ಕರ್ನಾಟಕ

karnataka

ಕೋವಿಡ್​ ಬಳಿಕ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಸ್ಥಿತಿಗತಿ ಚಿಂತಾಜನಕ; ಏನ್​ ಹೇಳುತ್ತೆ ಜಾಗತಿಕ ಅಧ್ಯಯನ

By ETV Bharat Karnataka Team

Published : Mar 11, 2024, 4:03 PM IST

ಮಾನಸಿಕ ಆರೋಗ್ಯದ ಮೇಲೆ ಕೋವಿಡ್​ ಪರಿಣಾಮ ದೀರ್ಘಾವಾಗಿದ್ದು, ಪೂರ್ವ ಸಾಂಕ್ರಾಮಿಕತೆ ಕಾಲಕ್ಕೆ ಮರಳಿಲ್ಲ. ಈ ಕುರಿತು ಹಿರಿಯ ಪತ್ರಕರ್ತ ತೌಫಿಕ್​ ರಶೀದ್​​ ವರದಿ ಇಲ್ಲಿದೆ.

mental-health-and-well-being-of-people-post-covid-is-a-concern
mental-health-and-well-being-of-people-post-covid-is-a-concern

ನವದೆಹಲಿ: ಕೋವಿಡ್​ ಸಾಂಕ್ರಾಮಿಕವೂ ಆರೋಗ್ಯದ ಮೇಲೆ ಕೆಲವು ದೀರ್ಘಾವಧಿ ಪರಿಣಾಮ ಹೊಂದಿದೆ. ಅದರಲ್ಲಿಯೂ ಮಾನಸಿಕ ಆರೋಗ್ಯದ ಮೇಲಿನ ಪರಿಣಾಮ, ಚಿಂತೆಗೆ ಕಾರಣವಾಗಿದೆ.

ವಿಶ್ವದ 71 ದೇಶಗಳ ಜಾಗತಿಕ ಮಾನಸಿಕ ಆರೋಗ್ಯ ವರದಿ ಪ್ರಕಾರ, ಕೋವಿಡ್​ ಪೂರ್ವ ಅವಧಿಯ ಮಾನಸಿಕ ಆರೋಗ್ಯ ಮತ್ತು ಸಂತೋಷಕ್ಕೆ ಮರಳ ಬೇಕು ಎಂದರೆ ಸಾಕಷ್ಟು ದೂರ ಕ್ರಮಿಸಬೇಕು. ವೃತ್ತಿ ಮತ್ತು ವೈಯಕ್ತಿಕ ಮಟ್ಟದಲ್ಲಿ ಜನರು ಸಾಮಾಜೀಕರಣ, ಜನರ ಜೊತೆಗಿನ ಒಡನಾಟದ ಹಾದಿಗೆ ಇನ್ನೂ ಮರಳಬೇಕಿದೆ. ಕೋವಿಡ್​ ಸಮಯವೂ 35 ವರ್ಷದೊಳಗಿನ ಯುವ ಜನತೆ ಮಾನಸಿಕ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. 65 ವರ್ಷದ ಮೇಲ್ಪಟ್ಟ ಹಿರಿಯ ಜನಸಂಖ್ಯೆ ಮೇಲೆ ಇದರ ಪರಿಣಾಮ ಸ್ಥಿರವಾಗಿದೆ ಎಂದು ವರದಿ ತಿಳಿಸಿದೆ.

ಗ್ಲೋಬಲ್​ ಮೈಂಡ್​ ಪ್ರಾಜೆಕ್ಟ್​​ನ​​ ವಾರ್ಷಿಕ ಪ್ರಕಟಣೆ 'ಮೆಂಟಲ್​ ಸ್ಟೇಟ್​ ಆಫ್​ ದಿ ವರ್ಲ್ಡ್'​​ (ಜಗತ್ತಿನ ಮಾನಸಿಕ ಆರೋಗ್ಯ ಸ್ಥಿತಿ)ನಲ್ಲಿ ಈ ಕುರಿತು ವರದಿ ಮಾಡಲಾಗಿದೆ. ಇದು ಜಾಗತಿಕ ಇಂಟರ್ನೆಟ್​ ಲಭ್ಯವಿರುವ ಜನರಲ್ಲಿ ಮಾನಸಿಕ ಆರೋಗ್ಯದ ವಿಕಸನದ ದೃಷ್ಟಿ ನೀಡಿದೆ. ಇದು ಪ್ರತಿ ವರ್ಷವೂ ಜನರ ಮಾನಸಿಕ ಸ್ಥಿತಿಯ ಕುರಿತ ವರದಿ ನೀಡುತ್ತದೆ. ಜೊತೆಗೆ ವರ್ಷವೀಡಿ ಪ್ರಕಟವಾಗುವ ಶೀಘ್ರ ವರದಿಗಳು, ಮಾನಸಿಕ ಆರೋಗ್ಯದ ಹಲವು ಆಯಾಮದ ಒಳನೋಟ ಮತ್ತು ಉದ್ದೇಶವನ್ನು ದತ್ತಾಂಶದ ಆಧಾರದ ಮೇಲೆ ನೀಡುತ್ತದೆ.

