ಕರ್ನಾಟಕ

karnataka

ಲಂಡನ್ ಮೇಯರ್ ಚುನಾವಣೆ: ಹಾಲಿ ಮೇಯರ್​ ಸಾದಿಕ್ ಖಾನ್‌ಗೆ ಸವಾಲು ಹಾಕುತ್ತಿರುವ ದೆಹಲಿ ಮೂಲದ ತರುಣ್ ಗುಲಾಟಿ - LONDON MAYORAL POLL

By ETV Bharat Karnataka Team

Published : Apr 29, 2024, 1:29 PM IST

ಲಂಡನ್ ಮೇಯರ್ ಚುನಾವಣೆಯಲ್ಲಿ ಹಾಲಿ ಮೇಯರ್​ ಸಾದಿಕ್ ಖಾನ್‌ಗೆ ದೆಹಲಿ ಮೂಲದ, ಬ್ಯಾಂಕರ್​ ತರುಣ್ ಗುಲಾಟಿ ಅವರು ಸವಾಲು ಹಾಕಲು ಮುಂದಾಗಿದ್ದಾರೆ.

GAZA  SADIQ KHAN  DELHI BORN BANKER TARUN GULATI  LONDON MAYORAL POLL
ಲಂಡನ್ ಮೇಯರ್ ಚುನಾವಣೆ: ಹಾಲಿ ಅಧ್ಯಕ್ಷ ಸಾದಿಕ್ ಖಾನ್‌ಗೆ ಸವಾಲು ಹಾಕುತ್ತಿರುವ ದೆಹಲಿ ಮೂಲದ ತರುಣ್ ಗುಲಾಟಿ ಯಾರು?

ಲಂಡನ್: ದೆಹಲಿ ಮೂಲದ ಉದ್ಯಮಿ ತರುಣ್ ಗುಲಾಟಿ ಅವರು ಮೇ 2 ರಂದು ಲಂಡನ್ ಮೇಯರ್ ಚುನಾವಣೆಯಲ್ಲಿ ಹಾಲಿ ಮೇಯರ್​ ಸಾದಿಕ್ ಖಾನ್‌ಗೆ ಸವಾಲು ಹಾಕುತ್ತಿದ್ದಾರೆ. ಲಂಡನ್ ಮೇಯರ್ ಹುದ್ದೆಯ ರೇಸ್‌ನಲ್ಲಿರುವ ದೆಹಲಿ ಮೂಲದ ಈ ವ್ಯಕ್ತಿ ತರುಣ್ ಗುಲಾಟಿ ಅವರು, ಪಾಕಿಸ್ತಾನಿ ಮೂಲದ ಸಾದಿಕ್ ಖಾನ್‌ ಮಣಿಸಲು ತಂತ್ರ ಹೆಣೆದಿದ್ದಾರೆ. ಪಾಕಿಸ್ತಾನ ಮೂಲದ ಸಾದಿಕ್ ಖಾನ್ ಅವರು ಮೂರನೇ ಬಾರಿಗೆ ಗೆಲ್ಲುವ ಗುರಿಯೊಂದಿಗೆ ಇಂಗ್ಲೆಂಡ್‌ನ ಲಂಡನ್‌ ಮೇಯರ್ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದರೆ, ಈ ಬಾರಿ ಅವರಿಗೆ ಭಾರತೀಯ ಮೂಲದ ಅಭ್ಯರ್ಥಿ ತರುಣ್ ಗುಲಾಟಿ ಅವರು ಭಾರಿ ಪೈಪೋಟಿ ನೀಡುತ್ತಿದ್ದಾರೆ.

''ಎಲ್ಲಾ ರಾಜಕೀಯ ಪಕ್ಷಗಳಿಂದ ಲಂಡನ್ ನಾಗರಿಕರು ಅತೃಪ್ತರಾಗಿದ್ದಾರೆ. ಆದ್ರೆ, ನಾನು ಅನುಭವಿ ಸಿಇಒ ರೀತಿಯಲ್ಲಿ ಲಂಡನ್ ಅನ್ನು ಮುನ್ನಡೆಸಲು ಬಯಸುತ್ತೇನೆ. ಇದರಿಂದ ಪ್ರತಿಯೊಬ್ಬರಿಗೂ ಪ್ರಯೋಜನ ಆಗಲಿದೆ. ಉದ್ಯಮಿ ಮತ್ತು ಹೂಡಿಕೆ ತಜ್ಞರಾಗಿ ತಮ್ಮ ಅನುಭವವು ಲಂಡನ್‌ಗೆ ಸಹಾಯಕವಾಗಲಿದೆ'' ಎಂದು ತರುಣ್ ಗುಲಾಟಿ ಹೇಳಿದರು.

