ಕರ್ನಾಟಕ

karnataka

ನಮ್ಮ ಮೆಟ್ರೋ ಕಾರಿಡಾರ್‌ ವಿಸ್ತರಣೆ: ಕಾರ್ಯ ಸಾಧ್ಯತಾ ಅಧ್ಯಯನ ವರದಿ ತಯಾರಿಕೆಗೆ ಟೆಂಡರ್ ಅಹ್ವಾನ

By ETV Bharat Karnataka Team

Published : Feb 25, 2024, 9:52 PM IST

ನಮ್ಮ ಮೆಟ್ರೊ ತನ್ನ ಕಾರಿಡಾರ್‌ಗಳ ಮಾರ್ಗವನ್ನು ವಿಸ್ತರಿಸಲು ಕಾರ್ಯ ಸಾಧ್ಯತಾ ಅಧ್ಯಯನ ವರದಿ ತಯಾರಿಸಲು ಬಿಎಂಆರ್​ಸಿಎಲ್​ ಟೆಂಡರ್ ಆಹ್ವಾನಿಸಿದೆ. ಮಾರ್ಚ್ 27ರ ವರೆಗೆ ಬಿಡ್‌ಗಳನ್ನು ಸಲ್ಲಿಸಲು ಅವಕಾಶ ನೀಡಿದೆ.

our metro
ನಮ್ಮ ಮೆಟ್ರೊ

ಬೆಂಗಳೂರು:ನಮ್ಮ ಮೆಟ್ರೋ ತನ್ನ ಕಾರಿಡಾರ್‌ಗಳ ಮಾರ್ಗವನ್ನು ವಿಸ್ತರಿಸಲು ಕಾರ್ಯ ಸಾಧ್ಯತಾ ಅಧ್ಯಯನ ವರದಿ ತಯಾರಿಸಲು ಟೆಂಡರ್ ಆಹ್ವಾನಿಸಿದೆ. ಮಾರ್ಚ್ 27ರ ವರೆಗೆ ಬಿಡ್‌ಗಳನ್ನು ಸಲ್ಲಿಸಲು ಅವಕಾಶವಿದ್ದು, ಅಂದೇ ಅವುಗಳನ್ನು ತೆರೆಯಲಾಗುವುದು. ಆರು ತಿಂಗಳಲ್ಲಿ ಕಾರ್ಯಸಾಧ್ಯತಾ ಅಧ್ಯಯನ ವರದಿಯನ್ನು ಸಲ್ಲಿಸಲು ಗಡುವು ನೀಡಲಾಗುವುದು ಎಂದು ಬಿಎಮ್​ಆರ್​ಸಿಎಲ್​ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಾರ್ಯಸಾಧ್ಯತಾ ಅಧ್ಯಯನ ವರದಿಯೊಂದಿಗೆ ನಿರ್ಮಾಣದ ಅಂದಾಜು ವೆಚ್ಚ, ಸಂಚಾರ ಸರ್ವೆ, ಮೆಟ್ರೋ ಮಾರ್ಗಗಳ ಅಲೈನ್‌ಮೆಂಟ್, ಭೂಸ್ವಾಧೀನ, ಭೂಮಿ ಪಡೆಯಲು ಎದುರಾಗುವ ಸಮಸ್ಯೆಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ಒದಗಿಸುವಂತೆ ಮಾಹಿತಿ ನೀಡಲಾಗಿದೆ.

ಮೆಟ್ರೋ ರೈಲು ಮಾರ್ಗ ವಿಸ್ತರಣೆ ಸಂಬಂಧ ಎರಡು ಪ್ಯಾಕೇಜ್‌ಗಳನ್ನು ವಿಂಗಡಿಸಲಾಗಿದೆ. ಒಂದನೇ ಹಂತದ ಪ್ಯಾಕೇಜ್ ನಲ್ಲಿ 50 ಕಿ.ಮೀ ಉದ್ದದ ಮೂರು ಕಾರಿಡಾರ್ ಮಾರ್ಗಗಳನ್ನು ಒಳಗೊಂಡಿದೆ. ಎರಡನೇ ಹಂತದ ಪ್ಯಾಕೇಜ್‌ನಲ್ಲಿ 68 ಕಿ.ಮೀ ಮಾರ್ಗದ ನಿರ್ಮಾಣವನ್ನು ಪ್ರಸ್ತಾಪಿಸಲಾಗಿದೆ.