ಇತ್ತೀಚಿಗೆ ಬಿಡುಗಡೆಯಾದ 2023ರ ವರದಿಯಲ್ಲಿ 71 ದೇಶಗಳಲ್ಲಿ 13 ಭಾಷೆಗಳಲ್ಲಿ 4,19,175 ಮಂದಿಯ ಪ್ರತಿಕ್ರಿಯೆ ಪಡೆಯಲಾಗಿದೆ. ಈ ದತ್ತಾಂಶದ ಮೂಲಕ ಪ್ರತಿಯೊಬ್ಬರ ಮಾನಸಿಕ ಆರೋಗ್ಯ ಕ್ವಾಂಟಿಯೆಂಟ್​ (ಎಂಎಚ್​ಕ್ಯೂ) ಮೌಲ್ಯಮಾಪನ ಮಾಡಲಾಗಿದೆ. ಇದರಲ್ಲಿ 47 ಅಂಶವನ್ನು ಮೌಲ್ಯಮಾಪನ ಮಾಡಲಾಗಿದ್ದು, ಅದರಲ್ಲಿನ ಪ್ರಮುಖ ಆರು ವರ್ಗ ಎಂದರೆ, ಮನಸ್ಥಿತಿ ಮತ್ತು ಹೊರಗಿನ ನೋಟ, ಸಾಮಾಜಿಕ ಸ್ವಾಸ್ಥ, ಚಾಲನೆ ಮತ್ತು ಪ್ರೇರಣೆ, ಬುದ್ದಿ - ದೇಹದ ಸಂಪರ್ಕ, ಅರಿವು ಮತ್ತು ಅಳವಡಿಕೆ ಹಾಗೂ ಸ್ಥಿತಿಸ್ಥಾಪಕತೆ. ಈ ಸಮೀಕ್ಷೆಯಲ್ಲಿ ಜನರ ಜೀವನಶೈಲಿ, ಕುಟುಂಬ ಮತ್ತು ಸ್ನೇಹಿತರ ಒಡನಾಟ ಮತ್ತು ವೈಯಕ್ತಿಕ ಆಘಾತವನ್ನು ಸಂಗ್ರಹಿಸಲಾಗಿದೆ.

ವರದಿಯ ಪ್ರಮುಖ ಅಂಶಗಳು:ಸಾಂಕ್ರಾಮಿಕತೆ ಬಳಿಕ ಜನರ ಮಾನಸಿಕ ಆರೋಗ್ಯವೂ ಕಡಿಮೆಯಾಗಿದ್ದು, ಪೂರ್ವ ಸಾಂಕ್ರಾಮಿಕತೆ ಮಟ್ಟಕ್ಕೆ ಮರಳುವ ಯಾವುದೇ ಸೂಚನೆಯನ್ನು ನೀಡಿಲ್ಲ. ಸಾಂಕ್ರಾಮಿಕತೆ ಸಮಯದಲ್ಲಿ ಇಳಿಕೆ ಕಂಡ ಮಾನಸಿಕ ಆರೋಗ್ಯವೂ 2021-22 ಮತ್ತು 2023ರ ಎಂಎಚ್​ಕ್ಯೂನಲ್ಲಿ ಕೂಡ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಸಾಂಕ್ರಾಮಿಕತೆ ಹೇಗೆ ದೀರ್ಘಾವಧಿ ಪರಿಣಾಮ ಬೀರಿದೆ. ಜನರ ಜೀವನ ಮಟ್ಟ ಮತ್ತು ಕೆಲಸ ಮತ್ತು ಅವರ ಹವ್ಯಾಸದ ಮೇಲೆ ಪರಿಣಾಮ ತೋರಿಸಿದೆ ಎಂಬ ಪ್ರಶ್ನೆ ಮೂಡಿಸಿದೆ. ಉದಾಹರಣೆ, ರಿಮೋಟ್​ ವರ್ಕಿಂಗ್​, ಆನ್​ಲೈನ್​ ಸಂಪರ್ಕ, ಸಂಸ್ಕರಿತ ಆಹಾರ ಸೇವನೆಗಳಾಗಿದೆ. ಇವು ಕಳಪೆ ಮಾನಸಿಕ ಆರೋಗ್ಯಕ್ಕೆ ಅವರನ್ನು ದೂಡುವಂತೆ ಮಾಡಿದೆ.

