ಕರ್ನಾಟಕ

karnataka

ರಾಷ್ಟ್ರೀಯ ಭದ್ರತಾ ಒಪ್ಪಂದಕ್ಕೆ ಕಾಂಗ್ರೆಸ್​ನಲ್ಲಿ ಡೊನಾಲ್ಡ್ ಟ್ರಂಪ್ ತಡೆ: ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಿಡಿಮಿಡಿ

By PTI

Published : Feb 7, 2024, 7:37 AM IST

''ಕಾಂಗ್ರೆಸ್​ನಲ್ಲಿ ರಾಷ್ಟ್ರೀಯ ಭದ್ರತಾ ಒಪ್ಪಂದಕ್ಕೆ ಡೊನಾಲ್ಡ್ ಟ್ರಂಪ್ ಅವರು ತಡೆಯೊಡ್ಡುತ್ತಿದ್ದಾರೆ'' ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರಾಷ್ಟ್ರೀಯ ಭದ್ರತಾ ಒಪ್ಪಂದ  National Security Agreement  ಅಮೆರಿಕ ಅಧ್ಯಕ್ಷ ಜೋ ಬೈಡೆನ್  US President Joe Biden  Donald Trump
ರಾಷ್ಟ್ರೀಯ ಭದ್ರತಾ ಒಪ್ಪಂದಕ್ಕೆ ಕಾಂಗ್ರೆಸ್​ನಲ್ಲಿ ಡೊನಾಲ್ಡ್ ಟ್ರಂಪ್ ತಡೆ: ಅಮೆರಿಕ ಅಧ್ಯಕ್ಷ ಜೋ ಬೈಡೆನ್

ವಾಷಿಂಗ್ಟನ್: ''ಉಕ್ರೇನ್‌ಗೆ ಮಿಲಿಟರಿ ನೆರವು ನೀಡಲು, ಇಂಡೋ-ಪೆಸಿಫಿಕ್‌ನಲ್ಲಿ ಚೀನಾ ವಿರುದ್ಧ ದೇಶಗಳನ್ನು ಸಂಘಟಿಸಲು ಮತ್ತು ವಲಸೆ ಬಿಕ್ಕಟ್ಟಿಗೆ ಸಮಗ್ರ ಪರಿಹಾರವನ್ನು ನೀಡಲು ಉದ್ದೇಶಿಸಿರುವ ಉಭಯಪಕ್ಷೀಯ ರಾಷ್ಟ್ರೀಯ ಭದ್ರತಾ ಒಪ್ಪಂದವನ್ನು ತಮ್ಮ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಡೆಯೊಡ್ಡುತ್ತಿದ್ದಾರೆ'' ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ.

ಮಸೂದೆಗೆ ಡೊನಾಲ್ಡ್ ಟ್ರಂಪ್ ವಿರೋಧ:" ಈ ಮಸೂದೆಯು ಸೆನೆಟ್​ನೊಳಗೆ ಮುಂದುವರಿಯುವುದಿಲ್ಲ. ಇದಕ್ಕೆ ಡೊನಾಲ್ಡ್ ಟ್ರಂಪ್ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಡೊನಾಲ್ಡ್ ಟ್ರಂಪ್ ರಾಜಕೀಯವಾಗಿ ತನಗೆ ಕೆಟ್ಟದಾಗಲಿದೆ ಎಂದು ಭಾವಿಸುತ್ತಾರೆ. ಆದ್ದರಿಂದ, ರಾಷ್ಟ್ರೀಯ ಭದ್ರತಾ ಒಪ್ಪಂದವನ್ನು ತಡೆಯುತ್ತಿದ್ದಾರೆ. ಅವರು ಈ ಸಮಸ್ಯೆಯನ್ನು ನಿಜವಾಗಿ ಪರಿಹರಿಸುವುದಕ್ಕಿಂತ ಹೆಚ್ಚಾಗಿ ಮತ್ತಷ್ಟು ಜಟಿಲಗೊಳಿಸುತ್ತಿದ್ದಾರೆ. ಆದರೆ, ಹೌಸ್ ಮತ್ತು ಸೆನೆಟ್​ಗೆ ರಿಪಬ್ಲಿಕನ್ನರು ಬಾರದಂತೆ ತಡೆಯಲಾಗುತ್ತಿದೆ. ಜೊತೆಗೆ ಅವರಿಗೆ ಬೆದರಿಕೆ ಹಾಕುವ ಪ್ರಯತ್ನಗಳನ್ನು ನಡೆಸಿದ್ದಾರೆ" ಎಂದು ಶ್ವೇತಭವನದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಬೈಡನ್ ಗಂಭೀರ ಆರೋಪ ಮಾಡಿದ್ದಾರೆ.

