ಕರ್ನಾಟಕ

karnataka

ಚಿಕ್ಕೋಡಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 16 ಲಕ್ಷ ರೂ. ವಶಕ್ಕೆ - Cash Seized

By ETV Bharat Karnataka Team

Published : Apr 11, 2024, 9:23 AM IST

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 16,31,050 ರೂ. ಹಣವನ್ನು ಚಿಕ್ಕೋಡಿಯಲ್ಲಿ ವಶಕ್ಕೆ ಪಡೆಯಲಾಗಿದೆ.

chikkodi-police
ಚಿಕ್ಕೋಡಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 16 ಲಕ್ಷ ರೂ. ವಶಕ್ಕೆ

ಚಿಕ್ಕೋಡಿ (ಬೆಳಗಾವಿ):ದೇಶಾದ್ಯಂತ ಲೋಕಸಭಾ ಚುನಾವಣೆ ರಂಗೇರಿದ್ದು, ಕೆಲವೆಡೆ ಕುರುಡು ಕಾಂಚಾಣ ಸದ್ದು ಮಾಡುತ್ತಿದೆ. ಬುಧವಾರ ತಡರಾತ್ರಿ ಚಿಕ್ಕೋಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ದಾಖಲೆ ಇಲ್ಲದೆ ಸಾಗಿಸುತ್ತಿದ್ದ 16,31,050 ರೂ. ಹಣ ವಶಕ್ಕೆ ಪಡೆದುಕೊಂಡಿದ್ದಾರೆ.

16 ಲಕ್ಷ ರೂ. ವಶಕ್ಕೆ

ಮಹಾರಾಷ್ಟ್ರದ ಇಂಚಲ್ಕರಂಜಿ ನಗರದ ಇಬ್ಬರು ನಿವಾಸಿಗಳು ಚಿಕ್ಕೋಡಿ ಬಸ್ ನಿಲ್ದಾಣದಿಂದ ತಮ್ಮೂರಿಗೆ ಬಸ್ ಮೂಲಕ ದಾಖಲೆ ಇಲ್ಲದೆ, 16 ಲಕ್ಷ 31 ಸಾವಿರ ರೂ. ಸಾಗಿಸುತ್ತಿದ್ದರು. ತಪಾಸಣೆ ವೇಳೆ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ರಮ ಹಣದ ಜೊತೆಗೆ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಇದನ್ನೂ ಓದಿ:ಬಳ್ಳಾರಿ: ದಾಖಲೆ ಇಲ್ಲದ ₹5.60 ಕೋಟಿ ನಗದು, 3 ಕೆಜಿ ಚಿನ್ನ, 124 ಕೆಜಿ ಬೆಳ್ಳಿ ಜಪ್ತಿ - Ballari Police Raid

ABOUT THE AUTHOR

...view details