ಕರ್ನಾಟಕ

karnataka

ಅಖಾಡಕ್ಕೆ ಇಳಿದಿದ್ದೇವೆ ಬರುತ್ತೇವೆ, ಜಯಗಳಿಸುತ್ತೇವೆ: ನಟ ಶಿವರಾಜ್ ಕುಮಾರ್

By ETV Bharat Karnataka Team

Published : Mar 11, 2024, 6:14 PM IST

ಚುನಾವಣಾ ಅಖಾಡಕ್ಕೆ ಬಂದ ಮೇಲೆ ಫೇಸ್​ ಮಾಡಬೇಕು. ಯಾವುದೇ ಕ್ಷೇತ್ರವಿರಲಿ ಆತ್ಮವಿಶ್ವಾಸದಿಂದ ನುಗ್ಗಬೇಕು ಎಂದು ನಟ ಶಿವರಾಜ್​ ಕುಮಾರ್ ತಮ್ಮ ಪತ್ನಿ ಗೀತಾ ಅವರನ್ನು ಹುರಿದುಂಬಿಸುವ ಮಾತುಗಳನ್ನಾಡಿದ್ದಾರೆ.

ನಟ ಡಾ ಶಿವರಾಜ್ ಕುಮಾರ್
ನಟ ಡಾ ಶಿವರಾಜ್ ಕುಮಾರ್

ನಟ ಡಾ ಶಿವರಾಜ್ ಕುಮಾರ್

ದಾವಣಗೆರೆ : ಕರ್ನಾಟಕ ಯಾರ ಭದ್ರ ಕೋಟೆಯೂ ಅಲ್ಲ. ಅದು ಇಂಪಾರ್ಟೆಂಟ್ ಅಲ್ಲ. ಒಟ್ಟಿನಲ್ಲಿ ಅಖಾಡಕ್ಕೆ ಇಳಿದಿದ್ದೇವೆ ಬರ್ತೇವೆ, ಜಯಗಳಿಸುತ್ತೇವೆ ಎಂದು ಪತ್ನಿ ಗೀತಾ ಶಿವರಾಜ್ ಕುಮಾರ್ ಪರ ಶಿವರಾಜ್ ಕುಮಾರ್ ಅವರು ಗೆಲುವಿನ ಮಾತನಾಡಿದರು.

ದಾವಣಗೆರೆಯಲ್ಲಿ 'ಕರಟಕ ದಮನಕ' ಚಿತ್ರದ ಪ್ರಮೋಷನ್​ಗಾಗಿ ಆಗಮಿಸಿದ ಅವರು, ಗೀತಾ ಶಿವರಾಜ್ ಕುಮಾರ್ ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರವಾಗಿ ಮಾತನಾಡಿದರು. ಲೋಕಸಭಾ ಚುನಾವಣೆ ತಯಾರಿ ಆಗ್ಬೇಕಾಗಿದೆ. ಗೀತಾ ಅವರು ಹುಟ್ಟಿದ್ದೇ ಶಿವಮೊಗ್ಗದಲ್ಲಿ. ಶಿವಮೊಗ್ಗ ಅವರ ತವರು ಮನೆ. ಯಾವಾಗಲೂ ಅವರು ಅಲ್ಲಿಗೆ ಹೋಗ್ತಾ ಇರುತ್ತಾರೆ. ಚುನಾವಣಾ ಅಖಾಡಕ್ಕೆ ಬಂದ ಮೇಲೆ ಫೇಸ್ ಮಾಡಬೇಕು. ಯಾವುದೇ ಕ್ಷೇತ್ರ ಇರಲಿ ಆತ್ಮವಿಶ್ವಾಸದಿಂದ ನುಗ್ಗಬೇಕು ಎಂದು ನಟ ಶಿವರಾಜ್ ಕುಮಾರ್ ತಮ್ಮ ಪತ್ನಿ ಗೀತಾ ಅವರನ್ನು ಹುರಿದುಂಬಿಸುವ ಮಾತುಗಳನ್ನಾಡಿದರು.

ಗೀತಾ ಶಿವರಾಜ್ ಕುಮಾರ್ ಅವರು ಕಳೆದ ಬಾರಿ ಚುನಾವಣೆಯಲ್ಲಿ ಸೋತು ಎಷ್ಟು ಬಾರಿ ಶಿವಮೊಗ್ಗಕ್ಕೆ ಬಂದಿದ್ದಾರೆ, ಸಮಸ್ಯೆ ಆಲಿಸಿದ್ದಾರೆ ಎಂಬ ಚರ್ಚೆಯಾಗ್ತಿದೆ. ಶಿವಮೊಗ್ಗದ ಕೆಲ ಸಮಸ್ಯೆಗಳು ಗೀತಾ ಅವರಿಗೆ ಗೊತ್ತಿದೆ. ಏಕೆಂದರೆ ಅವರ ತಂದೆ, ಅವರ ಸಹೋದರ ರಾಜಕೀಯದಲ್ಲಿ ಇದ್ದವರು. ಅವರಿಗೂ ಕೂಡ ಎಲ್ಲ ಗೊತ್ತಿದೆ ಎಂದರು.

ಅಖಾಡಕ್ಕೆ ಬಂದ ಮೇಲೆ ಫೇಸ್ ಮಾಡಬೇಕು. ಯಾವುದೇ ಕ್ಷೇತ್ರ ಇರಲಿ ಆತ್ಮವಿಶ್ವಾಸದಿಂದ ನುಗ್ಗಬೇಕು. ಪ್ರಚಾರ ಹೇಗೆ ಸ್ಟಾರ್ಟ್ ಮಾಡ್ತಾರೆ ಹಾಗೆ ಹೋಗಬೇಕು. ರಾಜ್ ಫ್ಯಾಮಿಲಿ ರಾಜಕೀಯದಿಂದ ದೂರ ಇಲ್ಲ. ಯಾವುದೂ ಕೂಡ ಬೇಡ ಅನ್ನೋಕೆ ಆಗೋದಿಲ್ಲ. ಎಲ್ಲ ರಾಜಕೀಯ ನಾಯಕರು ಅಪ್ಪಾಜಿಯನ್ನ ಭೇಟಿಯಾಗ್ತಾ ಇದ್ದರು ಎಂದು ತಿಳಿಸಿದರು.

ಇದನ್ನೂ ಓದಿ :ಕರ್ನಾಟಕದ ಏಳು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ: ಗೀತಾ ಶಿವರಾಜ್​ ಕುಮಾರ್, ಶ್ರೇಯಸ್ ಪಟೇಲ್ ಕಣಕ್ಕೆ

ABOUT THE AUTHOR

...view details