ರಾಷ್ಟ್ರೀಯ ಭದ್ರತಾ ಒಪ್ಪಂದದಿಂದ ಯಾರಿಗೆ ಅನುಕೂಲ?:''ವಾರಾಂತ್ಯದಲ್ಲಿ, ಎಲ್ಲ ಸಂಸದರು ಶ್ವೇತಭವನದ ಬೆಂಬಲಿತ ಉಭಯಪಕ್ಷೀಯ ಒಪ್ಪಂದವನ್ನು ಅನಾವರಣಗೊಳಿಸಿದರು. ಇದು ಸುಮಾರು 100,000 H-4 ವೀಸಾ ಹೊಂದಿರುವವರಿಗೆ ಸ್ವಯಂಚಾಲಿತವಾಗಿ ಕೆಲಸದ ಅಧಿಕಾರವನ್ನು ಒದಗಿಸುತ್ತದೆ. ಅವರು ನಿರ್ದಿಷ್ಟ ವರ್ಗದ H-1B ವೀಸಾ ಹೊಂದಿರುವ ದಂಪತಿಗಳಿಗೆ ಮತ್ತು ಅವರ ಮಕ್ಕಳಿಗೆ ಅನುಕೂಲ ಆಗಲಿದೆ. US ಸೆನೆಟ್‌ನಲ್ಲಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ನಾಯಕತ್ವದ ನಡುವಿನ ಸುದೀರ್ಘ ಮಾತುಕತೆಗಳ ನಂತರ ಭಾನುವಾರ ಘೋಷಿಸಲಾದ ರಾಷ್ಟ್ರೀಯ ಭದ್ರತಾ ಒಪ್ಪಂದವು H-1B ವೀಸಾ ಹೊಂದಿರುವ ಸುಮಾರು 250,000 ಮಕ್ಕಳಿಗೆ ಪರಿಹಾರವನ್ನು ಒದಗಿಸುತ್ತದೆ'' ಎಂದು ಅವರು ತಿಳಿಸಿದರು.

ಟ್ರಂಪ್ ವಿರುದ್ಧ ಬೈಡನ್​ ಗರಂ:''ಈ ಕ್ರಮದಿಂದ ಸಾವಿರಾರು ಭಾರತೀಯ ತಂತ್ರಜ್ಞಾನ ವೃತ್ತಿಪರರಿಗೆ ಒಳ್ಳೆಯ ಸುದ್ದಿಯಾಗಿದೆ. ಅವರು ಗ್ರೀನ್ ಕಾರ್ಡ್‌ಗಾಗಿ ದೀರ್ಘಕಾಲ ಕಾಯುತ್ತಿದ್ದಾರೆ. ಆದರೆ, ಈ ದಂಪತಿಗಳು ಕೆಲಸ ಮಾಡಲು ಅವಕಾಶ ನೀಡಲಾಗುವುದಿಲ್ಲ ಮತ್ತು ಅವರ ಮಕ್ಕಳನ್ನು ಗಡೀಪಾರು ಮಾಡುವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಸೆನೆಟ್ ವಲಸೆ ಮಸೂದೆಯನ್ನು ಕಿತ್ತುಹಾಕಿ ಎಂದು ಟ್ರಂಪ್ ಮಂಗಳವಾರ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ'' ಎಂದು ಬೈಡೆನ್​ ಕಿಡಿಕಾರಿದರು.

ಟ್ರಂಪ್​ ರಾಜಕೀಯ ಪ್ರಚಾರಕ್ಕೆ ಮಸೂದೆ ಬಳಕೆ- ಆರೋಪ:ಸೆನೆಟ್ ಅಲ್ಪಸಂಖ್ಯಾತ ನಾಯಕ ಮಿಚ್ ಮೆಕ್‌ಕಾನ್ನೆಲ್ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ''ಉಭಯಪಕ್ಷೀಯ ರಾಷ್ಟ್ರೀಯ ಭದ್ರತಾ ಒಪ್ಪಂದದ ಘೋಷಣೆಯ ನಂತರ ಪರಿಸ್ಥಿತಿಗಳು ಈಗ ಬದಲಾಗಿವೆ. ಪಂಚ್ ಬೌಲ್ ನ್ಯೂಸ್ ಪ್ರಕಾರ, ಗಡಿ ಭದ್ರತಾ ಮಾತುಕತೆಗಳು ಪ್ರಾರಂಭವಾಗುವ ಮೊದಲು, ವಲಸೆ ನೀತಿಯು ರಿಪಬ್ಲಿಕನ್ನರನ್ನು ಒಗ್ಗೂಡಿಸಿತು ಮತ್ತು ಉಕ್ರೇನ್ ನೆರವು ಅವರನ್ನು ವಿಭಜಿಸಿತು'' ಎಂದ ಅವರು, ''ಟ್ರಂಪ್ ತಮ್ಮ 2024ರ ರಾಜಕೀಯ ಪ್ರಚಾರವನ್ನು ವಲಸೆಯ ಮೇಲೆ ಕೇಂದ್ರೀಕರಿಸಲು ಬಯಸುತ್ತಾರೆ. ನಾವು ಅವರನ್ನು ದುರ್ಬಲಗೊಳಿಸಲು ಏನನ್ನೂ ಮಾಡಲು ಬಯಸುವುದಿಲ್ಲ" ಎಂದು ಅವರು ತಿಳಿಸಿದ್ದಾರೆ.