ಇದು ಯೋಜನೆಯ ಮೊದಲ ಹೆಜ್ಜೆಯಾಗಿದ್ದು, ಕಾರ್ಯ ಸಾಧ್ಯತಾ ಅಧ್ಯಯನ ವರದಿಯನ್ನು ಸರ್ಕಾರ ಒಪ್ಪಿದ ನಂತರ ವಿಸ್ತೃತ ಯೋಜನಾ ವರದಿ ತಯಾರಿಸಲಾಗುತ್ತದೆ. ನಮ್ಮ ಮೆಟ್ರೋದ 4ನೇ ಹಂತದಲ್ಲಿ 61 ಕಿ.ಮೀ. ನಾಲ್ಕು ವಿಸ್ತರಣಾ ಮಾರ್ಗ, 68 ಕಿ.ಮೀ ಉದ್ದದ ಹೊಸ ಒಂದು ಮಾರ್ಗವನ್ನು ರಾಜ್ಯ ಸರ್ಕಾರ ಜನವರಿಯಲ್ಲಿ ಪ್ರಸ್ತಾಪಿಸಿತ್ತು. ಆದರೆ ತುಮಕೂರು ರಸ್ತೆಯಲ್ಲಿನ ಮಾದಾವರದಿಂದ ಕುಣಿಗಲ್ ಕ್ರಾಸ್‌ವರೆಗಿನ 11 ಕಿ.ಮೀ ಮಾರ್ಗವನ್ನು ಕಾರ್ಯಸಾಧ್ಯತಾ ಅಧ್ಯಯನ ವರದಿಯ ಟೆಂಡರ್‌ನಲ್ಲಿ ಕೈಬಿಡಲಾಗಿದೆ.

118 ಕಿ. ಮೀ. ಉದ್ದದ ನಮ್ಮ ಮೆಟ್ರೋ ವಿಸ್ತರಣೆ ವಿವರ: ಆನೇಕಲ್, ಅತ್ತಿಬೆಲೆ, ಸರ್ಜಾಪುರ, ವರ್ತೂರು ಮತ್ತು ಕಾಡುಗೋಡಿ ಟ್ರೀ ಪಾರ್ಕ್‌ವರೆಗೆ ರೈಲು ಮಾರ್ಗ ನಿರ್ಮಿಸಲು ಚಿಂತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯ ಸಾಧ್ಯತಾ ವರದಿ ತಯಾರಿಸಲಾಗುತ್ತಿದೆ.

50 ಕಿಲೋ ಮೀಟರ್ ಮಾರ್ಗ: ಚಲ್ಲಘಟ್ಟ- ಬಿಡದಿ, ರೇಷ್ಮೆ ಸಂಸ್ಥೆಯ- ಹಾರೋಹಳ್ಳಿ ಮತ್ತು ಬೊಮ್ಮಸಂದ್ರ- ಅತ್ತಿಬೆಲೆ.
68 ಕಿ.ಮೀ ಮಾರ್ಗ: ಕಾಳೇನ ಅಗ್ರಹಾರ- ಜಿಗಣಿ- ಆನೇಕಲ್- ಅತ್ತಿಬೆಲೆ- ಸರ್ಜಾಪುರ- ವರ್ತೂರು- ಕಾಡುಗೋಡಿ.

ಇದನ್ನೂಓದಿ:ಬೆಂಗಳೂರು: ಇನ್ಮುಂದೆ ಬೆಳಗ್ಗೆ 5 ಗಂಟೆಯಿಂದ ನಮ್ಮ ಮೆಟ್ರೋ ಸೇವೆ, ಪ್ರತಿ 3 ನಿಮಿಷಕ್ಕೊಂದು ರೈಲು ಸಂಚಾರ

ABOUT THE AUTHOR

...view details