ಕರ್ನಾಟಕ

karnataka

ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಹಂತಕನನ್ನು ಪಾಕಿಸ್ತಾನದಲ್ಲಿ​ ಗುಂಡಿಕ್ಕಿ ಕೊಂದ ಬಂದೂಕುಧಾರಿಗಳು - TERRORIST AMIR TAMBA SHOT DEAD

By PTI

Published : Apr 14, 2024, 7:05 PM IST

ಪಾಕಿಸ್ತಾನ ಜೈಲಿನಲ್ಲಿ ಬಂಧನದಲ್ಲಿದ್ದ ಭಾರತೀಯ ಪ್ರಜೆಯನ್ನು ಹತ್ಯೆಗೈದಿದ್ದ ಉಗ್ರ ಅಮೀರ್ ಸರ್ಫರಾಜ್​ನನ್ನು ಅಪರಿಚಿತರು ಗುಂಡಿಕ್ಕೆ ಹತ್ಯೆಗೈದಿದ್ದಾರೆ.

ಭಾರತೀಯ ಕೈದಿ ಸರಬ್ಜಿತ್ ಸಿಂಗ್ ಹಂತಕನನ್ನು ಪಾಕ್​ ಜೈಲಿನಲ್ಲೇ ಗುಂಡಿಕ್ಕಿ ಕೊಂದ ಬಂದೂಕುಧಾರಿಗಳು
ಭಾರತೀಯ ಕೈದಿ ಸರಬ್ಜಿತ್ ಸಿಂಗ್ ಹಂತಕನನ್ನು ಪಾಕ್​ ಜೈಲಿನಲ್ಲೇ ಗುಂಡಿಕ್ಕಿ ಕೊಂದ ಬಂದೂಕುಧಾರಿಗಳು

ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್​ರನ್ನು ಹತ್ಯೆಗೈದಿದ್ದ ಆರೋಪಿ ಹಾಗೂ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ ಹಫೀಜ್ ಸಯೀದ್‌ನ ನಿಕಟವರ್ತಿ ಅಮೀರ್ ಸರ್ಫರಾಜ್ ತಾಂಬಾನನ್ನು ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ.

ಮಾಧ್ಯಮಗಳ ವರದಿ ಪ್ರಕಾರ, ಲಾಹೋರ್‌ನ ಇಸ್ಲಾಂಪುರ ಪ್ರದೇಶದಲ್ಲಿ ಬೈಕ್​ ಮೇಲೆ ಬಂದ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಅಮೀರ್ ಸರ್ಫರಾಜ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅಮೀರ್​ನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆತನ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿಸಿವೆ.

2013ರಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿ ಪಾಕಿಸ್ತಾನದ ಹೈ-ಸೆಕ್ಯುರಿಟಿಯ ಕೋಟ್ ಲಖ್‌ಪತ್ ಜೈಲಿನೊಳಗಿದ್ದ 49ರ ಹರೆಯದ ಸರಬ್ಜಿತ್ ಸಿಂಗ್​ ಮೇಲೆ ಉಗ್ರ ಅಮೀರ್​ ತಾಂಬಾ ಸೇರಿದಂತೆ ಇತರೆ ಕೈದಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದರು. ಅಂದು ಗಂಭೀರವಾಗಿ ಗಾಯಗೊಂಡಿದ್ದ ಸರಬ್ಜಿತ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕೊನೆಯುಸಿರೆಳೆದಿದ್ದರು.

ನಂತರ ಸರಬ್ಜಿತ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಅಮೀರ್ ಸರ್ಫರಾಜ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದಾಗ್ಯೂ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 2018 ರಲ್ಲಿ ಪಾಕಿಸ್ತಾನದ ನ್ಯಾಯಾಲಯವು ಸರ್ಫರಾಜ್ ಮತ್ತು ಇನ್ನೊಬ್ಬ ಆರೋಪಿಯನ್ನು ಖುಲಾಸೆಗೊಳಿಸಿತ್ತು.

1990ರಲ್ಲಿ ಪಂಜಾಬ್ ನಿವಾಸಿ ಸರಬ್ಜಿತ್ ಸಿಂಗ್ ಅವರನ್ನು ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಬಂಧಿಸಲಾಗಿತ್ತು. ಆದಾಗ್ಯೂ, ಅವರ ಕುಟುಂಬ ಮತ್ತು ಭಾರತ ಸರ್ಕಾರವು ಬೇಹುಗಾರಿಕೆಯ ಆರೋಪಗಳನ್ನು ನಿರಾಕರಿಸಿತ್ತು. ಸರಬ್ಜಿತ್ ಅವರನ್ನು 23 ವರ್ಷಗಳ ಕಾಲ ಲಾಹೋರ್‌ನ ಕೋಟ್ ಲಖ್ಪತ್ ಜೈಲಿನಲ್ಲಿ ಬಂಧನದಲ್ಲಿರಿಸಿತ್ತು. ಭಾರತದಲ್ಲಿ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ಅಪರಾಧಿ ಅಫ್ಜಲ್ ಗುರುಗೆ ಮರಣದಂಡನೆ ವಿಧಿಸಿದ ನಂತರ, ಭೂಗತ ಪಾತಕಿ ಅಮೀರ್ ಸರ್ಫರಾಜ್ ಮತ್ತು ಇತರೆ ಕೈದಿಗಳು ಜೈಲಿನಲ್ಲಿ ಸರಬ್ಜಿತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಸರಬ್ಜಿತ್​ ಮೇಲೆ ಜೈಲಿನಲ್ಲಿ ಇಟ್ಟಿಗೆಗಳಿಂದ ದಾಳಿ ಮಾಡಿ ಗಾಯಗೊಳಿಸಲಾಗಿತ್ತು. ಲಾಹೋರ್‌ನ ಜಿನ್ನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.

ಇದನ್ನೂ ಓದಿ:ಪುಲ್ವಾಮಾದಲ್ಲಿ ಎನ್​ಕೌಂಟರ್​: ಓರ್ವ ಉಗ್ರನನ್ನು ಹೊಡೆದುರುಳಿಸಿದ ಸೇನಾ ಪಡೆಗಳು - Pulwama Encounter

ABOUT THE AUTHOR

...view details