ಕರ್ನಾಟಕ

karnataka

ಈ ವರ್ಷದ ಅಂತ್ಯದಲ್ಲಿ "ಬಾರ್ಡರ್-ಗವಾಸ್ಕರ್" ಟೆಸ್ಟ್​ ಸರಣಿ ಆರಂಭವಾಗುವ ಸಾಧ್ಯತೆ - Border Gavaskar Test series

By ETV Bharat Karnataka Team

Published : Mar 25, 2024, 3:57 PM IST

2024 - 25ರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಐದು ಟೆಸ್ಟ್​ ಪಂದ್ಯಗಳು ನಡೆಯಲಿದ್ದು, ಮುಂಬರುವ ದಿನಗಳಲ್ಲಿ ವೇಳಾಪಟ್ಟಿ ಬಿಡುಗಡೆಯಾಗಲಿದೆ.

ಬಾರ್ಡರ್-ಗವಾಸ್ಕರ್
ಬಾರ್ಡರ್-ಗವಾಸ್ಕರ್

ನವದೆಹಲಿ : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ "ಬಾರ್ಡರ್-ಗವಾಸ್ಕರ್" ಟೆಸ್ಟ್ ಸರಣಿ ಈ ವರ್ಷದ ಅಂತ್ಯದಲ್ಲಿ ಆರಂಭವಾಗಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಐದು ಟೆಸ್ಟ್​ ಪಂದ್ಯಗಳ ಸರಣಿ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​ ಘೋಷಿಸಿವೆ.

ಪ್ರಸ್ತುತ ಭಾರತ ತಂಡದ ಆಟಗಾರರು ಸೇರಿದಂತೆ ಸಾಗರೋತ್ತರದ ಆಟಗಾರರು ಇಂಡಿಯನ್​ ಪ್ರೀಮಿಯರ್​ ಲೀಗ್ (ಐಪಿಎಲ್​)​ನ 17ನೇ ಆವೃತ್ತಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ಟೂರ್ನಿ ಬಳಿಕ ಚುಟುಕು ಕ್ರಿಕೆಟ್​ ವಿಶ್ವಕಪ್​ ಆಡಲಿರುವ ಭಾರತ ತಂಡ ನವೆಂಬರ್​ ತಿಂಗಳಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ​. 1991-92ರ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾ ಮತ್ತು ಭಾರತ ಐದು ಟೆಸ್ಟ್‌ ಪಂದ್ಯಗಳ ಸರಣಿಯನ್ನು ಆಡಲಿವೆ. ಮುಂಬರುವ ದಿನಗಳಲ್ಲಿ ಈ ಸರಣಿಯ ವೇಳಾಪಟ್ಟಿ ಬಿಡುಗಡೆಯಾಗಲಿದೆ.

ಇನ್ನು ಈ ಕುರಿತು ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, 'ಟೆಸ್ಟ್ ಕ್ರಿಕೆಟ್‌ನ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಲು ಬಿಸಿಸಿಐ ದೃಢವಾಗಿ ನಿಂತಿದೆ. ಕ್ರಿಕೆಟ್​ ನೈಜ ಸ್ವರೂಪವನ್ನು ನಾವು ಅತ್ಯುನ್ನತವಾಗಿ ಪರಿಗಣಿಸುತ್ತೇವೆ. ಬಾರ್ಡರ್ - ಗವಾಸ್ಕರ್ ಟ್ರೋಫಿಯನ್ನು ಐದು ಟೆಸ್ಟ್ ಪಂದ್ಯಗಳಿಗೆ ವಿಸ್ತರಿಸುವಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗಿನ ನಮ್ಮ ನಿರಂತರ ಸಹಯೋಗವು ಟೆಸ್ಟ್ ಕ್ರಿಕೆಟ್‌ನ ಪ್ರಾಮುಖ್ಯತೆ ಉತ್ತೇಜಿಸುವುದನ್ನು ಪ್ರತಿಬಿಂಬಿಸುತ್ತದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯವು ರೋಮಾಂಚನಕಾರಿಯಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ತನ್ನ ಉತ್ಸಾಹವನ್ನು ಹೆಚ್ಚಿಸಿದೆ. ಜೊತೆಗೆ ವಿಶ್ವದಾದ್ಯಂತದ ಕ್ರಿಕೆಟ್​ ಅಭಿಮಾನಿಗಳನ್ನು ಆಕರ್ಷಿಸುತ್ತದೆ. ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಮೈಕ್ ಬೇರ್ಡ್ ಅವರು ಎರಡು ಶ್ರೇಷ್ಠ ಕ್ರಿಕೆಟ್ ರಾಷ್ಟ್ರಗಳ ನಡುವಿನ ಪೈಪೋಟಿ ಮತ್ತು ಅವುಗಳ ದಾಖಲೆಗಳನ್ನು ಗಮನಿಸಿದರೆ, ಬಾರ್ಡರ್ - ಗವಾಸ್ಕರ್ ಟ್ರೋಫಿಯನ್ನು ಐದು ಟೆಸ್ಟ್‌ಗಳಿಗೆ ವಿಸ್ತರಿಸಿರುವುದು ನಮಗೆ ತುಂಬಾ ಸಂತಸ ತಂದಿದೆ. ಕ್ರಿಕೆಟ್ ಲೋಕದ ಕಣ್ಣು ಆಸ್ಟ್ರೇಲಿಯಾದ ಮೇಲಿದ್ದು, ಪ್ಯಾಟ್ ಕಮಿನ್ಸ್ ಅವರ ವಿಶ್ವ ಚಾಂಪಿಯನ್ ತಂಡವು ಭಾರತಕ್ಕೆ ಕಠಿಣ ಸವಾಲು ನೀಡುವ ವಿಶ್ವಾಸವಿದೆ. ಬಿಸಿಸಿಐ ಜೊತೆಗಿನ ಸಹಕಾರಕ್ಕಾಗಿ ಆಸ್ಟ್ರೇಲಿಯಾ ಕ್ರಿಕೆಟ್​ಗೆ ನಾವು ಕೃತಜ್ಞರಾಗಿರುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತ ಮೇಲುಗೈ :ಉಭಯ ತಂಡಗಳ ನಡುವಿನ ಕಳೆದ ನಾಲ್ಕು ಟೆಸ್ಟ್ ಸರಣಿಗಳಲ್ಲಿ ಭಾರತ ತನ್ನ ಪ್ರಾಬಲ್ಯವನ್ನು ಸಾಧಿಸಿದೆ. 2018-19 ಮತ್ತು 2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಗಳನ್ನು ಟೀಮ್​ ಇಂಡಿಯಾ ಗೆದ್ದು ಬೀಗಿದೆ. 2018-19ರಲ್ಲಿ ಸರಣಿ ವಶ ಪಡಿಸಿಕೊಳ್ಳುವ ಮೂಲಕ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದ ಮೊದಲ ಏಷ್ಯಾದ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಇದನ್ನೂ ಓದಿ :IPL: 6 ರನ್‌ಗಳಿಂದ ಮುಂಬೈ ಮಣಿಸಿದ ಗುಜರಾತ್; ಗಿಲ್ ನಾಯಕತ್ವದಲ್ಲಿ ಮೊದಲ ಗೆಲುವು - Gujarat Titans

ABOUT THE AUTHOR

...view details