ಕರ್ನಾಟಕ

karnataka

ಕೋವಿಡ್‌ನಿಂದಾಗಿ ಲಸಿಕೆ ವಿತರಣೆಗೆ ಅಡ್ಡಿ; ಜಗತ್ತಿನೆಲ್ಲೆಡೆ 50 ಸಾವಿರಕ್ಕೂ ಹೆಚ್ಚು ಸಾವು ಸಾಧ್ಯತೆ - Disruptions To Immunization

By ETV Bharat Karnataka Team

Published : Apr 2, 2024, 3:24 PM IST

ಕೋವಿಡ್​ 19 ರೋಗವು ದಡಾರ, ರುಬೆಲ್ಲಾ, ಎಚ್​ಪಿವಿ, ಹೆಪಟೈಟಿಸ್​ ಬಿ, ಮೆನಿಂಜೈಟಿಸ್ ಎ ಮತ್ತು ಹಳದಿ ಜ್ವರ ಮುಂತಾದ ರೋಗಗಳಿಗೆ ನೀಡುವ ಲಸಿಕೆ ವಿತರಣೆಗೆ ಅಡ್ಡಿಪಡಿಸಿದೆ ಎಂದು ವರದಿಯಾಗಿದೆ.

additional deaths globally are estimated pandemic-related disruptions to immunisation
additional deaths globally are estimated pandemic-related disruptions to immunisation

ನವದೆಹಲಿ: ಅನೇಕ ಸೋಂಕು ಮತ್ತು ರೋಗಗಳ ವಿರುದ್ದ ನಿಯಮಿತ ಲಸಿಕೆ ಪಡೆಯುವುದು ಅವಶ್ಯಕ. ಆದರೆ ಕೋವಿಡ್​ 19 ಸಾಂಕ್ರಾಮಿಕತೆಯಿಂದ 2020ರಿಂದ 2030ರ ನಡುವೆ ಲಸಿಕೆ ವಿತರಣೆಗೆ ಅಡ್ಡಿಯುಂಟಾಗಿ ಜಾಗತಿಕವಾಗಿ ಅಂದಾಜು 50 ಸಾವಿರಕ್ಕೂ ಹೆಚ್ಚು ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ದಿ ಲ್ಯಾನ್ಸೆಟ್​ ಹೆಲ್ತ್​ ಜರ್ನಲ್​ ತಿಳಿಸಿದೆ.

ದಡಾರ, ರುಬೆಲ್ಲಾ, ಎಚ್​ಪಿವಿ, ಹೆಪಟೈಟಿಸ್​ ಬಿ, ಮೆನಿಂಜೈಟಿಸ್ ಎ ಮತ್ತು ಹಳದಿ ಜ್ವರ ಸಂಬಂಧಿತ ಲಸಿಕೆಗಳ ನೀಡುವಿಕೆ ಮೇಲೆ ಕೋವಿಡ್​ ಸಾಂಕ್ರಾಮಿಕ ಪರಿಣಾಮ ಬೀರಿದೆ ಎಂದು ಅಧ್ಯಯನ ಹೇಳುತ್ತದೆ.

ಈ ಹೆಚ್ಚುವರಿ ಸಾವಿನಲ್ಲಿ 30 ಸಾವಿರ ಸಾವು ಆಫ್ರಿಕಾ ಮತ್ತು ಉಳಿದ 13 ಸಾವಿರ ಆಗ್ನೇಯ ಏಷ್ಯಾ ಖಂಡದಲ್ಲಿ ಸಂಭವಿಸಲಿದೆ. ಇಲ್ಲಿ ದಡಾರ ಸಂಬಂಧಿತ ರೋಗಗಳಿಗೆ ನೀಡುವ ಲಸಿಕೆ ವಿತರಣೆಗೆ ಅಡ್ಡಿಯುಂಟಾಗಿದೆ. ಜಾಗತಿಕವಾಗಿ ದಡಾರ ರೋಗ ನಿರೋಧಕತೆ ಲಸಿಕೆಯ ಅಡ್ಡಿಯಿಂದ ಉಂಟಾಗುವ ಸಾವು ಹೆಚ್ಚಿನ ಮಟ್ಟದಲ್ಲಿದ್ದು, ಇದು 44,500 ಮೀರಲಿದೆ ಎಂದು ಅಂದಾಜಿಸಲಾಗಿದೆ. ಇದರ ಜತೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್​ಒ) ಪ್ರಕಾರ, ಮೆನಿಂಜೈಟಿಸ್​ ಹೊರೆಯೂ ಹೆಚ್ಚಲಿದೆ.

ನಿಯಮಿತವಾಗಿ ಪಡೆಯಬೇಕಾಗಿರುವ ಲಸಿಕೆ ವಿತರಣೆಗಾದ ಅಡ್ಡಿಯಿಂದ 2023ರಿಂದ 2030ರ ನಡುವೆ ಶೇ 80ರಷ್ಟು ಹೆಚ್ಚುವರಿ ಸಾವು ಸಂಭವಿಸಲಿದೆ ಎಂದು ಅಂತಾರಾಷ್ಟ್ರೀಯ ಸಂಶೋಧಕರ ತಂಡ ಹೇಳಿದೆ.

ಇದನ್ನೂ ಓದಿ:ಕೋವಿಡ್​ ನಂತರ ಆನ್​ಲೈನ್ ವೈದ್ಯಕೀಯ ಕನ್ಸಲ್ಟೇಶನ್​ 4 ಪಟ್ಟು ಹೆಚ್ಚಳ

ABOUT THE AUTHOR

...view details