ಕರ್ನಾಟಕ

karnataka

ಸುಗರ್​ ಲೇವಲ್​ ಸಡನ್​ ಆಗಿ 300ಕ್ಕೆ ಏರಿಕೆ ಆದರೆ ಏನು ಮಾಡಬೇಕು: ತಜ್ಞರು ಹೇಳುವುದೇನು? - Sugar Level Above 300

By ETV Bharat Karnataka Team

Published : May 1, 2024, 9:43 AM IST

ಭಾರತದಲ್ಲಿ ಮಧುಮೇಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೀಗಾಗಿ ಭಾರಿ ಆತಂಕವೂ ಎದುರಾಗಿದೆ. ಮಧುಮೇಹಕ್ಕೆ ತ್ವರಿತ ಗುರುತಿಸುವಿಕೆ ಮತ್ತು ನಿರ್ವಹಣೆಯ ಅಗತ್ಯವಿದೆ. ಅನಿಯಂತ್ರಿತ ಮಧುಮೇಹದಿಂದ ದೀರ್ಘಕಾಲದ ತೊಡಕುಗಳು ಉಂಟಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

Sudden Rise Of Sugar Level Above 300 Is Severe: Expert
ಸುಗರ್​ ಲೇವಲ್​ ಸಡನ್​ ಆಗಿ 300ಕ್ಕೆ ಏರಿಕೆ ಆದರೆ ಏನು ಮಾಡಬೇಕು: ತಜ್ಞರು ಹೇಳುವುದೇನು?

ನವದೆಹಲಿ: ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಮಧುಮೇಹದಿಂದ ಬಳಲುತ್ತಿರುವುದು ಗೊತ್ತಿರುವ ವಿಚಾರ. ಈ ಬಗ್ಗೆ ಜೈಲಾಧಿಕಾರಿಗಳು ಹಾಗೂ ಆಪ್​ ಸರ್ಕಾರದ ಮಧ್ಯ ಜಟಾಪಟಿ ನಡೆದಿದ್ದನ್ನು ನೀವೆಲ್ಲ ಟಿವಿಗಳಲ್ಲಿ ನೋಡಿಯೇ ಇರ್ತಿರಿ. ಅವರ ಸಕ್ಕರೆ ಪ್ರಮಾಣ 300 ದಾಟಿದೆ ಎಂದು ದೆಹಲಿ ಸಚಿವೆ ಹಾಗೂ ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕಿ ಅತಿಶಿ ಹೇಳಿಕೆ ನೀಡಿದ್ದನ್ನು ಗಮನಿಸಬಹುದು. ಇನ್ನು "ಸಕ್ಕರೆ ಮಟ್ಟವು 300 ಮತ್ತು ಅದಕ್ಕಿಂತ ಹೆಚ್ಚಿದ್ದರೆ, ನಮಗೆ ವೈದ್ಯಕೀಯ ನಿರ್ವಹಣೆಯ ಅಗತ್ಯವಿದೆ" ಎಂದು ಏಷ್ಯನ್ ಸೊಸೈಟಿ ಫಾರ್ ಎಮರ್ಜೆನ್ಸಿ ಮೆಡಿಸಿನ್‌ನ ಹಿಂದಿನ ಅಧ್ಯಕ್ಷರಾಗಿದ್ದ ಡಾ ಟಾಮೋರಿಶ್ ಕೋಲೆ ಹೇಳಿದ್ದಾರೆ. ಈಟಿವಿ ಭಾರತ್ ಮಧುಮೇಹದ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಇಂತಹ ಆತಂಕಕಾರಿ ಮಾಹಿತಿ ಹೊರ ಬಿದ್ದಿದೆ.

