ಕರ್ನಾಟಕ

karnataka

ಚಾಮರಾಜನಗರ: ಸತ್ತೇಗಾಲ ಚೆಕ್‌ ಪೋಸ್ಟ್​​​ ಬಳಿ ದಾಖಲೆಯಿಲ್ಲದ 2 ಕೆಜಿ ಚಿನ್ನ ವಶಕ್ಕೆ - Gold Seized

By ETV Bharat Karnataka Team

Published : Apr 11, 2024, 9:50 PM IST

ಸತ್ತೇಗಾಲ ಚೆಕ್‌ ಪೋಸ್ಟ್ ಸಮೀಪ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2 ಕೆಜಿ ಚಿನ್ನಾಭರಣಗಳನ್ನು ಎಫ್‌ಎಸ್‌ಟಿ ತಂಡದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

2 kg 170 grams of gold jewelry seized by FST team
2 ಕೆ ಜಿ 170 ಗ್ರಾಂ ಚಿನ್ನಾಭರಣ ಎಫ್ ಎಸ್ ಟಿ ತಂಡದಿಂದ ವಶ

ಚಾಮರಾಜನಗರ:ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸತ್ತೇಗಾಲ ಚೆಕ್‌ ಪೋಸ್ಟ್‌ನಲ್ಲಿ ಇಂದು ದಾಖಲೆ ಇಲ್ಲದೇ ಸಾಗಣೆ ಮಾಡುತ್ತಿದ್ದ 1,57,87,000 ರೂ. ಮೌಲ್ಯದ 2 ಕೆಜಿ 170 ಗ್ರಾಂ ಚಿನ್ನಾಭರಣಗಳನ್ನು ಎಫ್‌ಎಸ್‌ಟಿ ತಂಡದ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಚೆಕ್‌ ಪೋಸ್ಟ್‌ನಲ್ಲಿ ಬೆಳಗ್ಗೆ 10.45 ಗಂಟೆಯ ಸುಮಾರಿಗೆ ಬೆಂಗಳೂರಿನಿಂದ ಕೊಳ್ಳೆಗಾಲಕ್ಕೆ ಬರುತ್ತಿದ್ದ ಕೆಎ-17 ಜಡ್-9447 ಸಂಖ್ಯೆಯ ಕಾರಿನಲ್ಲಿ ಕಾರ್ತಿಕ್ ಮತ್ತು ಚಿರಾಂತ್ ಎಂಬವರು ಚಿನ್ನ ಸಾಗಿಸುತ್ತಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದಾಗ ಸ್ಪಷ್ಟ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಚಿನ್ನ ವಶಕ್ಕೆ ಪಡೆದು, ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಆದಾಯ ತೆರಿಗೆ ಇಲಾಖೆ ಅನ್ವೇಷಣೆ ವಿಭಾಗದ ಸಹಾಯಕ ನಿರ್ದೇಶಕ ಆರ್.ರಂಗನಾಥ್, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಾದ ಜಿ.ರಘು, ಜಿ.ದಿವಾಕರ್ ಅವರಿಂದ ತನಿಖೆ ಹಾಗೂ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂಓದಿ:ಚಿಕ್ಕೋಡಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 16 ಲಕ್ಷ ರೂ. ವಶಕ್ಕೆ - Cash Seized

ABOUT THE AUTHOR

...view details