ತರುಣ್ ಗುಲಾಟಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ: ಮೇ 2 ರಂದು ನಡೆಯಲಿರುವ ಮೇಯರ್ ಚುನಾವಣೆಯಲ್ಲಿ 63 ವರ್ಷದ ಭಾರತೀಯ ಮೂಲದ ತರುಣ್ ಗುಲಾಟಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ತರುಣ್ ಅವರು ಮೇಯರ್ ಹುದ್ದೆಗಾಗಿ ಇತರ 13 ಅಭ್ಯರ್ಥಿಗಳ ವಿರುದ್ಧ ಅಖಾಡಕ್ಕೆ ಇಳಿದಿದ್ದಾರೆ. ತರುಣ್ ಆರು ದೇಶಗಳಲ್ಲಿ ಸಿಟಿ ಬ್ಯಾಂಕ್ ಮತ್ತು ಹೆಚ್‌ಎಸ್‌ಬಿಸಿಯೊಂದಿಗೆ ಕೆಲಸ ಮಾಡಿದ್ದಾರೆ. ಹೆಚ್​ಎಸ್​ಬಿಸಿಯಲ್ಲಿ ಅವರು ಅಂತಾರಾಷ್ಟ್ರೀಯ ವ್ಯವಸ್ಥಾಪಕರಾಗಿದ್ದರು.

ಈ ಕುರಿತು ಮಾತನಾಡಿರುವ ತರುಣ್ ಗುಲಾಟಿ, "ನಾನು ಲಂಡನ್ ಅನ್ನು ಒಂದು ವಿಶಿಷ್ಟ ಜಾಗತಿಕ ನಗರವಾಗಿ ನೋಡುತ್ತೇನೆ. ಇದು ವಿಶ್ವದ ಜಾಗತಿಕ ಬ್ಯಾಂಕ್‌ನಂತೆ, ಪ್ರಪಂಚದಾದ್ಯಂತದ ಜನರು ಒಟ್ಟಿಗೆ ಸೇರುತ್ತಾರೆ" ಎಂದರು. ''ಮೇಯರ್ ಆಗಿ, ನಾನು ಎಲ್ಲಾ ನಿವಾಸಿಗಳಿಗೆ ಭದ್ರತೆ ಮತ್ತು ಸಮೃದ್ಧಿಯನ್ನು ಖಾತ್ರಿಪಡಿಸುವ ಸಂದರ್ಭದಲ್ಲಿ ಲಂಡನ್‌ನ ಬ್ಯಾಲೆನ್ಸ್ ಶೀಟ್ ಅನ್ನು ಪ್ರಮುಖ ಹೂಡಿಕೆಯ ತಾಣವನ್ನಾಗಿ ಮಾಡಲು ಯೋಜನೆ ರೂಪಿಸುತ್ತೇನೆ. ನಾನು ಅನುಭವಿ ಸಿಇಓ ರೀತಿಯಲ್ಲಿ ಲಂಡನ್ ಅನ್ನು ಪರಿಣಾಮಕಾರಿಯಾಗಿ ಪರಿವರ್ತಿಸುತ್ತೇನೆ. ಇಲ್ಲಿ ಲಾಭದಾಯಕತೆಯು ಎಲ್ಲರಿಗೂ ಲಾಭವನ್ನು ನೀಡುತ್ತದೆ. ಈ ಯಾತ್ರೆಯಲ್ಲಿ ನೀವೆಲ್ಲರೂ ಭಾಗವಹಿಸುತ್ತೀರಿ. ಲಂಡನ್‌ನ ಬೀದಿಗಳಲ್ಲಿ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗುವುದು'' ಎಂದು ಭರವಸೆ ನೀಡಿದರು.

