ಕರ್ನಾಟಕ

karnataka

ದರೋಡೆ ಪ್ರಕರಣದಲ್ಲಿ 27 ವರ್ಷಗಳ ಬಳಿಕ ಸೆರೆಸಿಕ್ಕ ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ - Belagavi Robbery Case

By ETV Bharat Karnataka Team

Published : Mar 22, 2024, 8:15 AM IST

ದರೋಡೆ ಪ್ರಕರಣದಲ್ಲಿ ಹಲವು ವರ್ಷಗಳ ಬಳಿಕ ಸೆರೆ ಸಿಕ್ಕ ಅಪರಾಧಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು 1 ಸಾವಿರ ರೂ ದಂಡ ವಿಧಿಸಿ ಬೆಳಗಾವಿ ನ್ಯಾಯಾಲಯ ಆದೇಶ ಹೊರಡಿಸಿದೆ.

Etv Bharat
Etv Bharat

ಬೆಳಗಾವಿ: ನಗರದಲ್ಲಿ‌ ದರೋಡೆ ಪ್ರಕರಣವೊಂದರಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 27 ವರ್ಷಗಳ ಬಳಿಕ ಮಾಳಮಾರುತಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೀದರ್‌ ಜಿಲ್ಲೆಯ ಮುಧೋಳ ತಾಂಡಾ ನಿವಾಸಿ ಕಿಶನ್‌ ಹಂಕು ಜಾಧವ ಬಂಧಿತ ಆರೋಪಿ. 1997ರಲ್ಲಿ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ 14 ಆರೋಪಿಗಳ ಪೈಕಿ ಕಿಶನ್‌ ಪ್ರಮುಖನಾಗಿದ್ದ. ಕೆಲವು ದಿನ ಪೊಲೀಸರ ವಶದಲ್ಲಿದ್ದು ಜಾಮೀನಿನ ಮೇಲೆ ಹೊರಬಂದಿದ್ದ. ಆ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ.

ಆರೋಪಿಗೆ ಜಾಲ ಬೀಸಿದ್ದ ಪೊಲೀಸರು ಕೊನೆಗೂ ಬೀದರ್‌ನಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಪಿಎಸ್‌ಐ ಮನೋಹರ ಮಲ್ಲಿಗವಾಡ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಬೆಳಗಾವಿಯ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಪೊಲೀಸರು ಆರೋಪಿಯನ್ನು ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯವು ಈತನಿಗೆ ಮತ್ತೆ ಮೂರು ವರ್ಷ ಶಿಕ್ಷೆ ಮತ್ತು 1 ಸಾವಿರ ರೂ. ದಂಡ ವಿಧಿಸಿತು. ದಂಡ ಕಟ್ಟಲು ವಿಫಲವಾದರೆ, ಮತ್ತೆ ಮೂರು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸುವಂತೆ ನ್ಯಾಯಾಲಯ ಆದೇಶಿಸಿದೆ. ಆರೋಪಿಯನ್ನು ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.

ಇದನ್ನೂ ಓದಿ:ಹಣ ದೋಚಲು ಬ್ಯಾಂಕ್​ಗೆ ನುಗ್ಗಿದ ಖದೀಮರು: ಕ್ಯಾಷಿಯರ್​ ಮೇಲೆ ಗುಂಡಿನ ದಾಳಿ

ಚಿಕ್ಕಮಗಳೂರು: ಮನೆಗೆ ನುಗ್ಗಿ ಕಣ್ಣಿಗೆ ಖಾರದ ಪುಡಿ ಎರಚಿ ಹಣ, ಚಿನ್ನ ದರೋಡೆ

ABOUT THE AUTHOR

...view details