ಕರ್ನಾಟಕ

karnataka

50 ಸಾವಿರಕ್ಕಿಂತ ಹೆಚ್ಚು ದಂಡವಿರುವ 80 ಬೈಕ್​​ ಸೀಜ್: 10 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ಪೆಂಡಿಂಗ್​

By ETV Bharat Karnataka Team

Published : Feb 17, 2024, 1:35 PM IST

Updated : Feb 17, 2024, 2:53 PM IST

50 ಸಾವಿರಕ್ಕಿಂತ ಹೆಚ್ಚು ದಂಡ ಬಾಕಿ ಉಳಿಸಿಕೊಂಡಿರುವ 80 ಬೈಕ್​ಗಳನ್ನು ಪೊಲೀಸ್​ ಇಲಾಖೆ ಸೀಜ್ ಮಾಡಿದೆ. ಅಷ್ಟೇ ಅಲ್ಲದೆ, ಈ ವಾಹನಗಳ ಮೇಲೆ 10 ಸಾವಿರಕ್ಕಿಂತ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ.

bikes seized  Bengaluru  Traffic violation case  ಬೈಕ್ ಸೀಜ್  ಸಂಚಾರ ನಿಯಮ ಉಲ್ಲಂಘನೆ ಪ್ರಕರಣ
ಡಿಸಿಪಿ ಶಿವಪ್ರಕಾಶ್​ ದೇವರಾಜ್‌

ಡಿಸಿಪಿ ಶಿವಪ್ರಕಾಶ್​ ದೇವರಾಜ್‌ ಹೇಳಿಕೆ

ಬೆಂಗಳೂರು:ಇತ್ತೀಚೆಗೆ ನಗರದಲ್ಲಿ ವಾಹನ ಸವಾರರಿಂದ ಸಂಚಾರ ನಿಯಮ‌ ಉಲ್ಲಂಘನೆ ಪ್ರಕರಣಗಳು ಅಧಿಕಗೊಳ್ಳುತ್ತಿವೆ. ಅವರ ವಿರುದ್ಧ ಕ್ರಮಕೈಗೊಳ್ಳಲು ಸಂಚಾರ ಪೊಲೀಸರು ಸಜ್ಜಾಗಿದ್ದಾರೆ. ಇನ್ನು 50 ಸಾವಿರಕ್ಕಿಂತ ಹೆಚ್ಚು ದಂಡ ಬಾಕಿ ಉಳಿಸಿಕೊಂಡಿರುವ ಸವಾರನ ಮನೆ ಬಾಗಿಲಿಗೆ ನೋಟಿಸ್ ನೀಡಿ ದಂಡ ವಸೂಲಿ ಮಾಡುವುದಾಗಿ ಎಚ್ಚರಿಸಿದ್ದ ಸಂಚಾರ ಪೊಲೀಸರು ಇದೀಗ ಕಾರ್ಯರೂಪಕ್ಕೆ ತಂದಿದ್ದಾರೆ. ಸದ್ಯ 50 ಸಾವಿರಕ್ಕಿಂತ ಹೆಚ್ಚು ದಂಡವಿರುವ 84 ಬೈಕ್​ಗಳು ಹಾಗೂ ಒಂದು ಕಾರನ್ನು ಸೀಜ್ ಮಾಡಲಾಗಿದೆ. ಅಲ್ಲದೆ, ಈ ವಾಹನಗಳ ಮೇಲೆ 10,210 ಉಲ್ಲಂಘನಾ ಪ್ರಕರಣಗಳು ದಾಖಲಾಗಿದ್ದು‌, ಸುಮಾರು 1.07 ಕೋಟಿ ರೂಪಾಯಿ ದಂಡ ಸಂಗ್ರಹಿಸಬೇಕಿದೆ ಎಂದು ಪೊಲೀಸ್​ ಇಲಾಖೆ ತಿಳಿಸಿದೆ.

ಸಂಚಾರ ಪೊಲೀಸರ ಬದಲಾಗಿ ಆತ್ಯಾಧುನಿಕ ಕ್ಯಾಮೆರಾಗಳಿಂದ‌ ಸೆರೆಯಾಗುವ ಪೋಟೋ ಆಧಾರದ ಮೇರೆಗೆ ಪ್ರಕರಣಗಳನ್ನ‌ ದಾಖಲಿಸಿಕೊಳ್ಳಲಾಗುತ್ತಿದೆ. ಪೊಲೀಸರು ಅಡ್ಡಗಟ್ಟುವುದಿಲ್ಲ ಎಂದು ಭಾವಿಸಿ ಹೆಲ್ಮೆಟ್ ರಹಿತ ಚಾಲನೆ, ಸಿಗ್ನಲ್ ಜಂಪ್, ಸೀಟ್ ಬೆಲ್ಟ್ ಹಾಕದಿರುವುದು ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿದೆ. ಟ್ರಾಫಿಕ್ ವೈಯಲೇಷನ್ ಮಾಡುವವವರ ವಿರುದ್ಧ ಹಾಗೂ ಮುಖ್ಯವಾಗಿ 50 ಸಾವಿರಕ್ಕಿಂತ ಹೆಚ್ಚು ದಂಡ ಹೊಂದಿರುವ ಸವಾರರ ವಿರುದ್ಧ‌ ಕ್ರಮ‌ಕೈಗೊಳ್ಳುವಂತೆ ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ಎಂ.ಎನ್‌.ಅನುಚೇತ್ ನಗರದ ಎಲ್ಲ ವಲಯದ ಡಿಸಿಪಿಗಳಿಗೆ ಸೂಚಿಸಿದ್ದರು.

