ಕರ್ನಾಟಕ

karnataka

'ನೀ ನನ್ನ ಜಗದ ಬೆಳಕು': ಮುದ್ದಿನ ಮಡದಿ ಅನುಷ್ಕಾ ಬರ್ತ್​ಡೇಗೆ ವಿರಾಟ್​​ ಸ್ಪೆಷಲ್​ ವಿಶ್​​ - Anushka Sharma Birthday

By ETV Bharat Karnataka Team

Published : May 1, 2024, 7:06 PM IST

Updated : May 2, 2024, 6:11 AM IST

36ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಅನುಷ್ಕಾ ಶರ್ಮಾ ಅವರಿಗೆ ಪತಿ ವಿರಾಟ್​​ ವಿಶೇಷವಾಗಿ ಶುಭ ಕೋರಿದ್ದಾರೆ.

Virushka
ವಿರುಷ್ಕಾ

ಬಾಲಿವುಡ್ ಅಭಿನೇತ್ರಿ ಅನುಷ್ಕಾ ಶರ್ಮಾ ಅವರಿಗೆ ಇಂದು 36ನೇ ಹುಟ್ಟುಹಬ್ಬ. ಸಿನಿಮಾಗಳಿಂದ ದೂರ ಉಳಿದರೂ ಸಾಕಷ್ಟು ಜನಪ್ರಿಯತೆ ಹೊಂದಿರುವ ನಟಿಗೆ ಕುಟುಂಬಸ್ಥರು, ಸಿನಿ ಸ್ನೇಹಿತರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರಿದ್ದಾರೆ. ಮತ್ತೊಂದೆಡೆ, ಪತಿ ವಿರಾಟ್​​ ಸ್ಪೆಷಲ್​​ ವಿಶ್​​ ಮಾಡಿದ್ದು, ಅವರ ಪೋಸ್ಟ್ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಅನುಷ್ಕಾ ಶರ್ಮಾ ಅವರ ವಿಶೇಷ ದಿನದಂದು ಪತಿ, ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಪ್ರೀತಿಪೂರ್ವಕ ಪೋಸ್ಟ್ ಶೇರ್ ಮಾಡಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಮುದ್ದಿನ ಮಡದಿ ಅನುಷ್ಕಾ ಜೊತೆಗಿನ ಕೆಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

''ನನಗೆ ನೀ ಸಿಗದಿದ್ದರೆ ನಾ ಸಂಪೂರ್ಣವಾಗಿ ಕಳೆದುಹೋಗುತ್ತಿದ್ದೆ. ಹ್ಯಾಪಿ ಬರ್ತ್​ ಡೇ ಮೈ ಲವ್. ನನ್ನ ಜಗತ್ತಿಗೆ ನೀನೇ ಬೆಳಕು. ನಾನು ನಿನ್ನನ್ನು ತುಂಬಾನೇ ಪ್ರೀತಿಸುತ್ತೇನೆ'' ಎಂದು ಬರೆದಿದ್ದಾರೆ.

ಇದನ್ನೂ ಓದಿ:ಶುಕ್ರವಾರದ ಹೈವೋಲ್ಟೇಜ್ ಐಪಿಎಲ್ ಪಂದ್ಯದ​ ಪ್ರಚಾರಕ್ಕೆ 'ಕಲ್ಕಿ'ಯ 'ಭೈರವ'ನಾಗಿ ಬಂದ ಪ್ರಭಾಸ್ - Prabhas

ನಾಲ್ಕು ಫೋಟೋಗಳ ಪೈಕಿ ಎರಡಲ್ಲಿ ಅನುಷ್ಕಾ ಇದ್ದಾರೆ. ಇನ್ನೆರಡು 'ವಿರುಷ್ಕಾ' ಜೊತೆಯಾಗಿ ನಡೆದು ಹೋಗುತ್ತಿರುವ ಮತ್ತು ನದಿ ದಡದಲ್ಲಿ ಕುಳಿತಿರುವ ಫೊಟೋಗಳಿವೆ.

Last Updated : May 2, 2024, 6:11 AM IST

ABOUT THE AUTHOR

...view details