ಕರ್ನಾಟಕ

karnataka

ಮಂಡ್ಯ: ಯುಗಾದಿ ಸಂಭ್ರಮದ ನಡುವೆ ಯುವಕನ ಹತ್ಯೆ - Murder in Mandya

By ETV Bharat Karnataka Team

Published : Apr 10, 2024, 12:00 PM IST

ಮಂಗಳವಾರ ತಡರಾತ್ರಿ ಮಂಡ್ಯದ ಸ್ವರ್ಣಸಂದ್ರ ಬಡಾವಣೆಯಲ್ಲಿ ಯುವಕನೊಬ್ಬನನ್ನು ಹತ್ಯೆ ಮಾಡಲಾಗಿದೆ.

ಯುಗಾದಿ ಸಂಭ್ರಮದ ನಡುವೆ ಯುವಕನ ಹತ್ಯೆ
ಯುಗಾದಿ ಸಂಭ್ರಮದ ನಡುವೆ ಯುವಕನ ಹತ್ಯೆ

ಮಂಡ್ಯ:ಹಳೆಯ ದ್ವೇಷದ ಹಿನ್ನೆಲೆ ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ಮಂಗಳವಾರ ರಾತ್ರಿ ಯುವಕನೊಬ್ಬನನ್ನು ಹತ್ಯೆ ಮಾಡಲಾಗಿದೆ. ಸ್ವರ್ಣಸಂದ್ರ ಬಡಾವಣೆಯ ಅಕ್ಷಯ್ (24) ಮೃತ ಯುವಕ.

ಯುಗಾದಿ ಹಬ್ಬದ ಸಂಭ್ರಮಾಚರಣೆಯಲ್ಲಿದ್ದ ಯುವಕನನ್ನು ಫೋನ್ ಮಾಡಿ ಕರೆಸಿಕೊಳ್ಳಲಾಗಿದೆ. ನಂತರ ಮಾರಾಕಾಸ್ತ್ರದಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಮಂಡ್ಯ ಪೂರ್ವ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಮಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಮದ್ಯ ಸೇವನೆ ವಿಚಾರಕ್ಕೆ ಕೊಲೆ: ಮೂವರು ಆರೋಪಿಗಳ ಬಂಧನ - HUBBALLI MURDER CASE

ABOUT THE AUTHOR

...view details