ಮಧುಮೇಹದ ಸಾಮಾನ್ಯ ಕಾರಣಗಳು ಯಾವುವು?: ’’ಭಾರತದಲ್ಲಿ ಅನಾರೋಗ್ಯಕರ ಆಹಾರ ಪದ್ಧತಿ, ಕಡಿಮೆ ದೈಹಿಕ ಚಟುವಟಿಕೆ, ನಗರೀಕರಣ ಮತ್ತು ಒತ್ತಡದಂತಹ ವಿವಿಧ ಅಂಶಗಳಿಂದ ಮಧುಮೇಹ ಹರಡುವಿಕೆ ಹೆಚ್ಚಾಗುತ್ತಿದೆ. ಕ್ಯಾಲೋರಿ, ಹೆಚ್ಚಿನ ಗ್ಲೈಸೆಮಿಕ್ ಆಹಾರಗಳು ಮತ್ತು ಜಡ ಜೀವನಶೈಲಿಯಿಂದಾಗಿ ಮಧುಮೇಹ ಗಮನಾರ್ಹವಾಗಿ ಹೆಚ್ಚಾಗುವಂತೆ ಮಾಡಿದೆ. ಇದಲ್ಲದೆ, ಮಾಲಿನ್ಯ ಮತ್ತು ಮಾನಸಿಕ ಆರೋಗ್ಯದ ಒತ್ತಡಗಳು ಸಹ ಮಧುಮೇಹದೊಂದಿಗೆ ಸಂಬಂಧ ಹೊಂದಿವೆ‘‘ ಅಂತಾರೆ ಡಾ ಕೋಲೆ. 35 ರಿಂದ 49 ವರ್ಷ ವಯಸ್ಸಿನ ವಯಸ್ಕರಲ್ಲಿ ಮಧುಮೇಹ ಅತಿ ಹೆಚ್ಚಾಗಿ ಕಂಡು ಬರುತ್ತಿದೆ.15-19 ವರ್ಷದೊಳಗಿನವರಲ್ಲಿ ಮಧುಮೇಹ ಬರುವ ಸಂಭವ ಕಡಿಮೆ ಎಂದು ಹೇಳಬಹುದು.

ಮಧುಮೇಹ ಯಾವಾಗ ತೀವ್ರವಾಗಬಹುದು?: ಭಾರತದಲ್ಲಿ ಹೆಚ್ಚಿನ ಮಧುಮೇಹಿಗಳು ಟೈಪ್ 2 ಆಗಿದ್ದು, ದೇಹವು ಸಾಕಷ್ಟು ಇನ್ಸುಲಿನ್ ಉತ್ಪಾದಿಸುವುದಿಲ್ಲ ಅಥವಾ ಇನ್ಸುಲಿನ್ ಅನ್ನು ಪ್ರತಿರೋಧಿಸುತ್ತಿರುತ್ತದೆ. ಟೈಪ್ 2 ರೋಗಿಗಳ ತೀವ್ರತರವಾದ ತೊಡಕುಗಳಾದ ಡಯಾಬಿಟಿಕ್ ಕೀಟೋಆಸಿಡೋಸಿಸ್ ಅಥವಾ ಹೈಪರೋಸ್ಮೊಲಾರ್ ಹೈಪರ್ಟೋನಿಕ್ ನಾನ್‌ಕೆಟೋಟಿಕ್ ಸ್ಥಿತಿಯಂತಹ ಹೆಚ್ಚಿನ ಸಕ್ಕರೆ ಪರಿಸ್ಥಿತಿಗಳು ಮತ್ತು ಹೈಪೊಗ್ಲಿಸಿಮಿಯಾದಂತಹ ಕಡಿಮೆ ಸಕ್ಕರೆ ಪರಿಸ್ಥಿತಿಗಳನ್ನು ಹೊಂದಿರುತ್ತಾರೆ. ಈ ಪರಿಸ್ಥಿತಿಗಳಿಗೆ ತ್ವರಿತ ಗುರುತಿಸುವಿಕೆ ಮತ್ತು ನಿರ್ವಹಣೆ ಅಗತ್ಯವಿರುತ್ತದೆ. ಆದಾಗ್ಯೂ, ಮಧುಮೇಹದಿಂದ ದೀರ್ಘಕಾಲದ ತೊಡಕುಗಳು ಉಂಟಾಗುತ್ತವೆ. ದೀರ್ಘಕಾಲದ ತೊಡಕುಗಳನ್ನು ಮೈಕ್ರೊವಾಸ್ಕುಲರ್ (ರೆಟಿನೋಪತಿ, ನ್ಯೂರೋಪತಿ ಮತ್ತು ನೆಫ್ರೋಪತಿ), ಮ್ಯಾಕ್ರೋವಾಸ್ಕುಲರ್ (ಪರಿಧಮನಿಯ ಕಾಯಿಲೆ, ಸೆರೆಬ್ರೊವಾಸ್ಕುಲರ್ ಕಾಯಿಲೆ, ಬಾಹ್ಯ ನಾಳೀಯ ಕಾಯಿಲೆ) ಮತ್ತು ನಾನ್‌ವಾಸ್ಕುಲರ್ ತೊಡಕುಗಳು ಎಂದು ವರ್ಗೀಕರಿಸಲಾಗಿದೆ.

