ಕರ್ನಾಟಕ

karnataka

ಭಾರತ vs ಇಂಗ್ಲೆಂಡ್ 4ನೇ ಟೆಸ್ಟ್: ತೀವ್ರ ಚರ್ಚೆಗೆ ಗ್ರಾಸವಾದ ರಾಂಚಿಯ ಪಿಚ್, ಪೋಪ್​ ಹೇಳಿದ್ದು ಹೀಗೆ

By PTI

Published : Feb 21, 2024, 7:57 PM IST

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಫೆಬ್ರವರಿ 23 ರಿಂದ ರಾಂಚಿಯಲ್ಲಿ ನಡೆಯಲಿದೆ. ರಾಂಚಿಯ ಪಿಚ್ ಬ್ಯಾಟ್ಸ್ ಮನ್​‘ ಗಳಿಗೆ ಹೊಂದುತ್ತದೆಯೇ ಅಥವಾ ಬೌಲರ್​ಗಳಿಗೆ ಸಹಕಾರಿಯಾಗಲಿದೆಯೇ ಎಂಬ ಚರ್ಚೆ ತೀವ್ರಗೊಂಡಿದೆ. ಪಂದ್ಯದ ಆರಂಭದಿಂದಲೇ ಚೆಂಡು ತಿರುಗಲು ಆರಂಭಿಸಿದರೆ ಟಾಸ್‌ಗೆ ಯಾವುದೇ ಪಾತ್ರವಿಲ್ಲ ಎಂದು ಇಂಗ್ಲೆಂಡ್‌ನ ಉಪನಾಯಕ ಒಲಿ ಪೋಪ್ ಹೇಳಿದ್ದಾರೆ.

Spin friendly wicket  England vs India test match  vice captain Ollie Pope  ಭಾರತ vs ಇಂಗ್ಲೆಂಡ್ 4ನೇ ಟೆಸ್ಟ್  ರಾಂಚಿಯ ಪಿಚ್
ತೀವ್ರ ಚರ್ಚೆಗೆ ಗ್ರಾಸವಾದ ರಾಂಚಿಯ ಪಿಚ್, ಪೋಪ್​ ಹೇಳಿದ್ದು ಹೀಗೆ!

ನವದೆಹಲಿ:ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡ ಶುಕ್ರವಾರದಿಂದ ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯವನ್ನು ಎದುರಿಸಲಿದೆ. 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ, ಮಹೇಂದ್ರ ಸಿಂಗ್ ಧೋನಿ ಅವರ ತವರು ರಾಂಚಿಯಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯವನ್ನು ಗೆಲ್ಲಲು ಬಯಸಿದೆ. ಮತ್ತೊಂದೆಡೆ ಪ್ರವಾಸಿ ಇಂಗ್ಲೆಂಡ್ ತಂಡ ಪ್ರತಿದಾಳಿ ನಡೆಸುವ ಉತ್ಸಾಹದಲ್ಲಿದೆ.

ರಾಂಚಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಇಂಗ್ಲೆಂಡ್‌ನ ಉಪನಾಯಕ ಒಲಿ ಪೋಪ್, ತಮ್ಮ ತಂಡಕ್ಕೆ ಟರ್ನಿಂಗ್ ಟ್ರ್ಯಾಕ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಏಕೆಂದರೆ ನಾವು ನಮ್ಮ ಬೌಲಿಂಗ್‌ನಿಂದ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಅತ್ಯುತ್ತಮ ಸ್ಪಿನ್ನರ್‌ಗಳು ನಮ್ಮ ಬಳಿ ಇದ್ದಾರೆ. ಪಂದ್ಯದ ಆರಂಭದಿಂದಲೇ ಸ್ಪಿನ್ನರ್‌ಗಳ ಸಹಾಯ ಪಡೆದರೆ ಪಂದ್ಯ ಸಮವಾಗಿ ಸಾಗುತ್ತದೆ ಎಂಬ ಕಾರಣಕ್ಕೆ ಪಿಚ್ 'ಟರ್ನ್' ತೆಗೆದುಕೊಳ್ಳುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಪೋಪ್ ಹೇಳುತ್ತಾರೆ.

ಹೈದರಾಬಾದ್, ವಿಶಾಖಪಟ್ಟಣಂ ಮತ್ತು ರಾಜ್‌ಕೋಟ್‌ನಲ್ಲಿನ ಎಲ್ಲಾ ಟೆಸ್ಟ್‌ಗಳು 'ಸ್ಪೋರ್ಟಿಂಗ್ ಪಿಚ್‌ಗಳನ್ನು' ಹೊಂದಿದ್ದವು (ಇದು ಸ್ಪಿನ್ನರ್‌ಗಳು, ವೇಗದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿದೆ). ಇದು ಪ್ರಾಥಮಿಕವಾಗಿ ಸ್ಪಿನ್ನರ್‌ಗಳಿಗೆ ಹೊಂದಿಕೆಯಾಗುವುದಿಲ್ಲ. ಮೊದಲ ಎಸೆತದಿಂದ ಪಿಚ್​ ತಿರುಗಿದರೆ ಟಾಸ್‌ನ ಪಾತ್ರವು ಗಂಭೀರತೆ ಬೀರುವುದಿಲ್ಲ. ಇದರಿಂದ ಮೈದಾನದಲ್ಲಿ ಸಮಾನ ಪೈಪೋಟಿ ಏರ್ಪಡಲಿದೆ. ನಾವು ಮೊದಲು ಬ್ಯಾಟಿಂಗ್ ಮಾಡುವ ಮೂಲಕ ಮೊದಲ ಟೆಸ್ಟ್ ಗೆದ್ದಿದ್ದೇವೆ. ಭಾರತ ಕೊನೆಯ ಎರಡು ಟೆಸ್ಟ್‌ಗಳಲ್ಲಿ ಮೊದಲು ಬ್ಯಾಟಿಂಗ್ ಮಾಡುವ ಮೂಲಕ ಗೆದ್ದಿದೆ. ನೀವು ಸ್ವಲ್ಪ ಫ್ಲಾಟ್ ಪಿಚ್​ನಲ್ಲಿ ಮೊದಲು ಬ್ಯಾಟ್ ಮಾಡಿದರೆ, ಅದು ಫಲಿತಾಂಶವನ್ನು ನಿರ್ಧರಿಸುವುದಿಲ್ಲ. ಆದರೆ ಅದು ನಿಮಗೆ ಪ್ರಯೋಜನವನ್ನು ನೀಡುತ್ತದೆ ಎಂದರು.

