಎಸ್​ಪಿ ರಿಷ್ಯಂತ್ ತಿಳಿಸಿದರು.

ಇಂದು ಸಂಜೆ ಸುಮಾರು 5.30ರ ಸುಮಾರಿಗೆ ಈ ದುರಂತ ಸಂಭವಿಸಿದೆ. 50 ಸೆನ್ಸ್ ಸ್ಥಳದಲ್ಲಿ ಸಯ್ಯದ್ ಬಶೀರ್ ಎಂಬುವರು ಪಟಾಕಿ ತಯಾರಿಕೆ ಮಾಡಲು ಪರವಾನಿಗೆ ಪಡೆದಿದ್ದರು‌. 2011-2012ರಲ್ಲಿ ಪಡೆದಿರುವ ಪರವಾನಿಗೆ 2019ರಲ್ಲಿ ನವೀಕರಣ ಆಗಿದೆ. 2024ರ ಮಾರ್ಚ್​ವರೆಗೂ ಲೈಸೆನ್ಸ್ ಸಿಂಧುತ್ವವಿದೆ. ಬೇಡಿಕೆಗೆ ತಕ್ಕಂತೆ ಪಟಾಕಿ ಇಲ್ಲಿ ಮಾಡಲಾಗುತ್ತಿತ್ತು ಅನ್ನುವ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಅವರು ವಿವರಿಸಿದರು.

ಇದೇ ವೇಳೆ, ಪಟಾಕಿ ತಯಾರಿಸುವಾಗ ಯಾವ ಕಾರಣಕ್ಕೆ ಸ್ಫೋಟಗೊಂಡಿದೆ ಎಂಬ ಕಾರಣ ಇನ್ನೂ ತಿಳಿದು ಬಂದಿಲ್ಲ. ಮೊಬೈಲ್ ಫಾರೆನ್ಸಿಕ್ ಟೀಮ್, ಡಿಪಾರ್ಟ್‌ಮೆಂಟ್ ಆಫ್ ಎಕ್ಸ್‌ಪೋಸಿವ್ ತಂಡದ ಮೂಲಕ ಸ್ಥಳದಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ಬೆಳ್ತಂಗಡಿ: ಸುಡುಮದ್ದು ತಯಾರಿಸುವ ಘಟಕದಲ್ಲಿ ಸ್ಫೋಟ, ಮೂವರು ಸಾವು

ABOUT THE AUTHOR

...view details