ಕರ್ನಾಟಕ

karnataka

ಐಪಿಎಲ್​ಗೂ ಮುನ್ನ ಮಹಾಕಾಲ್​ ದರ್ಶನ ಪಡೆದ ಕೆಎಲ್;​ ಭಸ್ಮಾರತಿಯಲ್ಲಿ ಪಾಲ್ಗೊಂಡು ಭಾವುಕರಾದ ರಾಹುಲ್​

By ETV Bharat Karnataka Team

Published : Mar 20, 2024, 1:51 PM IST

KL Rahul Mahakaleshwar Temple visit : ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಕೆಎಲ್ ರಾಹುಲ್ ಅವರು ತಮ್ಮ ಕುಟುಂಬದೊಂದಿಗೆ ಬುಧವಾರ ಉಜ್ಜಯಿನಿಗೆ ಆಗಮಿಸಿ ಮಹಾಕಾಲ್ ದೇವರಿಗೆ ಪೂಜೆ ಸಲ್ಲಿಸಿದರು. ಕೆಎಲ್ ರಾಹುಲ್ ಅವರು ಮಹಾಕಾಲ್ ಭಸ್ಮಾರತಿಯಲ್ಲಿ ಪಾಲ್ಗೊಂಡರು.

indian cricketer kl rahul ujjain  kl rahul darshan of mahakal  ujjain mahakal bhasma aarti
ಭಸ್ಮ ಆರತಿಯಲ್ಲಿ ಭಾಗಿಯಾಗಿ ಭಾವುಕರಾದ ರಾಹುಲ್

ಭಸ್ಮ ಆರತಿಯಲ್ಲಿ ಭಾಗಿಯಾಗಿ ಭಾವುಕರಾದ ರಾಹುಲ್

ಉಜ್ಜಯಿನಿ (ಮಧ್ಯಪ್ರದೇಶ): ಕ್ರಿಕೆಟಿಗ ಕೆಎಲ್ ರಾಹುಲ್ ಕುಟುಂಬ ಸಮೇತರಾಗಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಮುಂಜಾನೆ ಆಗಮಿಸಿದರು. ಬೆಳಗಿನ ಜಾವ 4 ಗಂಟೆಗೆ ನಡೆದ ಬಾಬಾ ಮಹಾಕಾಲ್​ನ ಭಸ್ಮ ಆರತಿಯಲ್ಲಿ ಕೆ.ಎಲ್. ರಾಹುಲ್ ಕುಟುಂಬ ಸದಸ್ಯರೊಂದಿಗೆ ಪಾಲ್ಗೊಂಡರು. ಮಹಾಕಾಲ್ ದೇವಸ್ಥಾನದ ನದಿ ಸಭಾಂಗಣದಲ್ಲಿ ಕುಳಿತಿದ್ದ ಕೆಎಲ್ ರಾಹುಲ್ ಮತ್ತು ಅವರ ಕುಟುಂಬ ಸದಸ್ಯರು ಭಸ್ಮ ಆರತಿಯ ದರ್ಶನ ಪಡೆದು ಭಾವುಕರಾದರು. ಭಸ್ಮಾರತಿ ಮುಗಿದ ನಂತರ ಕೆಎಲ್ ರಾಹುಲ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಗರ್ಭಗುಡಿಯ ಬಾಗಿಲಿನಿಂದ ಮಹಾಕಾಲ್ ದೇವರಿಗೆ ಪೂಜೆ ಮತ್ತು ಅಭಿಷೇಕ ನೆರವೇರಿಸಿದರು.