ಹೈದರಾಬಾದ್ ಟೆಸ್ಟ್‌ನಲ್ಲಿ 196 ರನ್ ಗಳಿಸಿದ್ದ ಪೋಪ್: ಹೈದರಾಬಾದ್‌ನಲ್ಲಿ ಇಂಗ್ಲೆಂಡ್‌ನ ಆಕ್ರಮಣಕಾರಿ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾದ ಪೋಪ್ ಮಾತನಾಡಿ, ನಾವು ನಿರೀಕ್ಷಿಸಿದಂತೆ ಪಿಚ್​ ವರ್ತಿಸಿದರೆ ಪಂದ್ಯದಲ್ಲಿ ನಾವು ಮೇಲುಗೈ ಸಾಧಿಸುತ್ತೇವೆ. ನಮ್ಮಲ್ಲಿ ಕೆಲವು ಯುವ ಸ್ಪಿನ್ನರ್‌ಗಳಿದ್ದಾರೆ. ಅವರು ಕೆಲವು ಉತ್ತಮ ಪಿಚ್‌ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಾರೆ. ಇದು ಖಂಡಿತವಾಗಿಯೂ ನಮಗೆ ವಿಕೆಟ್ ಪಡೆಯುವ ಅವಕಾಶಗಳನ್ನು ನೀಡುತ್ತದೆ. ಸಮತಟ್ಟಾದ ಪಿಚ್‌ನಲ್ಲೂ ಅವರು ಉತ್ತಮ ಕೆಲಸ ಮಾಡಿದ್ದಾರೆ. ಭಾರತೀಯ ಸ್ಪಿನ್ನರ್‌ಗಳ ಪ್ರಭಾವವನ್ನು ಕಡಿಮೆ ಮಾಡಲು ಪೋಪ್ ಸ್ವೀಪ್ ಹೊಡೆತಗಳನ್ನು ಬಾರಿಸಿದರು ಮತ್ತು 196 ರನ್‌ಗಳ ಇನಿಂಗ್ಸ್‌ಗಳನ್ನು ಆಡಿದರು. ಇದು ಸರಣಿಯ ಆರಂಭಿಕ ಪಂದ್ಯವನ್ನು ಇಂಗ್ಲೆಂಡ್ ಗೆಲ್ಲಲು ಸಹಾಯ ಮಾಡಿತ್ತು.

ಹ್ಯಾಟ್ರಿಕ್ ಗೆಲುವಿನ ಮೇಲೆ ಟೀಂ ಇಂಡಿಯಾ ಕಣ್ಣು:ಹೈದರಾಬಾದ್ ಟೆಸ್ಟ್ ಪಂದ್ಯವನ್ನು ಸೋತ ನಂತರ, ಭಾರತ ಅದ್ಭುತ ಪುನರಾಗಮನವನ್ನು ಮಾಡಿತು. ವಿಶಾಖಪಟ್ಟಣಂ ಮತ್ತು ರಾಜ್‌ಕೋಟ್‌ನಲ್ಲಿ ಭಾರತ ತಂಡ ಗೆಲುವು ಸಾಧಿಸಿತು. ಟೀಂ ಇಂಡಿಯಾ ರಾಂಚಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ತವಕದಲ್ಲಿದೆ. ಆದರೆ ಇಂಗ್ಲೆಂಡ್ ಹ್ಯಾಟ್ರಿಕ್ ಸೋಲು ತಪ್ಪಿಸಲು ಪ್ರಯತ್ನಿಸುತ್ತಿದೆ. ಬೆನ್ ಸ್ಟೋಕ್ಸ್ ನಾಯಕತ್ವದ ನಂತರ ಎರಡನೇ ಬಾರಿಗೆ ಇಂಗ್ಲೆಂಡ್ ತಂಡ ಸತತ ಎರಡು ಟೆಸ್ಟ್‌ಗಳಲ್ಲಿ ಸೋಲು ಅನುಭವಿಸಬೇಕಾಯಿತು. ಈ ಸಮಯದಲ್ಲಿ ಭಾರತ ತಂಡದ ಮನೋಬಲ ಬಹಳಷ್ಟು ಹೆಚ್ಚಿದೆ. ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ತಮ್ಮ ಚೊಚ್ಚಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅವರು ರಾಂಚಿಯಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

ಓದಿ:ಭಾರತ vs ಇಂಗ್ಲೆಂಡ್ 4ನೇ ಟೆಸ್ಟ್‌ನಿಂದ ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಔಟ್, ಮುಖೇಶ್ ಕುಮಾರ್​ಗೆ ಸ್ಥಾನ

ABOUT THE AUTHOR

...view details