ಮಧುಮೇಹಕ್ಕೆ ಯಾವ ಮಟ್ಟದಲ್ಲಿ ಇನ್ಸುಲಿನ್ ತೆಗೆದುಕೊಳ್ಳಬೇಕು: ಇದಕ್ಕೆ ಯಾವುದೇ ನಿರ್ದಿಷ್ಟ ಮಟ್ಟವಿಲ್ಲ. ಗ್ಲೈಸೆಮಿಕ್ ನಿಯಂತ್ರಣ ಮತ್ತು ಇತರ ವೈದ್ಯಕೀಯ ಪರಿಸ್ಥಿತಿಗಳ ಆಧಾರದ ಮೇಲೆ ವೈದ್ಯರು ನಿರ್ಧರಿಸಬಹುದು. ವೈದ್ಯರ ಸಲಹೆಯಿಲ್ಲದೇ ಯಾರೂ ಇನ್ಸುಲಿನ್ ತೆಗೆದಕೊಳ್ಳಬಾರದು ಮತ್ತು ಸಲಹೆ ಇಲ್ಲದೇ ನಿಲ್ಲಿಸಲೂ ಬಾರದು.

ಮಧುಮೇಹದ ಹರಡುವಿಕೆ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5, 2019-21) ಪ್ರಕಾರ, 15-49 ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿ ಮಧುಮೇಹದ ಹರಡುವಿಕೆಯು ಶೇ 4.90 (4.80 ರಿಂದ 5.00 ಶೇಕಡಾ) ಎಂದು ಕಂಡುಬಂದಿದೆ. ಅವರಲ್ಲಿ, ರೋಗನಿರ್ಣಯ ಮಾಡದ ಮಧುಮೇಹ ಹೊಂದಿರುವ ವ್ಯಕ್ತಿಗಳ ಪ್ರಮಾಣವು ಶೇ 24.82 (24.07 ರಿಂದ 25.59%) ರಷ್ಟಿದೆ.

ಭಾರತದಲ್ಲಿ ಮಧುಮೇಹದಿಂದ ಸಾವು ಸಂಭವಿಸುವ ಪ್ರಮಾಣ:ಭಾರತವು ವಿಶ್ವದ ಎರಡನೇ ಅತಿ ಹೆಚ್ಚು ಮಧುಮೇಹಿಗಳ ನೆಲೆಯಾಗಿದೆ. ಭಾರತವು 2021 ರಲ್ಲಿ 20-79 ವರ್ಷ ವಯಸ್ಸಿನೊಳಗಿನ 74.9 ಮಿಲಿಯನ್ ಮಧುಮೇಹಿಗಳನ್ನು ಹೊಂದಿದೆ. 2045 ರ ವೇಳೆಗೆ ಈ ಪ್ರಮಾಣ 124.9 ಮಿಲಿಯನ್‌ಗೆ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಅಂದಾಜಿನ ಪ್ರಕಾರ, ಭಾರತದಲ್ಲಿ ಮಧುಮೇಹದಿಂದ ಮರಣದ ಪ್ರಮಾಣವು 2019 ರಲ್ಲಿ 1,00,000 ಜನಸಂಖ್ಯೆಗೆ 27.35 ಆಗಿದೆ.

ಇದನ್ನು ಓದಿ:ಆಸ್ಟ್ರಾಜೆನೆಕಾ ಕೋವಿಡ್​ ಲಸಿಕೆಯಿಂದ ಟಿಟಿಎಸ್​ ಅಡ್ಡ ಪರಿಣಾಮ ಸಾಧ್ಯತೆ; ಏನಿದು ಸಮಸ್ಯೆ? - AstraZeneca Admits TTS Side Effect

ABOUT THE AUTHOR

...view details