ಮಹಾಕಾಳೇಶ್ವರ ದೇವಸ್ಥಾನದ ಅರ್ಚಕ ಆಶಿಶ್ ಗುರು ಕೆ.ಎಲ್. ರಾಹುಲ್ ಪೂಜೆ ನೆರವೇರಿಸಿದರು. ಈ ಹಿಂದೆ 2023 ರಲ್ಲಿ ಇಂದೋರ್‌ನಲ್ಲಿ ನಡೆದ ಪಂದ್ಯದ ವೇಳೆ ಕೆಎಲ್ ರಾಹುಲ್ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆ ವೇಳೆ ಕೆಎಲ್ ರಾಹುಲ್ ಅವರ ಪತ್ನಿ ಅಥಿಯಾ ಕೂಡ ಇದ್ದರು. ಇದೀಗ ಕೆಎಲ್ ರಾಹುಲ್ ಐಪಿಎಲ್ ತಯಾರಿಯಲ್ಲಿದ್ದಾರೆ. ಇದರ ಮಧ್ಯೆ, ಅವರು ಸಮಯ ತೆಗೆದುಕೊಂಡು ಬಾಬಾ ಮಹಾಕಾಲ್ ದೇವಸ್ಥಾನಕ್ಕೆ ಭೇಟಿ ನೀಡಿದರು.

ಐಪಿಎಲ್ 2024ರಲ್ಲಿ ಉತ್ತಮ ಪ್ರದರ್ಶನ ನೀಡುವುದಾಗಿ ಮತ್ತು ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಲಿ ಎಂದು ಪ್ರಾರ್ಥಿಸಿದರು. ಭಗವಾನ್​ ಮಹಾಕಾಲ್ ದರ್ಶನಕ್ಕೆ ಅನೇಕ ಕ್ರಿಕೆಟಿಗರು ಭೇಟಿ ನೀಡಿದ್ದಾರೆ. ವಿರಾಟ್ ಕೊಹ್ಲಿಯಿಂದ ಹಿಡಿದು ಹಲವು ಕ್ರಿಕೆಟಿಗರು ಬಾಬಾ ಮಹಾಕಾಲ್ ಅವರ ಆಶೀರ್ವಾದ ಪಡೆದು ಪುನೀತರಾಗಿದ್ದಾರೆ.

ಕಳೆದ ವಾರ, ಕ್ರಿಕೆಟಿಗ ಉಮೇಶ್ ಯಾದವ್ ಮಹಾಕಾಲ್ ದರ್ಶನಕ್ಕಾಗಿ ಉಜ್ಜಯಿನಿಗೆ ಬಂದಿರುವುದು ಗಮನಾರ್ಹ. ಉಮೇಶ್ ಯಾದವ್ ಕೂಡ ಮುಂಜಾನೆ ಭಸ್ಮಾರತಿಯ ದರ್ಶನ ಪಡೆದರು. ಮಹಾಕಾಲ್ ದೇವರ ಬಳಿಗೆ ಬರುವ ಭಕ್ತರು ಯಾರೂ ಖಾಲಿ ಕೈಯಲ್ಲಿ ಹೋಗುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲ ವರ್ಗದ ಸೆಲೆಬ್ರಿಟಿಗಳು ಇಲ್ಲಿಗೆ ನಿರಂತರವಾಗಿ ಬರುತ್ತಲೇ ಇರುತ್ತಾರೆ.

ಚಿತ್ರರಂಗದ ತಾರೆಯರು ಕೂಡ ಬಾಬಾ ಮಹಾಕಾಲ್‌ ದರ್ಶನ ಪಡೆಯಲು ನಿಯಮಿತವಾಗಿ ಬರುತ್ತಿರುತ್ತಾರೆ. ಇಂದೋರ್ ಸುತ್ತಮುತ್ತ ಚಲನಚಿತ್ರಗಳನ್ನು ಚಿತ್ರೀಕರಿಸುವ ಮೊದಲು, ಇಡೀ ಚಿತ್ರ ತಂಡದವರು ಬಾಬಾ ಮಹಾಕಾಲ್ ದರ್ಶನ ಪಡೆಯುತ್ತಾರೆ. ರಾಜಕಾರಣಿಗಳು ಸಹ ಇಲ್ಲಿಗೆ ನಿರಂತರವಾಗಿ ಭೇಟಿ ನೀಡುತ್ತಲೇ ಇರುತ್ತಾರೆ.

ಓದಿ:14 ತಿಂಗಳುಗಳ ಬಳಿಕ ವೃತ್ತಿಪರ ಕ್ರಿಕೆಟ್‌ಗೆ ಮರಳಲಿರುವ ರಿಷಭ್ ಪಂತ್; ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಘೋಷಣೆ

ABOUT THE AUTHOR

...view details