ಕರ್ನಾಟಕ

karnataka

ಜನಸಾಗರದೊಂದಿಗೆ ಕೈ ಅಭ್ಯರ್ಥಿ ವೇಣುಗೋಪಾಲ ನಾಯಕ ನಾಮಪತ್ರ ಸಲ್ಲಿಕೆ  - Raja Venugopal Naik nomination

By ETV Bharat Karnataka Team

Published : Apr 20, 2024, 7:55 AM IST

Updated : Apr 20, 2024, 2:00 PM IST

ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಪ್ರಥಮ ಬಾರಿಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಅವರು ಬೃಹತ್ ರೋಡ್‌ ಶೋ ಮೂಲಕ ಶುಕ್ರವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಕೈ ಅಭ್ಯರ್ಥಿ ವೇಣುಗೋಪಾಲ ನಾಯಕ ನಾಮಪತ್ರ ಸಲ್ಲಿಕೆ
ಕೈ ಅಭ್ಯರ್ಥಿ ವೇಣುಗೋಪಾಲ ನಾಯಕ ನಾಮಪತ್ರ ಸಲ್ಲಿಕೆ

ವೇಣುಗೋಪಾಲ ನಾಯಕ ನಾಮಪತ್ರ ಸಲ್ಲಿಕೆ

ಯಾದಗಿರಿ: ಶಾಸಕ ರಾಜಾ ವೆಂಕಟಪ್ಪ ನಾಯಕ ಅಕಾಲಿಕ ಮರಣದಿಂದ ತೆರವಾಗಿರುವ ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಪ್ರಥಮ ಬಾರಿಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಅವರು ಬೃಹತ್ ರೋಡ್‌ ಶೋ ಮೂಲಕ ಜನಸಾಗರದೊಂದಿಗೆ ಬಂದು, ಚುನಾವಣಾಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆ ವೇಳೆ ವಸಂತ ಮಹಲ್‌ನಿಂದ ಸೈನಿಕ ದಿ. ಶರಣಬಸಪ್ಪ ಕೆಂಗೇರಿ ವೃತ್ತದವರೆಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ನೇತೃತ್ವದಲ್ಲಿ ಬೃಹತ್ ರ‍್ಯಾಲಿ ನಡೆಸಲಾಯಿತು. ರ‍್ಯಾಲಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಸುರಪುರದ ತಹಶೀಲ್ದಾರ್ ಕಚೇರಿ ವರೆಗೂ ತೆರದ ವಾಹನದಲ್ಲಿ ರೋಡ್‌ ಶೋ ನಡೆಸಿದ ಕೈ ಅಭ್ಯರ್ಥಿ ನಾಯಕ, ಬಳಿಕ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಅಪಾರ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳಿಂದ ಜಯಘೋಷ, ಕೇಕೆ, ಸಿಳ್ಳೆಯೊಂದಿಗೆ ಮೆರವಣಿಗೆ ಕಳೆಕಟ್ಟಿತ್ತು.

ಈ ವೇಳೆ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ, ರಾಯಚೂರು ಲೋಕಸಭಾ ಅಭ್ಯರ್ಥಿ ಜಿ.ಕುಮಾರ್ ನಾಯಕ, ಮರಿಗೌಡ ಹುಲಿಕಲ್, ವೀಣಾ ಹಿರೇಮಠ್, ಮರಿಲಿಂಗಪ್ಪ ಕರ್ನಾಳ, ನಿಂಗರಾಜ್ ಬಾಚಿಮಟ್ಟಿ, ಸುರಪುರ ಸಂಸ್ಥಾನದ ಅರಸ ರಾಜಾ ಕೃಷ್ಣಪ್ಪ ನಾಯಕ, ರಾಜಶೇಖರ ಗೌಡ ವಜ್ಜಲ್, ಚಂದ್ರಶೇಖರ್ ದಂಡಿನ, ಭೀಮರಾಯ ಮೂಲಿಮನಿ, ರಾಜಾ ಕುಮಾರ ನಾಯಕ, ರಾಜಾ ಸಂತೋಷ್ ನಾಯಕ ರವಿಚಂದ್ರ ಹುದ್ದಾರ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.

ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಅನಿವಾರ್ಯವಾಗಿ ಉಪಚುನಾವಣೆ ಎದುರುಸುವ ಪರಿಸ್ಥಿತಿ ಎದುರಾಗಿದೆ. ರಾಜಾ ವೆಂಕಟಪ್ಪ ನಾಯಕ ಅವರು ಕಾಂಗ್ರೆಸ್ ಪಕ್ಷದ ಶಕ್ತಿಯಾಗಿದ್ದರು. ಈ ಭಾಗದಲ್ಲಿ ಅವರ ಆಡಳಿತ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ. ಮುಂದಿನ ದಿನಗಳಲ್ಲಿ ಅವರ ಸುಪುತ್ರ ವೇಣುಗೋಪಾಲ್ ನಾಯಕ ನಿಮ್ಮ ಭರವಸೆಯನ್ನು ಉಳಿಸಿಕೊಳ್ಳುತ್ತಾರೆ. ಬಿಜೆಪಿಗರ ಪೊಳ್ಳು ಭರವಸೆಗಳಿಗೆ ಸುಳ್ಳು ಮಾತುಗಳಿಗೆ ಬಲಿಯಾಗದೇ ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮನವಿ ಮಾಡಿದರು.

ನಮ್ಮ ತಂದೆ ರಾಜಾ ವೆಂಕಟಪ್ಪ ನಾಯಕರ ನಿಧನದ ನೋವು ಮನದಲ್ಲಿದೆ. ಜನರ ಪ್ರೀತಿ, ವಿಶ್ವಾಸದಿಂದ ಮತ್ತು ತಂದೆಯ ಆಶೀರ್ವಾದದಿಂದ ನಾನು ನಿಮಗಾಗಿ ದುಡಿಯುತ್ತೇನೆ. ತಂದೆಯವರ ಅನೇಕ ಕನಸುಗಳು ಬಾಕಿ ಉಳಿದಿದ್ದು, ನನಸಾಗಿಸಲು ಈ ಬಾರಿ ನನಗೆ ಆಶೀರ್ವದಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ಇದನ್ನೂ ಓದಿ: ಬಿಜೆಪಿ ಬಂಡಾಯ ನಾಯಕ ಮಲ್ಲಿಕಾರ್ಜುನ ಚರಂತಿಮಠ ಕಾಂಗ್ರೆಸ್ ಸೇರ್ಪಡೆ - Mallikarjun Charantimath

Last Updated : Apr 20, 2024, 2:00 PM IST

ABOUT THE AUTHOR

...view details