ಕರ್ನಾಟಕ

karnataka

'ರಾಮಾಯಣ'ದಲ್ಲಿ ನಟಿಸಲು 150 ಕೋಟಿ ರೂ. ಪಡೆಯಲಿದ್ದಾರಾ ಯಶ್? - Ramayana

By ETV Bharat Karnataka Team

Published : Apr 6, 2024, 8:07 PM IST

ರಾಮಾಯಣ ತಾರಾ ಬಳಗದ ಸಂಭಾವನೆ ಬಗ್ಗೆ ಚರ್ಚೆ ನಡೆಯುತ್ತಿದೆ.

Ramayana
ರಾಮಾಯಣ

ನಿತೇಶ್ ತಿವಾರಿ ಅವರ ಕನಸಿನ ಪ್ರೊಜೆಕ್ಟ್​ 'ರಾಮಾಯಣ' ಈಗಾಗಲೇ ಸೆಟ್ಟೇರಿದೆ. ರಣ್​ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಮುಖ್ಯಭೂಮಿಕೆಯ ಈ ಚಿತ್ರ ಎರಡು ಭಾಗಗಳಲ್ಲಿ ತಯಾರಾಗುತ್ತಿದೆ. ಚಿತ್ರದ ಕುರಿತ ಚರ್ಚೆಗಳು ಜೋರಾಗಿದ್ದು, ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ. ಸೆಟ್​ನಿಂದ ಹಲವು ಫೋಟೋ-ವಿಡಿಯೋಗಳು ವೈರಲ್ ಆಗಿದ್ದು, ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ. ಮುಂಬೈನ ಫಿಲ್ಮ್ ಸಿಟಿಯ ಸೆಟ್‌ನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ತಾರಾ ಬಳಗದ ಸಂಭಾವನೆ ಬಗ್ಗೆ ಚರ್ಚೆ ನಡೆಯುತ್ತಿದೆ.

ಸಾಯಿ ಪಲ್ಲವಿ ಸಂಭಾವನೆ: ಸೀತಾ ದೇವಿ ಪಾತ್ರ ನಿರ್ವಹಿಸಲಿರುವ ಸೌತ್ ಸಿನಿಮಾ ಇಂಡಸ್ಟ್ರಿಯ ಟಾಪ್​ ಹೀರೋಯಿನ್ ಸಾಯಿ ಪಲ್ಲವಿ ಈ ಚಿತ್ರಕ್ಕೆ ತಮ್ಮ ಹಿಂದಿನ ಚಿತ್ರಗಳ ಶುಲ್ಕಕ್ಕಿಂತ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, 'ರಾಮಾಯಣ' ಚಿತ್ರದಲ್ಲಿ ಸೀತೆಯ ಪಾತ್ರಕ್ಕಾಗಿ ಸಾಯಿ ಪಲ್ಲವಿ 18 ರಿಂದ 20 ಕೋಟಿ ರೂ. ಪಡೆಯಲಿದ್ದಾರಂತೆ. ಸಾಮಾನ್ಯವಾಗಿ ನಟಿ ಚಿತ್ರವೊಂದಕ್ಕೆ 6 ಕೋಟಿ ರೂ. ಚಾರ್ಜ್ ಮಾಡುತ್ತಾರೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

ಯಶ್ ಸಂಭಾವನೆ: ಕೆಜಿಎಫ್ ಸ್ಟಾರ್ ಯಶ್ ಚಿತ್ರದಲ್ಲಿ ರಾವಣನ ಪಾತ್ರ ನಿರ್ವಹಿಸಲಿದ್ದಾರೆ ಎಂಬುದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕೆಜಿಎಫ್ ಮೂಲಕ ಖ್ಯಾತಿ ಹೆಚ್ಚಿಸಿಕೊಂಡಿರುವ ಯಶ್ ಸಾಮಾನ್ಯವಾಗಿ ಚಿತ್ರವೊಂದಕ್ಕೆ 50 ಕೋಟಿ ರೂ. ಪಡೆಯುತ್ತಾರೆ. ಆದರೆ ಮಾಧ್ಯಮ ವರದಿಗಳ ಪ್ರಕಾರ, ರಾಮಾಯಣದ ರಾವಣನ ಪಾತ್ರಕ್ಕೆ 150 ಕೋಟಿ ರೂ. ಪಡೆಯಲಿದ್ದಾರಂತೆ.

ರಣ್​ಬೀರ್ ಕಪೂರ್ ಸಂಭಾವನೆ: ರಣ್​​ಬೀರ್ ಕಪೂರ್ ಚಿತ್ರವೊಂದಕ್ಕೆ 75 ಕೋಟಿ ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ. ಆದ್ರೆ 'ರಾಮಾಯಣ'ದಲ್ಲಿ ರಾಮ್ ಪಾತ್ರಕ್ಕಾಗಿ 225 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಅವರ ಹಿಂದಿನ ಚಿತ್ರ 'ಅನಿಮಲ್' ಬಾಕ್ಸ್ ಆಫೀಸ್‌ನಲ್ಲಿ 900 ಕೋಟಿ ರೂಪಾಯಿ ಕಲೆಕ್ಷನ್​​ ಮಾಡಿದ್ದು, ನಟನ ಜನಪ್ರಿಯತೆ ಹೆಚ್ಚಿಸಿದೆ.

ಇದನ್ನೂ ಓದಿ:'ರಾಮಾಯಣ'ಕ್ಕಾಗಿ ₹11 ಕೋಟಿಯ ಅಯೋಧ್ಯೆ ಸೆಟ್ ನಿರ್ಮಾಣ: ವಿಡಿಯೋ ವೈರಲ್ - Ramayana Shooting set

ABOUT THE AUTHOR

...view details