ಕರ್ನಾಟಕ

karnataka

'ಲೋಕ' ಸಮರ: ಉತ್ತರಕನ್ನಡದಲ್ಲಿ 17 ನಾಮಪತ್ರಗಳು ತಿರಸ್ಕೃತ, 13 ಕ್ರಮಬದ್ಧ - Lok Sabha Election

By ETV Bharat Karnataka Team

Published : Apr 21, 2024, 4:20 PM IST

ಉತ್ತರಕನ್ನಡದಲ್ಲಿ ಲೋಕಸಭಾ ಚುನಾವಣೆಗೆ 17 ನಾಮಪತ್ರಗಳು ತಿರಸ್ಕೃತಗೊಂಡಿವೆ.

uttara-kannada
'ಲೋಕ' ಸಮರ: ಉತ್ತರಕನ್ನಡ

ಕಾರವಾರ:ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ನಾಮಪತ್ರಗಳ ಪರಿಶೀಲನೆಯು ವೀಕ್ಷಕರಾದ ರಾಜೀವ ರತನ್ ಸಮ್ಮುಖದಲ್ಲಿ ನಡೆಯಿತು. ಉತ್ತರಕನ್ನಡದಲ್ಲಿ 6 ಅಭ್ಯರ್ಥಿಗಳ ಒಟ್ಟು 17 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 13 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.

ರಾಷ್ಟ್ರೀಯ ಜನ ಸಂಭಾವನಾ ಪಕ್ಷದ ನಾಗರಾಜ ಶ್ರೀಧರ್ ಶೇಟ್, ಪಕ್ಷೇತರ ಆಭ್ಯರ್ಥಿಗಳಾದ ರೂಪಾ ನಾಯ್ಕ್, ಉಮೇಶ್ ದೈವಜ್ಞ, ಮಡಗಾಂವಕರ್ ಪ್ರಮೋದ್, ಸುಜಯ್ ಸುಧೀರ್ ಗೋಕರ್ಣ ಮತ್ತು ಪ್ರಕಾಶ್ ಪಿಂಟೋ ಅವರ ನಾಮಪತ್ರಗಳು ತಿರಸ್ಕೃತಗೊಂಡಿವೆ.

ಕಾಂಗ್ರೆಸ್ ಅಭ್ಯರ್ಥಿ​​ ಡಾ. ಅಂಜಲಿ ನಿಂಬಾಳ್ಕರ್, ಭಾರತೀಯ ಜನತಾ ಪಕ್ಷದ ಕಾಗೇರಿ ವಿಶ್ವೇಶ್ವರ ಹೆಗಡೆ, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಗಣಪತಿ ಹೆಗಡೆ, ಕರ್ನಾಟಕ ರಾಷ್ಟ್ರ ಸಮಿತಿಯ ವಿನಾಯಕ ಮಂಗೇಶ ನಾಯ್ಕ್, ಉತ್ತಮ ಪ್ರಜಾಕೀಯ ಪಕ್ಷದ ಸುನೀಲ್ ಪವಾರ್, ಪಕ್ಷೇತರ ಅಭ್ಯರ್ಥಿಗಳಾದ ಕೃಷ್ಣಾಜಿ ಪಾಟೀಲ್, ಚಿದಾನಂದ ಹನುಮಂತಪ್ಪ ಹರಿಜನ, ನಿರಂಜನ್ ಉದಯಸಿನ್ಹಾ ಸರ್‌ದೇಸಾಯಿ, ನಾಗರಾಜ ಅನಂತ ಶಿರಾಲಿ, ಅರವಿಂದ ಗೌಡ, ಅವಿನಾಶ್ ನಾರಾಯಣ ಪಾಟೀಲ, ಕೃಷ್ಣ ಹನುಮಂತಪ್ಪ ಬಳೆಗಾರ, ರಾಜಶೇಖರ ಶಂಕರ ಹಿಂಡಲಗಿ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 22 ಕೊನೆಯ ದಿನವಾಗಿದ್ದು, ಮೇ 7 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

ಭಾರತ ಚುನಾವಣಾ ಆಯೋಗದಿಂದ ಜಿಲ್ಲೆಗೆ ವೀಕ್ಷಕರಾಗಿ ನೇಮಕಗೊಂಡಿರುವ ರಾಜೀವ್ ರತನ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳನ್ನು ವೀಕ್ಷಿಸಿದರು. ನಾಮಪತ್ರಗಳ ಸ್ವೀಕಾರದ ಸಂದರ್ಭದಲ್ಲಿ ಚುನಾವಣಾ ಆಯೋಗ ನೀಡಿರುವ ಎಲ್ಲ ನಿರ್ದೇಶನಗಳನ್ನು ಪಾಲಿಸುತ್ತಿರುವ ಕುರಿತಂತೆ ವೀಕ್ಷಣೆ ನಡೆಸಿದರು. ಜಿಲ್ಲೆಯಲ್ಲಿ ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಇದುವರೆಗೆ ನಡೆಸಿರುವ ಸಿದ್ಧತೆಗಳ ಕುರಿತಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರೊಂದಿಗೆ ರಾಜೀವ್ ರತನ್ ಚರ್ಚಿಸಿದರು.

ಕಂಟ್ರೋಲ್ ರೂಂಗೆ ವೆಚ್ಚ ವೀಕ್ಷಕರ ಭೇಟಿ:ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತೆರದಿರುವ 24*7 ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂಗೆ ಚುನಾವಣಾ ವೆಚ್ಚ ವೀಕ್ಷಕರಾದ ಪ್ರಶಾಂತ್ ಸಿಂಗ್ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕಂಟ್ರೋಲ್ ರೂಂನಲ್ಲಿ ವಿಡಿಯೋ ವೀಕ್ಷಣಾ ಕಾರ್ಯ, ಚೆಕ್ ಪೋಸ್ಟ್ ಸಿಸಿಟಿವಿ ಪರಿಶೀಲನೆ, ಜಿ.ಪಿ.ಎಸ್. ಪರಿಶೀಲನೆ, ಸಿವಿಜಿಲ್ ದೂರು ನಿರ್ವಹಣೆ, ಉಚಿತ ಸಹಾಯವಾಣಿ 1950 ಕಾರ್ಯವಿಧಾನ, ಸೋಷಿಯಲ್ ಮೀಡಿಯಾ ತಂಡದ ಪರಿಶೀಲನಾ ಕಾರ್ಯಗಳು, ಎಂ.ಸಿ.ಎಂ.ಸಿ ಕಾರ್ಯ ನಿರ್ವಹಣೆ ಕುರಿತಂತೆ ಅವರು ಪರಿಶೀಲಿಸಿದರು. ಕಂಟ್ರೋಲ್ ರೂಂನಲ್ಲಿ ನಿಯೋಜನೆ ಆಗಿರುವ ಎಲ್ಲಾ ಸಿಬ್ಬಂದಿ ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.

ಇದನ್ನೂ ಓದಿ:ಹಾವೇರಿ ಲೋಕಸಭಾ ಕ್ಷೇತ್ರದಿಂದ 47 ನಾಮಪತ್ರ ಸಲ್ಲಿಕೆ: ಚುನಾವಣಾಧಿಕಾರಿ - Haveri Constituency Nomination

ABOUT THE AUTHOR

...view details