ಕರ್ನಾಟಕ

karnataka

ಧಾರವಾಡ: ಪ್ರಹ್ಲಾದ್​ ಜೋಶಿ ಬಳಿ ಆಸ್ತಿ ಎಷ್ಟಿದೆ ಗೊತ್ತಾ? ಇಲ್ಲಿದೆ ವಿವರ - Pralhad Joshi Assets

By ETV Bharat Karnataka Team

Published : Apr 15, 2024, 10:02 PM IST

Updated : Apr 15, 2024, 10:27 PM IST

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚುನಾವಣಾ ಅಫಿಡವಿಟ್​ನಲ್ಲಿ 21.9 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್​ ಜೋಶಿ ಬಳಿ ಆಸ್ತಿ ಎಷ್ಟಿದೆ ಗೊತ್ತ? ಇಲ್ಲಿದೆ ವಿವರ
ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್​ ಜೋಶಿ ಬಳಿ ಆಸ್ತಿ ಎಷ್ಟಿದೆ ಗೊತ್ತ? ಇಲ್ಲಿದೆ ವಿವರ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಇಂದು ಉಮೇದುವಾರಿಕೆ ಸಲ್ಲಿಸಿದರು. ಇದೇ ವೇಳೆ, ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ 21,09,60,953 ಕೋಟಿ ರೂ ಆಸ್ತಿ ಘೋಷಿಸಿಕೊಂಡಿದ್ದಾರೆ. ಕಳೆದ 5 ವರ್ಷಗಳಲ್ಲಿ ಇವರ ಆಸ್ತಿಯಲ್ಲಿ 7 ಕೋಟಿ ರೂಪಾಯಿ ಏರಿಕೆ ಆಗಿದೆ. ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಜೋಶಿ ಕುಟುಂಬದ ಒಟ್ಟು ಆಸ್ತಿ 14.71 ಕೋಟಿ‌ ಇತ್ತು.

ಇದರಲ್ಲಿ ಜೋಶಿ ವೈಯಕ್ತಿಕ ಆಸ್ತಿ 13,97,29,450 ಕೋಟಿಗೆ ಏರಿಕೆಯಾಗಿ, ಕಳೆದ ಚುನಾವಣೆಯಲ್ಲಿ ವೈಯಕ್ತಿಕ ಆಸ್ತಿ 11.13 ಕೋಟಿ ಇತ್ತು. ಕಳೆದ ಚುನಾವಣೆಯಲ್ಲಿ ಸಲ್ಲಿಸಿದ್ದ ಅಫಿಡವಿಟ್​ನಲ್ಲಿ ಪ್ರಕಾರ 5.17 ಕೋಟಿ ಸಾಲ ಹೊಂದಿದ್ದರು. ಸದ್ಯ 6.63 ಕೋಟಿ ಸಾಲ ಅವರ ಹೆಸರಿನಲ್ಲಿದೆ. ಜೋಶಿ ಬಳಿ 184 ಗ್ರಾಂ ಚಿನ್ನ, 5 ಕೆ.ಜಿ ಬೆಳ್ಳಿ ಇದೆ. ಅವರ ವೈಯಕ್ತಿಕ ಚರಾಸ್ತಿ 2.72 ಕೋಟಿ. ಸ್ಥಿರಾಸ್ತಿ 11.24 ಕೋಟಿ ಇದೆ. ಜೊತೆಗೆ ಯಾವುದೇ ಸ್ವಂತ ವಾಹನ ಹೊಂದಿಲ್ಲ ಎಂದು ಜೋಶಿ ತಮ್ಮ ಅಫಿಡವಿಟ್​ನಲ್ಲಿ ಘೋಷಿಸಿಕೊಂಡಿದ್ದಾರೆ.

ಪತ್ನಿ ಜ್ಯೋತಿ ಚರಾಸ್ತಿ 5.93 ಕೋಟಿ, ಸ್ಥಿರಾಸ್ತಿ 86,39 ಲಕ್ಷ , 500 ಗ್ರಾಂ ಚಿನ್ನ ಹಾಗೂ 2 ಕೆ.ಜಿ ಬೆಳ್ಳಿ ಹೊಂದಿದ್ದಾರೆ. ಜೋಶಿ ಹೆಸರಿನಲ್ಲಿ 1.37 ಕೋಟಿ ಸಾಲವಿದೆ. ಪುತ್ರಿ ಅನನ್ಯಾ ಬಳಿ 250 ಗ್ರಾಂ ಚಿನ್ನ ಹಾಗೂ 32,03,449 ರೂ. ಮೌಲ್ಯದ ಆಸ್ತಿ ಇದೆ.

ಇದನ್ನೂ ಓದಿ:ಹಾವೇರಿ: ಕಾಂಗ್ರೆಸ್​ನ ​ಆನಂದಸ್ವಾಮಿ, ಬಿಜೆಪಿಯ​ ಬೊಮ್ಮಾಯಿ ಆಸ್ತಿ ವಿವರ ಹೀಗಿದೆ - Asset Details

Last Updated :Apr 15, 2024, 10:27 PM IST

ABOUT THE AUTHOR

...view details