ಕರ್ನಾಟಕ

karnataka

65 ಲಕ್ಷ ರೂ. ತೆರಿಗೆ ಪಾವತಿಸುವಂತೆ ನಮ್ಮ ಮೆಟ್ರೋಗೆ ಬಿಬಿಎಂಪಿ ನೋಟಿಸ್​

By ETV Bharat Karnataka Team

Published : Feb 11, 2024, 7:50 PM IST

Updated : Feb 11, 2024, 8:17 PM IST

ಬಾಕಿ ಇರುವ ತೆರಿಗೆ ಪಾವತಿಸುವಂತೆ ನಮ್ಮ ಮೆಟ್ರೋಗೆ ಬಿಬಿಎಂ ನೋಟಿಸ್​ ಜಾರಿ ಮಾಡಿದೆ.

ನಮ್ಮ ಮೆಟ್ರೋಗೆ ಪಾಲಿಕೆಯಿಂದ ನೋಟಿಸ್​
ನಮ್ಮ ಮೆಟ್ರೋಗೆ ಪಾಲಿಕೆಯಿಂದ ನೋಟಿಸ್​

ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಿ ಆದಾಯ ಸಂಗ್ರಹ ಹೆಚ್ಚಿಸಿಕೊಳ್ಳಲು ಮುಂದಾಗಿರುವ ಬಿಬಿಎಂಪಿ ಇದೀಗ ನಮ್ಮ ಮೆಟ್ರೋಗೆ ಬಿಸಿ ಮುಟ್ಟಿಸಿದೆ. ಬಾಕಿ ತೆರಿಗೆ ಪಾವತಿಸುವಂತೆ ನಿಲ್ದಾಣಗಳಲ್ಲಿ ಇರುವ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿದೆ.

ನಮ್ಮ ಮೆಟ್ರೋ ಪಾಲಿಕೆಗೆ ಬರೋಬ್ಬರಿ 53.65 ಲಕ್ಷ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಬಾಕಿ ಆಸ್ತಿ ತೆರಿಗೆ ಮೊತ್ತ ಹಾಗೂ ದಂಡ ಸೇರಿದಂತೆ ಒಟ್ಟು 65 ಲಕ್ಷ ರೂಪಾಯಿ ಪಾವತಿಸುವಂತೆ ಪಾಲಿಕೆ ನೋಟಿಸ್ ಜಾರಿ ಮಾಡಿದೆ. ನಮ್ಮ ಮೆಟ್ರೋ ಕಬ್ಬನ್ ಪಾರ್ಕ್ ವಸತಿಯೇತರ ಕಟ್ಟಡಗಳ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಸರಕಾರದ ಆದೇಶದಂತೆ ಪಾಲಿಕೆ ತೆರಿಗೆ ವಸೂಲಿಗೆ ಮುಂದಾಗಿದೆ.

ಬಿಬಿಎಂಪಿ ಶಿವಾಜಿನಗರ ಕಂದಾಯ ಅಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ. 2023-24ನೇ ಸಾಲಿನಲ್ಲಿ ತೆರಿಗೆ ಸಂಗ್ರಹ ಗುರಿಯನ್ನು ವರ್ಷಾಂತ್ಯದೊಳಗೆ ಸಾಧಿಸಲೇಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಅದರಂತೆ ಇದೀಗ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ಜಾರಿ ಮಾಡುತ್ತಿದೆ. ಅದರಂತೆ ಪಾಲಿಕೆ ಅಧಿಕಾರಿಗಳು ಮೆಟ್ರೊ ನಿಲ್ದಾಣದ 30 ಮಳಿಗೆಗಳಿಗೆ ನೋಟಿಸ್ ಜಾರಿ ಮಾಡಿದ್ದು, ಕೂಡಲೇ ತೆರಿಗೆ ಪಾವತಿಸುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ಗ್ಯಾರಂಟಿ ಯೋಜನೆಗಳನ್ನು ಎಲ್ಲಾ ವರ್ಗದ ಜನರಿಗೆ ತಲುಪಿಸುತ್ತೇವೆ : ಸಂತೋಷ್ ಲಾಡ್

Last Updated : Feb 11, 2024, 8:17 PM IST

ABOUT THE AUTHOR

...view details