ಯುವ ಪೀಳಿಗೆ ವಿಶೇಷವಾಗಿ 35 ವರ್ಷದೊಳಗಿನವರಲ್ಲಿ ಮಾನಸಿಕ ಆರೋಗ್ಯವೂ ಕೋವಿಡ್​ ಸಮಯದಲ್ಲಿ ಭಾರಿ ಇಳಿಕೆ ಕಂಡರೆ, 65 ವರ್ಷ ಮೇಲ್ಪಟ್ಟವರಲ್ಲಿ ಸ್ಥಿರವಾಗಿದೆ. ಎಲ್ಲ ವಯೋಮಾನದವರಲ್ಲಿ ಈ ಮಾನಸಿಕ ಆರೋಗ್ಯದಲ್ಲಿ ಇಳಿಕೆ ಕಂಡಿದೆ. ಇದರಿಂದ ಯುವಜನತೆಯಲ್ಲಿ ಪೂರ್ವದಲ್ಲೇ ಅಸ್ತಿತ್ವದಲ್ಲಿದ್ದ ಕಳಪೆ ಮಾನಸಿಕ ಆರೋಗ್ಯವನ್ನು ಇದೀಗ ಜಗತ್ತಿನೆಲ್ಲೆಡೆ ಸ್ಪಷ್ಟವಾಗಿ ಕಾಣುವಂತೆ ಆಗಿದೆ.

ಈ ಹಿಂದಿನ ವರ್ಷದಲ್ಲಿ ಯುವ ಜನತೆಯ ಮಾನಸಿಕ ಆರೋಗ್ಯ ವಿಚಾರದಲ್ಲಿ ಅನೇಕ ಆಫ್ರಿಕನ್​ ಮತ್ತು ಲ್ಯಾಟಿನ್​ ಅಮೆರಿಕ ದೇಶ ಪ್ರಮುಖ ಸ್ಥಾನದಲ್ಲಿದ್ದವು. ಶ್ರೀಮಂತರಾಷ್ಟ್ರಗಳಾಗಿದ್ದ ಆಸ್ಟ್ರೇಲಿಯಾ ಮತ್ತು ಯುಕೆ ಈ ಪಟ್ಟಿಯಲ್ಲಿ ಕಡೆಯ ಸ್ಥಾನದಲ್ಲಿತ್ತು. ಈ ಮಾದರಿಯನ್ನು ಗಮನಿಸಿದಾಗ ಸಂಪತ್ತು ಮತ್ತು ಆರ್ಥಿಕತೆ ಅಭಿವೃದ್ಧಿಯೂ ಮಾನಸಿಕ ಆರೋಗ್ಯವನ್ನು ವೃದ್ಧಿಸುವುದಿಲ್ಲ ಎಂದು ತೋರಿಸಿತು. 2023ರಲ್ಲಿ ಗ್ಲೋಬಲ್​ ಮೈಂಡ್​ ಪ್ರಾಜೆಕ್ಟ್​ ದತ್ತಾಂಶವೂ ಈ ಕುರಿತು ಕೆಲವು ಪ್ರಮುಖ ಅಂಶವನ್ನು ತಿಳಿಸಿದೆ. ಅದರಲ್ಲಿ ಚಿಕ್ಕ ವಯಸ್ಸಿನಲ್ಲಿ ಸ್ಮಾರ್ಟ್​ಫೋನ್​ ಬಳಕೆ, ಪದೇ ಪದೆ ಹೆಚ್ಚು ಸಂಸ್ಕರಿತ ಆಹಾರ ತಿನ್ನುವಿಕೆ, ಸ್ನೇಹಿತರು ಮತ್ತು ಕುಟುಂಬದ ಸಂಬಂಧಗಳಲ್ಲಿನ ಬಿರುಕುಗಳು ಕೂಡಾ ಇದರಲ್ಲಿ ಸೇರಿವೆ. ಅಲ್ಲದೇ, ಶ್ರೀಮಂತ ದೇಶದಲ್ಲಿ ಇವುಗಳನ್ನು ತಡೆಗಟ್ಟಬಹುದಾಗಿದೆ.

