ಕರ್ನಾಟಕ

karnataka

ಅಫ್ಘಾನಿಸ್ತಾನದಲ್ಲಿ ತೀವ್ರ ಬರ; ಶೇ 80ರಷ್ಟು ಮಂದಿಗಿಲ್ಲ ಜೀವಜಲ - Afghanistan Water Crisis

By ETV Bharat Karnataka Team

Published : Mar 25, 2024, 11:06 AM IST

ಅಫ್ಘಾನಿಸ್ತಾನದಲ್ಲಿ ಕಳೆದ 30 ವರ್ಷದಿಂದ ಬರ ಪರಿಸ್ಥಿತಿ ಇದೆ. ಭೀಕರ ಪರಿಸ್ಥಿತಿಯ ಪರಿಣಾಮ ಈ ದೇಶದ ಅರ್ಧದಷ್ಟು ಜನರು ಹಸಿವೆಯಿಂದ ಬಳಲುವಂತಾಗಿದೆ.

80-pc-of-afghanistans-population-lacks-access-to-potable-water
80-pc-of-afghanistans-population-lacks-access-to-potable-water

ಕಾಬೂಲ್​: ಅಫ್ಘಾನಿಸ್ತಾನದ ಶೇ.80ರಷ್ಟು ಜನರು ಕುಡಿಯುವ ನೀರಿನ ಸೌಲಭ್ಯ ಹೊಂದಿಲ್ಲ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್​ಡಿಪಿ) ತಿಳಿಸಿದೆ. ದೇಶವು ತೀವ್ರ ಬರ ಪರಿಸ್ಥಿತಿ, ಆರ್ಥಿಕ ಅನಿಶ್ಚಿತತೆ, ದೀರ್ಘಾವಧಿಯ ಸಂಘರ್ಷಗಳ ಪರಿಣಾಮವಾಗಿ ಮೂಲಸೌಕರ್ಯ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಅಫ್ಘಾನಿಸ್ತಾನದಲ್ಲಿ ಕಳೆದ 30 ವರ್ಷದಿಂದ ಬರ ಪರಿಸ್ಥಿತಿ ಇದೆ. ಇದೀಗ ತೀವ್ರವಾಗಿದೆ. ದೇಶದ ಅರ್ಧದಷ್ಟು ಜನರು ಹಸಿವೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ಇದರ ಪರಿಣಾಮ ಮಹಿಳೆಯರ ಮೇಲೆ ಹೆಚ್ಚಿದೆ. ಇವರು ನೀರಿನ ಕೊರತೆಯ ಜೊತೆಗೆ ಹೆಚ್ಚುವರಿಯಾಗಿ ಸಾರ್ವಜನಿಕ ನೀರಿನ ಸೌಲಭ್ಯ ಪಡೆಯಲು ಕಠಿಣ ಕಟ್ಟುಪಾಡುಗಳನ್ನು ಹೊಂದಿದ್ದು, ಬದುಕನ್ನು ಅಸಹನೀಯಗೊಳಿಸಿದೆ.

ಶೇ.80ರಷ್ಟು ಮಂದಿಗೆ ಕುಡಿಯಲು, ಅಡುಗೆ ಮಾಡಲು, ಶುಚಿತ್ವ ಮತ್ತು ನೈರ್ಮಲ್ಯಕ್ಕೆ ನೀರಿನ ಸಮಸ್ಯೆ ಇದೆ. ಅಫ್ಘಾನ್ ಉಸ್ತುವಾರಿ ಸರ್ಕಾರ ಅಂತರ್ಜಲ ಸುಧಾರಿಸಲು ದೇಶಾದ್ಯಂತ ಸಣ್ಣ ಅಣೆಕಟ್ಟುಗಳು, ನೀರು ಪೂರೈಕೆ ಜಾಲಗಳು ಮತ್ತು ನೀರಿನ ಕಾಲುವೆಗಳನ್ನು ನಿರ್ಮಿಸುತ್ತಿದೆ ಎಂದು ವರದಿ ತಿಳಿಸಿದೆ.

ಹವಾಮಾನ ಬದಲಾವಣೆ ಕೂಡ ನೀರಿನ ಬಿಕ್ಕಟ್ಟಿನಲ್ಲಿ ಪ್ರಮುಖ ಪಾತ್ರ ಹೊಂದಿದೆ. ಶೇ.67ರಷ್ಟು ಕುಟುಂಬ ಬರದ ಸಮಸ್ಯೆ ಅನುಭವಿಸಿದರೆ, ಶೇ.16ರಷ್ಟು ಜನರು ಪ್ರವಾಹದ ಸಮಸ್ಯೆಯನ್ನು ಎದುರಿಸಿದ್ದಾರೆ. ಹವಾಮಾನದ ಬದಲಾವಣೆಯು ಬರ ಮತ್ತು ಪ್ರವಾಹವನ್ನು ಉತ್ತೇಜಿಸಿದೆ. ಇದು ಅಫ್ಘಾನಿಸ್ತಾನದ ಕೃಷಿ ಸಮುದಾಯಕ್ಕೆ ಬೆದರಿಕೆಯೊಡ್ಡಿದೆ.

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮವು ಅಫ್ಘಾನಿಸ್ತಾನದಲ್ಲಿ 824 ಕಿ.ಮೀ ಉದ್ದದ ನೀರಾವರಿ ಕಾಲುವೆಗಳ ಪುನರುಜ್ಜೀವನ ಅಥವಾ ನಿರ್ಮಾಣಕ್ಕೆ ಮುಂದಾಗಿದ್ದು, 17,000 ಹೆಕ್ಟೇರ್​​ ಕೃಷಿ ಭೂಮಿಗೆ ನೀರು ಒದಗಿಸಲು ಸಹಾಯ ಮಾಡುತ್ತಿದೆ.

ದೇಶದ 34 ಪ್ರಾಂತ್ಯಗಳ ಪೈಕಿ 25ರಲ್ಲಿ ತೀವ್ರ ಬರವಿದೆ. ಇದರ ಜೊತೆಗೆ ಜಾಗತಿಕವಾಗಿ ಅಪಾಯಕಾರಿ ಮಟ್ಟದಲ್ಲಿ ಅಪೌಷ್ಟಿಕ ದರ ಎದುರಿಸುತ್ತಿದೆ. 3.2 ಮಿಲಿಯನ್​ ಮಕ್ಕಳು ಮತ್ತು 8,40,000 ಗರ್ಭಿಣಿಯರು ಮತ್ತು ತಾಯಂದಿರು ಅಪೌಷ್ಟಿತೆ ಹೊಂದಿದ್ದಾರೆ ಎಂದು ಕಳೆದ ಆರು ತಿಂಗಳ ಹಿಂದೆ ಐಒಎಂ ವರದಿ ಮಾಡಿತ್ತು.(ಐಎಎನ್​ಎಸ್​)

ಇದನ್ನೂ ಓದಿ: ದ.ಆಫ್ರಿಕಾದಲ್ಲಿ ಕುಡಿಯುವ ನೀರಿಗೆ ಹಾಹಾಕಾರ; ಜೋಹಾನ್ಸ್​​ಬರ್ಗ್​ನಲ್ಲಿ ಜನರ ಪರದಾಟ - South Africa Water Crisis

ABOUT THE AUTHOR

...view details