ಕರ್ನಾಟಕ

karnataka

ಸಿಎಂ, ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿ ನೇಹಾ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ: ಪ್ರಲ್ಹಾದ್ ಜೋಶಿ - Neha murder case

By ETV Bharat Karnataka Team

Published : Apr 20, 2024, 9:34 PM IST

Updated : Apr 20, 2024, 10:47 PM IST

ಮುಸಲ್ಮಾನರು ಅಪರಾಧ ಮಾಡಿದರೆ ಅದು ಅಪರಾಧ ಅಲ್ಲವಾ? ನಾನು ಸರ್ಕಾರಕ್ಕೆ ಹೇಳ ಬಯಸುತ್ತೇನೆ, ಕ್ಯಾಜುವಲ್ ಸ್ಟೇಟಮೆಂಟ್​ಗಳನ್ನು ಹೇಳೋದು ಬಿಟ್ಟು ಗಂಭೀರವಾಗಿ ತನಿಖೆ ಮಾಡಿ ಎಂದು ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.

BJP candidate Prahlad Joshi spoke to the media.
ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿದರು.

ಧಾರವಾಡ:ನೇಹಾ ಹತ್ಯೆ ಪ್ರಕರಣದಲ್ಲಿ ಸಿಎಂ, ಗೃಹ ಮಂತ್ರಿ ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ. ಸಿಎಂ, ಗೃಹ ಮಂತ್ರಿ ಕೊಲೆಯ ಬಗ್ಗೆ ಕ್ಯಾಜುವಲ್ ಆಗಿ ಅನ್ಯಾಯ ಆಗಿದೆ ಎಂದು ಒಂದು ಸಮಾಜದ ಮಾತನಾಡಿದ್ದಾರೆ. ಕೊಲೆ ತನಿಖೆ ಮೊದಲು ಪೂರ್ವಾಗ್ರಹ ಪೀಡಿತರಾಗಿ ಮಾತಾಡುವುದು ಸರಿಯಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ಷೇಪಿಸಿದರು.

''ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮೇಶ್ವರ ಕೆಫೆಯಲ್ಲಿ ಬ್ಲಾಸ್ಟ್​ ಆಗಿದ್ದಾಗ ಕೂಡ ಅದು ಸಿಲಿಂಡರ್ ಬ್ಲಾಸ್ಟ್​ ಎಂದಿದ್ದರು. ಉಡುಪಿಯ ಕಾಲೇಜೊಂದರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟಾಗ ಅದು ಮಕ್ಕಳ ಆಟ ಎಂದು ಗೃಹ ಮಂತ್ರಿ ಹೇಳಿದ್ದರು. ಖಡ್ಗದಿಂದ ದಾಳಿ ಮಾಡಿದಾಗ ಸ್ಥಳೀಯ ಗಲಾಟೆ ಎಂದಿದ್ದರು.

ಪಾಕಿಸ್ತಾನ್​ ಜಿಂದಾಬಾದ್ ಎಂದಾಗ ಅದು ಆಗಿಯೇ ಇಲ್ಲ ಎಂದಿದ್ದರು. ಹನುಮಾನ್ ಚಾಲೀಸಾ ಪಠಿಸಿದವರನ್ನು ಜೈಲಿಗೆ ಹಾಕಿದರು. ಜೈ ಶ್ರೀರಾಮ ಅಂತ ಹೇಳಬಾರದು ಎಂದಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ. ವೋಟ್ ಬ್ಯಾಂಕ್ ಪಾಲಿಟಿಕ್ಟ್ ಮಾಡುತ್ತಿದ್ದಾರೆ'' ಎಂದು ಆರೋಪಿಸಿದರು.

ವೋಟ್​ ಬ್ಯಾಂಕ್​ ರಾಜಕೀಯ:''ವೋಟ್​ ಬ್ಯಾಂಕ್​ ರಾಜಕೀಯಕ್ಕಾಗಿ ಸಣ್ಣ ಹುಡುಗಿ ಅದು, ನಿಮಗೇನು ಗೊತ್ತಿದೆ ಅವರದ್ದು ಏನೂ ಅಗಿತ್ತು ಅಂತ, ಯಾವ ರೀತಿ ಜಡ್ಜ್​ ಮಾಡ್ತಿರಿ. ಮುಸಲ್ಮಾನರು ಅಪರಾಧ ಮಾಡಿದರೆ ಅದು ಅಪರಾಧ ಅಲ್ಲವಾ? ನಿಮ್ಮ ತಂದೆ ನಿಮ್ಮ ಪಕ್ಷದ ಕಾರ್ಪೊರೇಟರ್, ಆತ ಹೇಳ್ತಾನೆ ಇದರಲ್ಲಿ ಹುಡಗಾಟಿಕೆ ಮಾಡಬೇಡರಿ ಎಂದಿದ್ದಾರೆ. ಸರ್ಕಾರಕ್ಕೆ ನಾನು ಸ್ಪಷ್ಟವಾಗಿ ಹೇಳ ಬಯಸುತ್ತೇನೆ, ಕ್ಯಾಜುವಲ್ ಸ್ಟೇಟಮೆಂಟ್​ಗಳನ್ನು ಹೇಳೋದು ಬಿಟ್ಟು ತನಿಖೆ ಮಾಡಿ, ನೇಹಾ ತಂದೆ ಅವರು ಈ ಕೊಲೆಯ ಹಿಂದೆ ಬಹಳ ಜನ ಇದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆಕೆಯನ್ನು ಮತಾಂತರ ಮಾಡುವುದಕ್ಕೆ ಪ್ರಯತ್ನಿಸಿದ್ದರೂ ಅಂತ ಹೇಳಿದ್ದಾರೆ. ಆದರೂ ಈ ಪ್ರಕರಣವನ್ನು ನೀವು ಗಂಭೀರವಾಗಿ ತೆಗೆದುಕೊಂಡಿಲ್ಲ'' ಎಂದು ಆರೋಪಿಸಿದರು.

ಗೃಹ ಮಂತ್ರಿಗೆ ಜವಾಬ್ದಾರಿ ಇಲ್ಲಾ, ಸಿಎಂ ಉಡಾಫೆ ಮಾತು ನೀಡಿ, ತುಷ್ಟೀಕರಣದಿಂದಾಗಿ ಆ ಜನರಿಂದ ನನ್ನ ಕ್ಷೇತ್ರದಲ್ಲಿ ವೋಟ್​ ಹೋಗಬಹುದು ಹೇಳಿಕೆ ನೀಡೋದು, ನಂತರ ವಿಷಾದ ವ್ಯಕ್ತಪಡಿಸುವುದು. ಗೃಹ ಸಚಿವರು ಲವ್ ಜಿಹಾದ್ ಅಲ್ಲಾ ಎಂದು ಯಾಕೆ ಜಡ್ಜ್​ ಮಾಡ್ತಿರಿ. ಇದರಲ್ಲಿ ಸರಿಯಾಗಿ ತನಿಖೆ ಆಗಲಿಲ್ಲ ಬಿಜೆಪಿಯಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು ಜೋಶಿ ಎಚ್ಚರಿಕೆ ನೀಡಿದರು.

ಇದನ್ನೂಓದಿ:ನೇಹಾ ಕೊಲೆ ಪ್ರಕರಣ ಲವ್ ಜಿಹಾದ್ ಅಲ್ಲ: ಸಿಎಂ ಸಿದ್ದರಾಮಯ್ಯ - Neha murder case

Last Updated : Apr 20, 2024, 10:47 PM IST

ABOUT THE AUTHOR

...view details