ಹಾಗಾದ್ರೆ ಜಗತ್ತಿನಲ್ಲಿ ಸಂತೋಷದಿಂದ ಇರುವ ಜನರು ಯಾರು?:ಡೊಮಿನಿಕನ್​ ರಿಪಬ್ಲಿಕನ್​ ಈ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಇಲ್ಲಿನ ಜನರ ಎಂಎಚ್​ಕ್ಯೂ 300ರಲ್ಲಿ 91 ಆಗಿದೆ. ಅಚ್ಚರಿ ಸಂಗತಿ ಎಂದರೆ ಶ್ರೀಲಂಕಾ ಎರಡನೇ ಸ್ಥಾನ ಇದೆ. ರಾಜಕೀಯ ಮತ್ತು ಆರ್ಧಿಕತೆ ಬಿಕ್ಕಟ್ಟಿನ ನಡುವೆ ಶ್ರೀಲಂಕಾ 89 ಸ್ಕೋರ್​ ಮಾಡಿದೆ. ಮೂರನೇ ಸ್ಥಾನದಲ್ಲಿ ತಾಂಜೇನಿಯಾ 88ರಷ್ಟು ಸ್ಕೋರ್​ ಮಾಡಿದೆ.

ಅಸಂತೋಷದ ದೇಶಗಳು: ಉಜೇಕಿಸ್ತಾನ 48 ಸ್ಕೋರ್​ ಮಾಡಿದರೆ, ನಂತರದಲ್ಲಿ ಯುಕೆ 49ನೇ ಸ್ಥಾನ ಪಡೆದಿದೆ, ಇದೇ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಈಜಿಪ್ಟ್​​ಗಳಿದೆ.

ಭಾರತದ ಸ್ಥಾನ:ಭಾರತವೂ ಅತ್ಯಂತ ಕಳಪೆ 10 ಸ್ಥಾನಗಳಿಂದ ಪರಾಗಿದ್ದು, 61 ಸ್ಕೋರ್​ ಮಾಡಿದೆ. ಅಚ್ಚರಿ ಅಂಶ ಎಂದರೆ, ನೆರೆಯ ಪಾಕಿಸ್ತಾನವೂ 58 ಸ್ಕೋರ್​ ಮಾಡುವ ಮೂಲಕ ಭಾರತಕ್ಕಿಂತ ಉತ್ತಮ ಸ್ಥಿತಿ ಕಾಯ್ದುಕೊಂಡಿದೆ. ತೊಂದರೆಗೀಡಾದ ಮತ್ತು ಕಷ್ಟಪಡುತ್ತಿರುವ ಪಟ್ಟಿಯಲ್ಲಿ ಭಾರತವೂ 7ನೇ ಸ್ಥಾನ ಪಡೆದಿದೆ.

ಚಾಲನೆ ಮತ್ತು ಪ್ರೇರಣೆ/ ಸ್ಥಿತಿಸ್ಥಾಪಕತ್ವದ ಸ್ಕೋರ್​:ಎಲ್ಲ ಆಯಾಮಗಳ ಹೊರತಾಗಿಯೂ ಅಳವಡಿಕೆ ಮತ್ತು ಸ್ಥಿತಿಸ್ಥಾಪಕತೆ ಹಾಗೂ ಚಾಲನೆ ಮತ್ತು ಪ್ರೇರಣೆ ಬಹುತೇಕ ದೇಶದಲ್ಲಿ ಅತಿ ಹೆಚ್ಚು ಸ್ಕೋರ್​ ಮಾಡಿದೆ. ಇದೇ ವೇಳೆ, ಮನಸ್ಥಿತಿ ಮತ್ತು ಹೊರಗಿನ ನೋಟ ಮತ್ತು ಸಾಮಾಜಿಕ ಸ್ವಾಸ್ಥವೂ ಕಳಪೆ ಸ್ಕೋರ್​ ಮಾಡಿದೆ. ಪ್ರತ್ಯೇಕ ದೇಶಗಳಾದ್ಯಂತ ಪ್ರತಿಯೊಂದು 6 ಆಯಾಮಗಳಿಗೆ ಒಟ್ಟು ಸ್ಕೋರ್‌ಗಳು ಒಟ್ಟಾರೆ ಎಂಎಚ್​ಕ್ಯೂ ಸ್ಕೋರ್‌ಗಳ ಪ್ರವೃತ್ತಿಯನ್ನು ವ್ಯಾಪಕವಾಗಿ ಅನುಸರಿಸುತ್ತಿದ್ದರೂ, ವೈಯಕ್ತಿಕ ಆಯಾಮಗಳ ಶ್ರೇಯಾಂಕಗಳಲ್ಲಿ ಕೆಲವು ಭಿನ್ನತೆಗಳು ದೇಶಗಳು ತಮ್ಮ ಮಾನಸಿಕ ಯೋಗಕ್ಷೇಮದಲ್ಲಿ ಬದಲಾಗುತ್ತವೆ ಎಂದು ಸೂಚಿಸುತ್ತವೆ.

