ಕರ್ನಾಟಕ

karnataka

ಶುಕ್ರವಾರದ ಹೈವೋಲ್ಟೇಜ್ ಐಪಿಎಲ್ ಪಂದ್ಯದ​ ಪ್ರಚಾರಕ್ಕೆ 'ಕಲ್ಕಿ'ಯ 'ಭೈರವ'ನಾಗಿ ಬಂದ ಪ್ರಭಾಸ್ - Prabhas

By ETV Bharat Karnataka Team

Published : May 1, 2024, 5:26 PM IST

ಮೇ 3ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಹೈವೋಲ್ಟೇಜ್ ಪಂದ್ಯದ ಪ್ರಚಾರವನ್ನು ನಟ ಪ್ರಭಾಸ್ ತಮ್ಮ ಕಲ್ಕಿ ಚಿತ್ರದ 'ಭೈರವ' ಪಾತ್ರದ ಮೂಲಕ ಮಾಡಿದ್ದಾರೆ.

Prabhas Bhairava Avatar
'ಕಲ್ಕಿ'ಯ 'ಭೈರವ'ನಾಗಿ ಪ್ರಭಾಸ್

'ಕಲ್ಕಿ 2898 ಎಡಿ' ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇದೀಗ 'ಭೈರವ' ಅವತಾರದಲ್ಲಿ ಡಾರ್ಲಿಂಗ್​ ಪ್ರಭಾಸ್​​ ಕಾಣಿಸಿಕೊಂಡಿದ್ದಾರೆ. ಹೌದು, ತಮ್ಮ ಸಿನಿಮಾದ ಜೊತೆ ಜೊತೆಗೆ ಐಪಿಎಲ್​ ಪ್ರಚಾರವನ್ನೂ ನಡೆಸಿದ್ದಾರೆ. ಈ ಕುರಿತ ನಟನ ಕುತೂಹಲಕಾರಿ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಹಿಂದೆ ಬಹಿರಂಗಪಡಿಸಿದಂತೆ ನಾಗ್ ಅಶ್ವಿನ್ ನಿರ್ದೇಶನದ ಈ ಬಿಗ್-ಬಜೆಟ್ ಚಿತ್ರದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಭೈರವ ಪಾತ್ರ ನಿರ್ವಹಿಸಲಿದ್ದಾರೆ ಎಂಬುದನ್ನು ವಿಡಿಯೋ ಖಚಿತಪಡಿಸಿದೆ. ಸದ್ಯ ಐಪಿಎಲ್​ 2024 ಪ್ರಸಾರದ ಸಮಯದಲ್ಲಿ ಬಂದ ವಿಡಿಯೋದಲ್ಲಿ ಪ್ರಭಾಸ್ ಭೈರವನಾಗಿ ಕಾಣಿಸಿಕೊಂಡಿದ್ದಾರೆ. ತಯಾರಕರು ಚಿತ್ರದ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋ ತುಣುಕನ್ನು ಪೋಸ್ಟ್ ಮಾಡಿದ್ದಾರೆ.

ಏಪ್ರಿಲ್ 30ರಂದು ಸಿನಿಮಾದ ಅಧಿಕೃತ ಟ್ವಿಟರ್ ಖಾತೆ ಈ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಪ್ರಭಾಸ್ ಅವರ ಭೈರವ ಅವತಾರ ಟಿವಿಯಲ್ಲಿ ಬಂದಿದೆ. "ಕಲ್ ಕೆ ಲಿಯೇ ಆಜ್ ಖೇಲೋ" (ನಾಳೆಗಾಗಿ ಇಂದು ಆಡು) ಎಂಬ ಕ್ಯಾಪ್ಷನ್​​ ಕೊಟ್ಟಿದೆ. ಲಕ್ನೋ ಸೂಪರ್‌ಜೈಂಟ್ಸ್ ವರ್ಸಸ್ ಮುಂಬೈ ಇಂಡಿಯನ್ಸ್ ಐಪಿಎಲ್ ಪಂದ್ಯದ ವೇಳೆ ಕಾಣಿಸಿಕೊಂಡ ವಿಡಿಯೋ ಇದಾಗಿದೆ. ಮೇ 3ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಹೈವೋಲ್ಟೇಜ್ ಪಂದ್ಯದ ಪ್ರಚಾರವನ್ನು ಈ ವಿಡಿಯೋ ಮಾಡಿದೆ.