ಈ ನೀತಿಗಳಿಗೆ ಗುಡ್​ಬೈ ಹೇಳಲು ಬಯಸಿದ ತರುಣ್:ಪ್ರಸ್ತುತ ಲೇಬರ್ ಪಕ್ಷದ ನಾಯಕ ಸಾದಿಕ್ ಖಾನ್ ಅವರ ಕೆಲವು ಜನಪ್ರಿಯವಲ್ಲದ ನೀತಿಗಳನ್ನು ಕೊನೆಗೊಳಿಸುವುದು ತರುಣ್ ಗುಲಾಟಿಯವರ ಮುಖ್ಯ ಕಾರ್ಯಸೂಚಿಯಾಗಿದೆ. ಸಾದಿಕ್ ಖಾನ್ ಅವರ ಈ ನೀತಿಗಳು ಅಲ್ಟ್ರಾ ಲೋ ಎಮಿಷನ್ ಝೋನ್ (ULEZ) ಶುಲ್ಕಗಳು ಮತ್ತು ಕಡಿಮೆ ಟ್ರಾಫಿಕ್ ನೈಬರ್‌ಹುಡ್‌ಗಳಿಗೆ (LTNs) ಸಂಬಂಧಿಸಿದ ಹೆಚ್ಚಿನ ವೆಚ್ಚಗಳನ್ನು ತೆಗೆದುಹಾಕುವುದನ್ನು ಒಳಗೊಂಡಿವೆ. ULEZ, LTN ನಂತಹ ಕೆಟ್ಟ ನೀತಿಗಳು ನಮಗೆ ಬೇಡ, ಹವಾಮಾನ ಬದಲಾವಣೆ ಆಗುತ್ತಿದೆ. ಅದರ ಪರಿಣಾಮಗಳನ್ನು ನಾವು ತಗ್ಗಿಸಬೇಕಾಗಿದೆ. ನಾವು ಯಾವುದೇ ಬದಲಾವಣೆಗಳನ್ನು ಮಾಡಬೇಕಾಗಿದ್ದರೂ ಅದು ಸಾರ್ವಜನಿಕ ಅಭಿಪ್ರಾಯಕ್ಕೆ ಅನುಗುಣವಾಗಿರಬೇಕು'' ಎಂದು ತರುಣ್ ಗುಲಾಟಿ ಹೇಳಿದರು.

ಮೇಯರ್ ಹುದ್ದೆಗೆ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿ ಸುಜಾನ್ ಹಾಲ್ ಅವರ ವಿರುದ್ಧ ಕಿಡಿಕಾರಿದ ತರುಣ್ ಗುಲಾಟಿ ಅವರು, ''ಹಲವು ವರ್ಷಗಳ ಕಾಲ ಲಂಡನ್ ಅಸೆಂಬ್ಲಿ ಸದಸ್ಯೆಯಾಗಿದ್ದರೂ, ಈ ನೀತಿಗಳನ್ನು ತಡೆಯಲು ಅವರು ವಿಫಲವಾಗಿದ್ದಾರೆ'' ಎಂದರು.

''ರಾಜಕೀಯ ಅಭ್ಯರ್ಥಿಗಳು ಏನು ಮಾಡಬೇಕೋ ಅದನ್ನೇ ಮಾಡಿದ್ದರೆ, ನಾನು ಮೇಯರ್ ಹುದ್ದೆಗೆ ಸ್ಪರ್ಧೆ ಮಾಡುತ್ತಿರಲಿಲ್ಲ'' ಎಂದ ತರುಣ್ ಗುಲಾಟಿ ಅವರು, ಕೈಗೆಟಕುವ ದರದಲ್ಲಿ ವಸತಿ ಒದಗಿಸುವುದು, ಲಂಡನ್‌ನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು, ಉಚಿತ ಶಾಲಾ ಊಟವನ್ನು ಖಾತ್ರಿಪಡಿಸುವುದು ಮತ್ತು ಕೌನ್ಸಿಲ್ ತೆರಿಗೆಯನ್ನು ಕಡಿಮೆ ಮಾಡುವುದು ಸೇರಿದಂತೆ ಹಲವು ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ.

ಇದನ್ನೂ ಓದಿ:ಮಾಜಿ WWE ತಾರೆ ಎರಿಕಾ ಹ್ಯಾಮಂಡ್ ವರಿಸಿದ ಭಾರತ ಮೂಲದ ಟೆಕ್ ಬಿಲಿಯನೇರ್ ಅಂಕುರ್ ಜೈನ್ - Ankur Jain wedding

ABOUT THE AUTHOR

...view details