ಕರ್ನಾಟಕ

karnataka

ಅಂಧನ ಪಾತ್ರದಲ್ಲಿ ಸೈಫ್ ಅಲಿ ಖಾನ್: ಬಾಲಿವುಡ್​ ನಟನಿಗೆ ಬಿಗ್ ಬ್ರೇಕ್ ಕೊಡುತ್ತಾ ಸಿನಿಮಾ? - Saif Ali Khan

By ETV Bharat Karnataka Team

Published : May 10, 2024, 11:12 AM IST

ಕೊನೆಯದಾಗಿ ಆದಿಪುರುಷ್ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ಇದೀಗ ಹೊಸ ಪ್ರಯೋಗ ಮಾಡಲು ಸಜ್ಜಾಗಿದ್ದಾರೆ.

Saif Ali Khan
ಸೈಫ್ ಅಲಿ ಖಾನ್ (Getty Images)

ಸೈಫ್ ಅಲಿ ಖಾನ್ ಬಾಲಿವುಡ್‌ನ ಬಹುಬೇಡಿಕೆ ನಟರಲ್ಲೋರ್ವರು. 90ರ ದಶಕದಿಂದಲೂ ತಮ್ಮ ಅತ್ಯುತ್ತಮ ನಟನೆಯಿಂದ ಸಿನಿಪ್ರಿಯರನ್ನು ಮನರಂಜಿಸುತ್ತಾ ಬಂದಿರುವ ಸೈಫ್​​​​ ಪಾತ್ರಗಳಲ್ಲಿ ಹೊಸತನಕ್ಕೆ ಆದ್ಯತೆ ಕೊಡುತ್ತಾರೆ. ನಾಯಕ ನಟ, ಖಳನಾಯಕ ಎಂಬ ಭೇದವಿಲ್ಲದೇ ಎಲ್ಲಾ ಪಾತ್ರಗಳಿಗೂ ಜೀವ ತುಂಬುತ್ತಾರೆ. ಈವರೆಗೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಹಾದಿಯಲ್ಲೀಗ ನಟ ಮತ್ತೊಂದು ಹೊಸ ಪ್ರಯೋಗ ಮಾಡಲು ಹೊರಟಿದ್ದಾರೆ.

ಹೌದು, ಮುಂಬರುವ ಚಿತ್ರವೊಂದರಲ್ಲಿ ಸೈಫ್​​ ಅಂಧನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಸಿನಿಮಾ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ ಎಂಬ ಮಾಹಿತಿ ಇದೆ. ಸ್ಕ್ರಿಪ್ಟ್ ಕೂಡ ಸಿದ್ಧವಾಗಿದೆಯಂತೆ. ಥ್ರಿಲ್ಲಿಂಗ್ ಅಂಶಗಳೊಂದಿಗೆ ಈ ಸಿನಿಮಾ ತಯಾರಾಗುತ್ತಿದ್ದು, ಸೈಫ್ ಅಲಿ ಖಾನ್​​ಗೆ ಇದೊಂದು ಬಿಗ್​ ಬ್ರೇಕ್​​ ಕೊಡುವ ಸಿನಿಮಾ ಆಗಲಿದೆ ಎಂಬ ಮಾತುಗಳು ಚಿತ್ರರಂಗದಲ್ಲಿ ಕೇಳಿ ಬರುತ್ತಿವೆ. ಅದಾಗ್ಯೂ, ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.

ಸೈಫ್ ಅಲಿ ಖಾನ್​​ ಕೊನೆಯದಾಗಿ 2023ರಲ್ಲಿ ಬಿಡುಗಡೆ ಆದ 'ಆದಿಪುರುಷ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಲಂಕೇಶ್ (ರಾವಣ) ಪಾತ್ರಕ್ಕೆ ಜೀವ ತುಂಬಿದ್ದರು. ನಂತರ, ಜೂನಿಯರ್​ ಎನ್​ಟಿಆರ್​ ಮುಖ್ಯಭೂಮಿಕೆಯ 'ದೇವರ' ಸಿನಿಮಾಗೆ ಸಹಿ ಹಾಕಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ಸೈಫ್ ಟಾಲಿವುಡ್ ಪ್ರವೇಶಿಸುತ್ತಿದ್ದಾರೆ. ಭೈರ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಹುಟ್ಟುಹಬ್ಬದ ಸಂದರ್ಭ ಚಿತ್ರದಿಂದ ಬಿಡುಗಡೆಯಾದ ಪೋಸ್ಟರ್ ಸಿನಿಮಾ ಸುತ್ತಲಿನ ಕುತೂಹಲ ಹೆಚ್ಚಿಸಿದೆ. ಅಲ್ಲದೇ ಮತ್ತೊಂದು ಚಿತ್ರವೊಂದನ್ನು ಒಪ್ಪಿಕೊಂಡಿದ್ದು, ಸದ್ಯ ಈ ಎರಡೂ ಚಿತ್ರಗಳು ಶೂಟಿಂಗ್ ಹಂತದಲ್ಲಿವೆ.

ಇದನ್ನೂ ಓದಿ:ಚಿರಂಜೀವಿ, ವೈಜಯಂತಿಮಾಲಾಗೆ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ - Padma Vibhushan

ಇನ್ನೂ ಬಿಡುಗಡೆಗೆ ಸಜ್ಜಾಗುತ್ತಿರುವ ದೇವರ ಚಿತ್ರ ಗಮನಿಸೋದಾದರೆ, ಬಾಲಿವುಡ್ ಬ್ಯೂಟಿ ಜಾಹ್ನವಿ ಕಪೂರ್ ಕೂಡ ನಟಿಸುತ್ತಿದ್ದಾರೆ. ಈ ನಟಿಗಿದು ತೆಲುಗಿನ ಚೊಚ್ಚಲ ಚಿತ್ರ. ಅಲ್ಲದೇ, ಇದೇ ಮೊದಲ ಬಾರಿಗೆ ಆರ್​ಆರ್​ಆರ್​ ಖ್ಯಾತಿಯ ಜೂನಿಯರ್​ ಎನ್​ಟಿಆರ್​​ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಯುವಸುಧಾ ಆರ್ಟ್ಸ್ ಮತ್ತು ಎನ್​​ಟಿಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಮಿಕ್ಕಿಲಿನೇನಿ ಸುಧಾಕರ್ ಮತ್ತು ನಂದಮೂರಿ ಕಲ್ಯಾಣ್ ರಾಮ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಪ್ರಮುಖ ಶೆಡ್ಯೂಲ್‌ಗಳನ್ನು ಪೂರ್ಣಗೊಳಿಸಿರುವ ಚಿತ್ರ, ಅಕ್ಟೋಬರ್ 10 ರಂದು ತೆರೆಗೆ ಬರಲಿದೆ. ಈ ಚಿತ್ರದ ಮೊದಲ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ದೇವರ ಎರಡು ಭಾಗಗಳಲ್ಲಿ ಮೂಡಿಬರಲಿದೆ.

ಇದನ್ನೂ ಓದಿ:ಸಲ್ಮಾನ್ ಖಾನ್ ನಟನೆಯ 'ಸಿಖಂದರ್‌'ಗೆ ನಾಯಕಿಯಾದ ರಶ್ಮಿಕಾ ಮಂದಣ್ಣ - Rashmika Mandanna

ABOUT THE AUTHOR

...view details