ಮೇ 3ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್​​​ 2024 ಸೂಪರ್ ಪಂದ್ಯದ ಮೇಲೆ ಕ್ರೀಡಾಭಿಮಾನಿಗಳು ತಮ್ಮ ನಿರೀಕ್ಷೆಯನ್ನು ಹೊಂದಲು ಆಹ್ವಾನಿಸುವ ಮೂಲಕ ತಮ್ಮ ಚಿತ್ರದ ಪ್ರಚಾರವನ್ನೂ ಮಾಡಿದ್ದಾರೆ. ಪ್ರಭಾಸ್ ಭೈರವನ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಕ್ರಿಕೆಟ್‌ಗೆ ಸಂಬಂಧಿಸಿದಂತೆ ಡೈಲಾಗ್ಸ್ ಹೊಡೆದಿದ್ದಾರೆ. ಕ್ರಿಕೆಟ್ ಕೂಡ ಒಂದು ಯುದ್ಧ. ಉಸಿರು ಬಿಗಿಹಿಡಿದುಕೊಳ್ಳಿ. ಇದು ಐಪಿಎಲ್‌ನ ಗ್ರ್ಯಾಂಡ್ ಮ್ಯಾಚ್. ನಾಳೆಗೆ ಇಂದೇ ಆಟವಾಡಿ ಎಂದು ಆಕರ್ಷಕ ಡೈಲಾಗ್​​ ಹೇಳಿದ್ದಾರೆ.

ಇದನ್ನೂ ಓದಿ:ಸಲ್ಮಾನ್​​ ಕೇಸ್: ಬಿಷ್ಣೋಯ್ ಗ್ಯಾಂಗ್‌ಗೆ ಅಂತಾರಾಷ್ಟ್ರೀಯ ಗುಂಪುಗಳಿಂದ ನೆರವು? ಪರಿಶೀಲನೆ - Salman Khan Case

ಈ ಹಿಂದೆ ಐಪಿಎಲ್ ಪ್ರಸಾರದ ಸಮಯದಲ್ಲಿ ಚಿತ್ರತಯಾರಕರು ಹಿರಿಯ ನಟ ಅಮಿತಾಭ್​​ ಬಚ್ಚನ್ ಅವರ ಅಶ್ವತ್ಥಾಮನ ನೋಟವನ್ನು ಬಹಿರಂಗಪಡಿಸಿದ್ದರು. ಇದು ಸಾಮಾಜಿಕ ಮಾಧ್ಯಮದಲ್ಲಿ ಕೆಲ ದಿನಗಳವರೆಗೆ ಟ್ರೆಂಡಿಂಗ್​ನಲ್ಲಿತ್ತು. ಏಪ್ರಿಲ್ 21ರ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಪಂದ್ಯದ ಸಂದರ್ಭ ಬಿಗ್​ ಬಿ ನೋಟ ರಿವೀಲ್​ ಆಗಿ, ಸಿನಿಮಾ ನೋಡಬೇಕೆಂಬ ಪ್ರೇಕ್ಷಕರ ಕುತೂಹಲ ಹೆಚ್ಚಿಸಿತ್ತು.

ಇದನ್ನೂ ಓದಿ:'ಕನ್ನಡಕ್ಕೆ ದೈವಿಕ ಶಕ್ತಿಯಿದೆ, ನಾನು ರಾಜ್​ ಅಭಿಮಾನಿ': ಮಲಯಾಳಂನ ಖ್ಯಾತ ನಟ - Manoj K Jayan

'ಕಲ್ಕಿ 2898 ಎಡಿ'ಯನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದ್ರೆ ಸೈನ್ಸ್ ಫಿಕ್ಷನ್​​ ಸಿನಿಮಾ ಜೂನ್ 27ರಂದು ತೆರೆಕಾಣಲಿದೆ. ಚಿತ್ರತಯಾರಕರು ಇತ್ತೀಚೆಗೆ ಎಕ್ಸ್​​​ನಲ್ಲಿ ಸಿನಿಮಾ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ. "ಎಲ್ಲಾ ಶಕ್ತಿಗಳು ಉತ್ತಮ ನಾಳೆಗಾಗಿ 27-06-2024ರಂದು ಒಟ್ಟು ಸೇರುತ್ತವೆ" ಎಂದು ಬರೆದುಕೊಂಡಿದ್ದರು. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರವನ್ನು ವೈಜಯಂತಿ ಮೂವೀಸ್ ನಿರ್ಮಿಸಿದೆ. ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ.

ABOUT THE AUTHOR

...view details