ಬೆಂಗಳೂರು:ನಮ್ಮ ಮೆಟ್ರೋ ಪ್ರಯಾಣಿಕರಿಗೆ ವಿಶೇಷ ಅನುಭವ ನೀಡುವ ಉದ್ದೇಶದಿಂದ ಹಾಗೂ ಸೇವೆಯ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂದಿನಿಂದ ಮೇ 6ರ ವರೆಗೆ ಕಾಮೆಟ್ ನೋವಾ ಸಮೀಕ್ಷೆ ನಡೆಯಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ನಮ್ಮ ಮೆಟ್ರೋ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಸಮೀಕ್ಷೆ ನಡೆಸಲಾಗುತ್ತಿದ್ದು, ಈ ಸಮೀಕ್ಷೆಯು ನಮ್ಮ ಮೆಟ್ರೋ ಪ್ರಯಾಣಿಕರ ಅನುಭವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಏ. 8(ಇಂದಿನಿಂದ) ಮೇ 6ರ ವರೆಗೆ ಸಮೀಕ್ಷೆ ನಡೆಯಲಿದ್ದು, ಇದರಿಂದ ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸಲು ಸಹಾಯಕವಾಗುವುದಲ್ಲದೆ ನಮ್ಮ ಮೆಟ್ರೋದ ಕಾರ್ಯಕ್ಷಮತೆ ಸೂಚಕಗಳನ್ನು ಅಧ್ಯಯನ ಮಾಡಲು ಸಹಾಯವಾಗಲಿದೆ. ನಮ್ಮ ಮೆಟ್ರೋ ಪ್ರಯಾಣಿಕರ ಈ ಸಮೀಕ್ಷೆಯು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನಡೆಯಲಿದೆ. ಸಮೀಕ್ಷೆಯಲ್ಲಿ ಪ್ರಯಾಣಿಕರು ಪಾಲ್ಗೊಂಡು ನಮ್ಮ ಮೆಟ್ರೋ ಸೇವೆ ಕುರಿತು ಅಗತ್ಯ ಸಲಹೆ ನೀಡಬಹುದು ತಿಳಿಸಿದೆ.