ಚಾಲನೆ ಮತ್ತು ಪ್ರೇರಣೆ ಸ್ಕೋರ್​ನಲ್ಲಿನ ಭಾರತ, ಪಾಕಿಸ್ತಾನ ಮತ್ತು ಕಜಾಕಿಸ್ತಾನ ಇತರ ದೇಶಗಳಿಗಿಂತ ಉತ್ತಮ ಸ್ಕೋರ್​ ಮಾಡಿದೆ. ಇದೇ ರೀತಿ ಅಳವಡಿಕೆ ಮತ್ತು ಸ್ಥಿತಿಸ್ಥಾಪಕತೆ ಸ್ಕೋರ್​ನಲ್ಲಿ ಕೆನಡಾ, ಜರ್ಮನಿ, ಐರ್ಲೆಂಡ್​, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಯುಕೆ ಇತರ ದೇಶಗಳಿಗಿಂತ ಉತ್ತಮ ಸ್ಥಾನದಲ್ಲಿದೆ. ಜೊತೆಗೆ ಮನಸು - ದೇಹ ಸಂಪರ್ಕದಲ್ಲಿ ಅಮೆರಿಕ ಕಡಿಮೆ ಸ್ಕೋರ್​ ಮಾಡಿದೆ. ಇದರಲ್ಲಿ ಭಾರತ, ಪಾಕಿಸ್ತಾನ ಮತ್ತು ಬೊಲಿವಿನ್​ ಅತಿ ಹೆಚ್ಚು ಸ್ಕೋರ್​ ಮಾಡಿದೆ.

ಜಗತ್ತಿನ ಟಾಪ್​​ 10 ಸಂತೋಷದ ದೇಶಗಳ ಪಟ್ಟಿ

  1. ಡೊಮಿನಿಕನ್​ ರಿಪಬ್ಲಿಕ್​
  2. ಶ್ರೀಲಂಕಾ
  3. ತಾಂಜೇನಿಯಾ
  4. ಪನಾಮಾ
  5. ಮಲೇಷ್ಯಾ
  6. ನೈಜೀರಿಯಾ
  7. ವೆನಿಜುಯೆಲ್​
  8. ಎಲ್​ ಸಲ್ವಡೊರ್​
  9. ಕೋಸ್ಟಾರಿಕಾ
  10. ಉರುಗ್ವೆ

ಜಗತ್ತಿನ ಟಾಪ್​ 10 ಅಸಂತೋಷದ ದೇಶಗಳು

  1. ಉಜ್ಬೇಕಿಸ್ತಾನ
  2. ಯುಕೆ
  3. ದಕ್ಷಿಣ ಆಫ್ರಿಕಾ
  4. ಬ್ರೆಜಿಲ್​
  5. ತಜಕಿಸ್ತಾನ
  6. ಆಸ್ಟ್ರೇಲಿಯಾ
  7. ಈಜಿಪ್ಟ್​​
  8. ಐರ್ಲಂಡ್​
  9. ಇರಾಕ್​
  10. ಯಮನ್​

ಇದನ್ನೂ ಓದಿ: ಸಾಮಾಜಿಕ ಮಾಧ್ಯಮದಿಂದ ದೂರವಿದ್ದಷ್ಟೂ ಮಾನಸಿಕ ಆರೋಗ್ಯ ಸುಧಾರಣೆ: ಸಂಶೋಧನಾ ವರದಿ

ABOUT THE AUTHOR

...view details