ಮಸೂದೆಗೆ ವಾಣಿಜ್ಯ ಸಂಸ್ಥೆಗಳು ಬೆಂಬಲ:ಟ್ರಂಪ್‌ರ ವಿರೋಧದಿಂದಾಗಿ ಕಾಂಗ್ರೆಸ್ ಮಹತ್ವಾಕಾಂಕ್ಷೆಯ ಮಸೂದೆಯನ್ನು ಅಂಗೀಕರಿಸಲು ವಿಫಲವಾದರೆ ಈ ವಿಷಯವನ್ನು ಜನರ ಬಳಿಗೆ ಕೊಂಡೊಯ್ಯುವುದಾಗಿ ಬೈಡನ್​ ಅಮೆರಿಕನ್ನರಿಗೆ ತಿಳಿಸಿದ್ದಾರೆ. ಈ ಮಸೂದೆಯಲ್ಲಿ ಏನಿದೆ ಎಂದು ನಾನು ಅಮೇರಿಕನ್ ಜನರಿಗೆ ಹೇಳಲು ಬಯಸುತ್ತೇನೆ. ವಾಲ್ ಸ್ಟ್ರೀಟ್ ಜರ್ನಲ್ ಟು ದಿ ಬಾರ್ಡರ್ ಪೆಟ್ರೋಲ್ ಟು ದ ಚೇಂಬರ್ ಆಫ್ ಕಾಮರ್ಸ್, ಯುನೈಟೆಡ್ ಸ್ಟೇಟ್ಸ್ ಚೇಂಬರ್ ಆಫ್ ಕಾಮರ್ಸ್ ಈ ಮಸೂದೆಯನ್ನು ಬೆಂಬಲಿಸುತ್ತದೆ" ಎಂದು ಬೈಡನ್​ ಹೇಳಿದ್ದಾರೆ.

''ರಿಪಬ್ಲಿಕನ್ನರು ಯಾರಿಗೆ ಸೇವೆ ಸಲ್ಲಿಸಬೇಕೆಂದು ನಿರ್ಧರಿಸಬೇಕು, ಡೊನಾಲ್ಡ್ ಟ್ರಂಪ್ ಅಥವಾ ಅಮೆರಿಕನ್ ಜನರಿಗೆ ಎಂಬುದನ್ನು ಅರಿತುಕೊಳ್ಳಬೇಕು. ಅವರು ಸಮಸ್ಯೆಗಳನ್ನು ಪರಿಹರಿಸಲು ಇಲ್ಲಿದ್ದಾರೆಯೇ ಅಥವಾ ರಾಜಕೀಯ ಉದ್ದೇಶಗಳಿಗಾಗಿ ಆ ಸಮಸ್ಯೆಗಳನ್ನು ಆಯುಧಗಳಾಗಿ ಮಾರ್ಪಾಟು ಮಾಡುತ್ತಿದ್ದಾರೆಯೇ? ನನ್ನ ಉತ್ತರ ನನಗೆ ತಿಳಿದಿದೆ. ನಾನು ಅಮೆರಿಕನ್ ಜನರಿಗೆ ಸೇವೆ ಸಲ್ಲಿಸುತ್ತೇನೆ. ಈ ಸಮಸ್ಯೆಗಳನ್ನು ಪರಿಹರಿಸಲು ನಾನು ಇಲ್ಲಿದ್ದೇನೆ" ಎಂದು ಅವರು ಭರವಸೆ ನೀಡಿದರು.

"ಆದರೆ, ಈ ಮಸೂದೆ ವಿಫಲವಾದರೆ, ಅದು ಏಕೆ ವಿಫಲವಾಗಿದೆ ಎಂಬುದನ್ನು ನಾನು ಸಂಪೂರ್ಣವಾಗಿ ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಅಮೆರಿಕದ ಜನರಿಗೆ ತಿಳಿಸಲಿದ್ದೇನೆ. ನಾನು ಈ ಸಮಸ್ಯೆಯನ್ನು ದೇಶ ಜನರ ಮುಂದೆ ಕೊಂಡೊಯ್ಯುತ್ತೇನೆ. ಈ ಕ್ಷಣದಲ್ಲಿ, ನಾವು ಗಡಿಯನ್ನು ಸುರಕ್ಷಿತವಾಗಿರಿಸಲಿದ್ದೇವೆ ಮತ್ತು ಈ ಇತರ ಕಾರ್ಯಕ್ರಮಗಳಿಗೆ ಹಣವನ್ನು ನೀಡಲಿದ್ದೇವೆ" ಎಂದು ಬೈಡನ್ ಹೇಳಿದ್ದಾರೆ.

ಇದನ್ನೂ ಓದಿ:ಜಾಗತಿಕ ಸ್ಪೈವೇರ್ ಉದ್ಯಮ ನಿಗ್ರಹ: ವೀಸಾ ಮೇಲೆ ಹೊಸ ನಿರ್ಬಂಧಗಳನ್ನು ಪ್ರಕಟಿಸಿದ ಅಮೆರಿಕ

ABOUT THE AUTHOR

...view details