ಕರ್ನಾಟಕ

karnataka

ಇಂಗ್ಲೆಂಡ್​ ವಿರುದ್ಧದ ಅಂತಿಮ ಟೆಸ್ಟ್​​ನಲ್ಲಿ ರೋಹಿತ್​ ಮಿಂಚು: ಹಲವು ದಾಖಲೆಗಳು ಪುಡಿ ಪುಡಿ

By ETV Bharat Karnataka Team

Published : Mar 8, 2024, 6:42 PM IST

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಶುಕ್ರವಾರ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ಭರ್ಜರಿ ಶತಕದೊಂದಿಗೆ ಹಲವು ದಾಖಲೆಗಳನ್ನು ಮಾಡಿದ್ದಾರೆ. ಅವರೀಗ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಗಳಿಸಿದ ಭಾರತೀಯ ಆರಂಭಿಕರ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್ ಜೊತೆಗೆ ಜಂಟಿ ಸ್ಥಾನ ಹಂಚಿಕೊಂಡಿದ್ದಾರೆ.

Rohit Sharma achieves historic feat; equals Sunil Gavaskar's unique record
ಇಂಗ್ಲೆಂಡ್​ ವಿರುದ್ಧದ ಅಂತಿಮ ಟೆಸ್ಟ್​​ನಲ್ಲಿ ರೋಹಿತ್​ ಮಿಂಚು: ಹಲವು ದಾಖಲೆಗಳು ಪುಡಿ ಪುಡಿ

ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್​ ನಲ್ಲಿ ಕ್ಯಾಪ್ಟನ್​ ರೋಹಿತ್ ಶರ್ಮಾ 103 ರನ್‌ಗಳ ಅದ್ಭುತ ಆಟವಾಡಿ ಕೆಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ಭಾರತದ ನಾಯಕ 162 ಎಸೆತಗಳಲ್ಲಿ ಅಮೋಘ 103 ರನ್​ಗಳನ್ನು ಬಾರಿಸಿ ಗಮನ ಸೆಳೆದಿದ್ದಾರೆ. ಅವರ ಆಟದಲ್ಲಿ ಮೂರು ಸಿಕ್ಸರ್‌ಗಳೂ ಇದ್ದವು. ಈ ಶತಕದೊಂದಿಗೆ ಶರ್ಮಾ, ಸುನಿಲ್ ಗವಾಸ್ಕರ್ ಅವರೊಂದಿಗೆ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಭಾರತೀಯ ಆರಂಭಿಕರ ಪಟ್ಟಿಯಲ್ಲಿ ಜಂಟಿ ಸ್ಥಾನ ಪಡೆದುಕೊಂಡಿದ್ದಾರೆ. ವಿಜಯ್ ಮರ್ಚೆಂಟ್ ಹಾಗೂ ಮುರಳಿ ವಿಜಯ್ ಅವರ ಹೆಸರಿನಲ್ಲಿ ತಲಾ ಮೂರು ಶತಕಗಳಿವೆ.

2021 ರಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು (6)ಬಾರಿಸಿದ ಗರಿಮೆಗೂ ರೋಹಿತ್​ ಶರ್ಮಾ ಪಾತ್ರರಾಗಿದ್ದಾರೆ. ಶುಭಮನ್ ಗಿಲ್ ಅವರ ಹೆಸರಿನಲ್ಲಿ ನಾಲ್ಕು ಶತಕಗಳಿವೆ. ಇನ್ನು ರವೀಂದ್ರ ಜಡೇಜಾ ಇದುವರೆಗೆ ಮೂರು ಶತಕಗಳನ್ನು ಬಾರಿಸಿದ್ದಾರೆ. ಯಶಸ್ವಿ ಜೈಸ್ವಾಲ್, ರಿಷಬ್ ಪಂತ್ ಮತ್ತು ಕೆಎಲ್ ರಾಹುಲ್ ಅವರ ಹೆಸರಿನಲ್ಲಿ ತಲಾ ಮೂರು ಶತಕಗಳಿವೆ.

ಕ್ರೀಸ್‌ನಲ್ಲಿ ನೆಲೆ ನಿಂತಿರುವ ರೋಹಿತ್ ಶರ್ಮಾ ಮುರಿದ ಇತರ ದಾಖಲೆಗಳು ಹೀಗಿವೆ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಅತಿ ಹೆಚ್ಚು ಶತಕಗಳು

49 - ಡೇವಿಡ್ ವಾರ್ನರ್

45 - ಸಚಿನ್ ತೆಂಡೂಲ್ಕರ್

43 - ರೋಹಿತ್ ಶರ್ಮಾ

42 - ಕ್ರಿಸ್ ಗೇಲ್

41 - ಸನತ್ ಜಯಸೂರ್ಯ

40 - ಮ್ಯಾಥ್ಯೂ ಹೇಡನ್

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಬ್ಯಾಟರ್‌ಗಳಿಂದ ಅತಿ ಹೆಚ್ಚು ಶತಕಗಳು

100 - ಸಚಿನ್ ತೆಂಡೂಲ್ಕರ್

80 - ವಿರಾಟ್ ಕೊಹ್ಲಿ

48 - ರಾಹುಲ್ ದ್ರಾವಿಡ್

48 - ರೋಹಿತ್ ಶರ್ಮಾ

38 - ವೀರೇಂದ್ರ ಸೆಹ್ವಾಗ್

38 - ಸೌರವ್ ಗಂಗೂಲಿ

ಇಂಗ್ಲೆಂಡ್‌ ತಂಡವನ್ನು ಮೊದಲ ಇನ್ನಿಂಗ್ಸ್​ನಲ್ಲಿ 218 ರನ್‌ಗಳಿಗೆ ಆಲೌಟ್ ಮಾಡಿದ ನಂತರ ಭಾರತ ಈ ಪಂದ್ಯದ ಮೇಲೂ ಹಿಡಿತ ಸಾಧಿಸಿದೆ. ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮಾ ಕೊನೆಯ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಶತಕಗಳನ್ನು ಬಾರಿಸಿದ್ದಾರೆ. ಇವರಿಬ್ಬರು ಎರಡನೇ ವಿಕೆಟ್‌ಗೆ 171 ರನ್‌ಗಳ ಜೊತೆಯಾಟ ನೀಡಿದ್ದು, ಗಮನ ಸೆಳೆಯಿತು.

ಇದನ್ನೂ ಓದಿ:WPL: ಯುಪಿ ವಾರಿಯರ್ಸ್ ಮಣಿಸಿ ಮತ್ತೆ ಗೆಲುವಿನ ಹಳಿಗೆ ಮರಳಿದ ಮುಂಬೈ ಇಂಡಿಯನ್ಸ್

ABOUT THE AUTHOR

...view details