ಅದರಂತೆ ಕಾರ್ಯಾಚರಣೆ ಕೈಗೊಂಡ ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್​ ದೇವರಾಜ್‌ ನೇತೃತ್ವದಲ್ಲಿ ಕಳೆದ ಎರಡು - ಮೂರು ದಿನಗಳಿಂದ ಕಾರ್ಯಾಚರಣೆ ಕೈಗೊಂಡು 84 ಬೈಕ್ ಹಾಗೂ ಒಂದು ಕಾರು ವಶಕ್ಕೆ ಪಡೆದುಕೊಂಡಿದ್ದಾರೆ. ಸೀಜ್ ಮಾಡಲಾದ ಎಲ್ಲ ವಾಹನಗಳ ಮೇಲೆ‌ 50 ಸಾವಿರಕ್ಕಿಂತ ಹೆಚ್ಚು ದಂಡವಿರುವುದು ಕಂಡು ಬಂದಿದೆ. ಒಟ್ಟಾರೆ 10 ಸಾವಿರಕ್ಕಿಂತ ಹೆಚ್ಚು ಸಂಚಾರ ಉಲ್ಲಂಘನೆ ಪ್ರಕರಣಗಳಿದ್ದು, 1 ಕೋಟಿ ರೂಪಾಯಿ ದಂಡವಿದೆ.‌ ಸದ್ಯ ಎಲ್ಲ ವಾಹನಗಳನ್ನ‌ ಸೀಜ್‌ ಮಾಡಿ ವಾಹನ ಮಾಲೀಕರಿಗೆ ನೊಟೀಸ್ ಕಳುಹಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ದಕ್ಷಿಣ ವಿಭಾಗದ ಸಂಚಾರ ಡಿಸಿಪಿ‌ ಶಿವಪ್ರಕಾಶ್ ದೇವರಾಜ್ ಮಾತನಾಡಿ, ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಲಾಗಿತ್ತು. 50 ಸಾವಿರ ಮೇಲೆ ದಂಡ ಇರುವ ವಾಹನಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ಇಲ್ಲಿಯವರೆಗೆ 84 ಬೈಕ್ 1ಕಾರು ಸೀಜ್ ಮಾಡಲಾಗಿದೆ. ಎಲ್ಲಾ ವಾಹನಗಳ ಮೇಲೆ 50 ಸಾವಿರಕ್ಕೂ ಹೆಚ್ಚು ಫೈನ್ ಇದೆ‌. ಇಲ್ಲಿಯವೆಗೆ ಒಟ್ಟಾರೆ 10 ಸಾವಿರಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿವೆ. ಹೆಲ್ಮೆಟ್ ಇಲ್ಲದೇ ವಾಹನ ಚಾಲನೆ, ನೋ ಪಾರ್ಕಿಂಗ್, ಪದೇ ಪದೆ ನಿಯಮ ಉಲ್ಲಂಘನೆ ಹಿನ್ನೆಲೆ ಕೇಸ್ ದಾಖಲಿಸಲಾಗಿದೆ ಎಂದು ಹೇಳಿದರು.

ಭೌತಿಕವಾಗಿ ವಾಹನ ತಪಾಸಣೆ ಮಾಡಿಲ್ಲ ಅಂದರೂ ಕ್ಯಾಮೆರಾಗಳ ಮೂಲಕ ಕೇಸ್ ಹಾಕಲಾಗುತ್ತೆ. ಪೊಲೀಸರು ಇಲ್ಲವೆಂದು ನಿಯಮ ಉಲ್ಲಂಘನೆ ಮಾಡಿದ್ರೆ ಕ್ಯಾಮೆರಾ ಮೂಲಕ ಕೇಸ್ ಆಗುತ್ತೆ. ದಂಡ ಕಟ್ಟಿಲ್ಲ ಅಂದ್ರೆ ಕೋರ್ಟ್​ಗೆ ಹಾಜರುಪಡಿಸಲಾಗುವುದು. ಆನ್​ಲೈನ್​ ಮೂಲಕ ದಂಡ ಪಾವತಿ ಮಾಡಬಹುದಾಗಿದೆ. ಸಿಟಿ 100 ಬೈಕ್ ಮೇಲೆ ಒಂದೂವರೆ ಲಕ್ಷಕ್ಕೂ ಹೆಚ್ಚು ದಂಡದ ಮೊತ್ತವಿದೆ ಎಂದು ಸಂಚಾರ ಡಿಸಿಪಿ ದೇವರಾಜ್ ತಿಳಿಸಿದರು.

ಓದಿ:ಶಿವಮೊಗ್ಗ: ಹುಂಡೈ ಕಾರು ಶೋರೂಂಗೆ ಆಕಸ್ಮಿಕ ಬೆಂಕಿ - ಮೂರು ಸಂಪೂರ್ಣ, 7 ಕಾರುಗಳಿಗೆ ಭಾಗಶಃ ಹಾನಿ

Last Updated : Feb 17, 2024, 2:53 PM IST

ABOUT THE AUTHOR

...view details