ಕರ್ನಾಟಕ

karnataka

ನಟ ರಣವೀರ್​ಸಿಂಗ್‌ ಡೀಪ್​ ಫೇಕ್​ ವಿಡಿಯೋ ವೈರಲ್: ಶಂಕಿತ ಆರೋಪಿಗೆ ಸೈಬರ್​​ ಠಾಣೆಯಿಂದ ನೋಟಿಸ್​ - Ranveer Singh Deep fake Video

By ETV Bharat Karnataka Team

Published : Apr 24, 2024, 10:53 AM IST

ನಟ ರಣವೀರ್​ಸಿಂಗ್‌ ಅವರ ಬಗೆಗಿನ ಡೀಪ್​ ಫೇಕ್​ ವಿಡಿಯೋ ವಿರುದ್ಧ ಅವರ ತಂದೆ ಮಹಾರಾಷ್ಟ್ರ ಸೈಬರ್ ಸೆಲ್‌ನಲ್ಲಿ ದೂರು ದಾಖಲಿಸಿದ್ದಾರೆ.

ರಣವೀರ್​ಸಿಂಗ್‌ ಡೀಪ್​ ಫೇಕ್​ ವಿಡಿಯೋ
ರಣವೀರ್​ಸಿಂಗ್‌ ಡೀಪ್​ ಫೇಕ್​ ವಿಡಿಯೋ

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಾಲಿವುಡ್​​ ನಟ ರಣವೀರ್​ಸಿಂಗ್‌ ಅವರ ಡೀಪ್​​ ಫೇಕ್ ವಿಡಿಯೋ ವಿರುದ್ಧ​ ಮಹಾರಾಷ್ಟ್ರ ಸೈಬರ್ ಸೆಲ್‌ನಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದ್ದು, ಶಂಕಿತ ಆರೋಪಿಗೆ ನೋಟಿಸ್​ ಕಳುಹಿಸಲಾಗಿದೆ. ರಣವೀರ್ ಸಿಂಗ್ ತಂದೆ ಜುಗ್ಜಿತ್ ಸಿಂಗ್ ಸುಂದರ್ ಸಿಂಗ್ ಭವ್ನಾನಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 417, 468, 469, 471 ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 (ಡಿ) ರ ಅಡಿ ನೋಡಲ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಹಾರಾಷ್ಟ್ರ ಸೈಬರ್​ ಸೆಲ್‌ನ ಉಪ ಪೊಲೀಸ್ ಮಹಾನಿರೀಕ್ಷಕ ಸಂಜಯ್ ಶಿಂತ್ರೆ ಹೇಳಿದ್ದಾರೆ.

ಪ್ರಕರಣವೇನು?: ಮಂಗಳವಾರದಂದು ಮಹಾರಾಷ್ಟ್ರ ಸೈಬರ್​ನ ನೋಡಲ್​​ ಸೈಬರ್​​ ಪೊಲೀಸ್​​ ಠಾಣೆಯಲ್ಲಿ ತಕರ್ದಾರ್​ ಜುಗ್ಜಿತ್​ ಸಿಂಗ್ ಸುಂದರ್ ಸಿಂಗ್ ಭವ್ನಾನಿ ಅವರು ನೀಡಿದ ದೂರಿನ ಪ್ರಕಾರ, "ಅವರ ಪುತ್ರ ರಣವೀರ್ ಸಿಂಗ್​ ಏಪ್ರಿಲ್​ 14 ರಂದು ನಟಿ ಕೃತಿ ಸನೊನ್ ಅವರೊಂದಿಗೆ ಫ್ಯಾಶನ್ ಶೋನಲ್ಲಿ ಭಾಗವಹಿಸಲು ವಾರಾಣಸಿ ನಗರಕ್ಕೆ ಬಂದಿದ್ದರು. ಆ ಭೇಟಿಯ ಸಮಯದಲ್ಲಿ, ರಣವೀರ್ ಸಿಂಗ್ ಮಾಧ್ಯಮಕ್ಕೊಂದಕ್ಕೆ ಸಂದರ್ಶನ ನೀಡಿದ್ದರು. ಸಂದರ್ಶನದಲ್ಲಿ ಪವಿತ್ರ ವಾರಾಣಸಿಯ ಪರಿವರ್ತನೆಗಾಗಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಜಿ ಅವರನ್ನು ಶ್ಲಾಘಿಸಿದ್ದರು. "ನರೇಂದ್ರ ಮೋದಿ ಅವರ ಉದ್ದೇಶವು ನಮ್ಮ ಶ್ರೀಮಂತ ಸಂಸ್ಕೃತಿ, ನಮ್ಮ ಪರಂಪರೆ, ನಮ್ಮ ಇತಿಹಾಸ, ನಮ್ಮ ಪರಂಪರೆಯನ್ನು ಆಚರಿಸುವುದಾಗಿದೆ. ಏಕೆಂದರೆ ನಾವು ಆಧುನಿಕತೆಯತ್ತ ಸಾಗುತ್ತಿದ್ದೇವೆ. ಆದರೆ, ನಮ್ಮ ಪರಂಪರೆ, ಸಂಸ್ಕೃತಿಯನ್ನು ಎಂದಿಗೂ ಮರೆಯಬಾರದು" ಎಂದು ಹೇಳಿದ್ದರು. ಆದರೇ . ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್ ಮೂಲಕ ರಣವೀರ್​ ಸಿಂಗ್​ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಿರುವಂತೆ ಧ್ವನಿಯನ್ನು ತಿರುಚಲಾಗಿದೆ".

ಇನ್ನು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಹರಿದಾಡಿದ್ದು ಸಂದರ್ಶನದ ವಿಡಿಯೋವನ್ನು ನಕಲಿ ಎಂದು ಪತ್ತೆ ಹಚ್ಚಲು ಸಾಧ್ಯವಿಲ್ಲದಂತೆ ಎಡಿಟ್​ ಮಾಡಿದ್ದಾರೆ. ಸದ್ಯ ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ಮುದ್ದಿನ ಮಡದಿ ಜೊತೆಗಿನ ರೋಮ್ಯಾಂಟಿಕ್​ ಡೇಟ್ ​ವೇಳೆ ಪ್ಯಾಪಾರಾಜಿಗಳ ಮುಂದೆ ತಾಳ್ಮೆ ಕಳೆದುಕೊಂಡ ನಟ ಶಾಹೀದ್​ ಕಪೂರ್​​ - Shahid Loses Cool at Paparazzi

ABOUT THE AUTHOR

...view details