ಕರ್ನಾಟಕ

karnataka

ಶಿವಮೊಗ್ಗ: ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಗೆ ಅಪರಿಚಿತರಿಂದ ಚಾಕು ಇರಿತ

By ETV Bharat Karnataka Team

Published : Feb 29, 2024, 6:33 AM IST

ಮಧ್ಯಾಹ್ನ ಊಟ ಮುಗಿಸಿ ಕೆಲಸಕ್ಕೆ ತನ್ನ ಪಾಡಿಗೆ ತೆರಳುತ್ತಿದ್ದ ಮಹಿಳೆ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿರುವ ಘಟನೆ ಶಿವಮೊಗ್ಗದ ಹೊಸ ನಗರದಲ್ಲಿ ನಡೆದಿದೆ.

ಚಾಕು ಹಲ್ಲೆ
ಚಾಕು ಹಲ್ಲೆ

ಶಿವಮೊಗ್ಗ:ಕೆಲಸಕ್ಕೆಂದು ಹೊರಟಿದ್ದ ಮಹಿಳೆಗೆ ಅಪರಿಚಿತರಿಬ್ಬರು ಬೈಕ್​ನಲ್ಲಿ ಬಂದು ಚಾಕುವಿನಿಂದ ಇರಿದಿರುವ ಘಟನೆ ಜಿಲ್ಲೆಯ ಹೊಸನಗರದಲ್ಲಿ ನಡೆದಿದೆ. ಹೊಸನಗರ ನಿವಾಸಿ ನಾಜೀಮಾ (38) ಗಾಯಗೊಂಡ ಮಹಿಳೆ.

ನಾಜೀಮಾ ಹೊಸನಗರದ ಪಾರ್ಲರ್​ನಲ್ಲಿ ಕೆಲಸ ಮಾಡುತ್ತಿದ್ದು, ಬುಧವಾರ ಮಧ್ಯಾಹ್ನ ಮನೆಗೆ ಬಂದು ಊಟ ಮುಗಿಸಿ ಹೊಸನಗರದ ಗಣಪತಿ ದೇವಾಲಯದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಾಜೀಮಾ ಅವರ ಬಲ ಕೈ ತೋಳಿಗೆ ಚಾಕುವಿನಿಂದ ಇರಿದಿದ್ದಾರೆ.

ಬೈಕ್​ ಚಲಾಯಿಸುತ್ತಿದ್ದವನು ಹೆಲ್ಮೆಟ್ ಹಾಕಿಕೊಂಡಿದ್ದು, ಹಿಂಬದಿ ಸವಾರ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದನು. ಇದರಿಂದ ಅವರ ಮುಖ ಕಂಡು ಬಂದಿಲ್ಲ. ನಾಜೀಮಾ ಜೋರಾಗಿ ಕೂಗಿಕೊಂಡ ಕಾರಣ ಸ್ಥಳೀಯರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹಾಡಹಗಲೇ ಚಾಕುವಿನಿಂದ ಇರಿದ ಪ್ರಕರಣ ಕಂಡು ಹೊಸನಗರದ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಗಾಯಾಳುವಿಗೆ ನಾಲ್ವರು ಮಕ್ಕಳಿದ್ದು, ಘಟನೆಯ ಸಂದರ್ಭ ಬುರ್ಕಾ ಹಾಕಿಕೊಂಡಿದ್ದ ಕಾರಣಕ್ಕೆ ಹೆಚ್ಚಿನ ಗಾಯಗಳಾಗಿಲ್ಲ. ಚಾಕುವಿನಿಂದ ಇರಿದವರು ಯಾರು, ಯಾವ ಕಾರಣಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಸಿಕ್ಕಿಲ್ಲ. ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:ಬೆಂಗಳೂರು: 250ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ್ದ ಆರೋಪಿ ಸೆರೆ

ABOUT THE AUTHOR

...view details