ಕರ್ನಾಟಕ

karnataka

ಅನಿಮೇಟೆಡ್ ವರ್ಷನ್​​ನಲ್ಲಿ 'ಕ್ರೌನ್ ಆಫ್ ಬ್ಲಡ್ ಬಾಹುಬಲಿ' ರೆಡಿ - Baahubali Crown Of Blood

By ETV Bharat Karnataka Team

Published : May 2, 2024, 9:48 PM IST

ಬಾಹುಬಲಿ, ಬಲ್ಲಾಳ ದೇವ ಸೇರಿ ಮಾಹಿಷ್ಮತಿಯ ಸಂಪೂರ್ಣ ಕಥೆಯನ್ನು ಅನಿಮೇಟೆಡ್ ಫಾರ್ಮೆಟ್‌ನಲ್ಲಿ ಹೇಳಲು ಯೋಜನೆ ಸಿದ್ಧಗೊಂಡಿದೆ.

Baahubali animated version
ಬಾಹುಬಲಿ ಅನಿಮೇಟೆಡ್ ವರ್ಷನ್​​ (ETV Bharat)

ಎಸ್.ಎಸ್.ರಾಜಮೌಳಿ ನಿರ್ದೇಶನದಲ್ಲಿ ಬಂದ ಬಾಹುಬಲಿ ಸರಣಿ ಚಿತ್ರಗಳು ವಿಶ್ವದಾದ್ಯಂತ ಸದ್ದು ಮಾಡಿ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಚಿತ್ರದಲ್ಲಿ ಕೆಲಸ ಮಾಡಿದ ಕಲಾವಿದರು ಹಾಗೂ ತಂತ್ರಜ್ಞರುಗಳಿಗೆ ಹೆಚ್ಚಿನ ಅವಕಾಶಗಳು ಲಭಿಸಿದವು. ಕಥೆಯಲ್ಲಿ ಬಾಹುಬಲಿಯಾಗಿ ಪ್ರಭಾಸ್ ಮತ್ತು ಬಲ್ಲಾಳ ದೇವನಾಗಿ ರಾಣಾ ದಗ್ಗುಭಾಟಿ ಅಭಿನಯಿಸಿದ್ದರು. ಇಬ್ಬರ ಜೀವನದ ಅನೇಕ ತಿಳಿಯದ ತಿರುವುಗಳು, ಮಾಹಿತಿಗಳನ್ನು ಚಿತ್ರದಲ್ಲಿ ತೋರಿಸಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಈಗ ಎಲ್ಲವನ್ನೂ ಹೊಸ ಅಧ್ಯಾಯದೊಂದಿಗೆ ಅನಿಮೇಟೆಡ್ ಫಾರ್ಮೆಟ್‌ದಲ್ಲಿ ಹೇಳಲು ಯೋಜನೆ ಸಿದ್ಧಗೊಂಡಿದೆ.

ತೆಲುಗು ಭಾಷೆಯ ಮಹಾಕಾವ್ಯ ಫ್ಯಾಂಟಸಿ ಆ್ಯಕ್ಷನ್ ಚಿತ್ರವಾಗಿದ್ದು, ಡಾರ್ಲಿಂಗ್ ಪ್ರಭಾಸ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ಸತ್ಯರಾಜ್ ಮತ್ತು ನಾಸರ್ ಸೇರಿದಂತೆ ದೊಡ್ಡ ತಾರಬಳಗ ಭಾಗ 1 ಮತ್ತು 2ರಲ್ಲಿತ್ತು.

ಬಾಹುಬಲಿ ಪಾರ್ಟ್ 1ನಲ್ಲಿ ಪ್ರೀತಿಯ ಆವಂತಿಕಾಗೆ ಸಹಾಯ ಮಾಡುವ ಸಾಹಸಿ ಯುವಕನ ಕಥೆಯಿದೆ. ಮಾಹಿಷ್ಮತಿಯ ಮಾಜಿ ರಾಣಿ ದೇವಸೇನಾ, ರಾಜ ಭಲ್ಲಾಲದೇವನ ದಬ್ಬಾಳಿಕೆಯ ಆಳ್ವಿಕೆ ಮೊದಲ ಭಾಗದಲ್ಲಿದೆ. ಬಾಹುಬಲಿ 2ರಲ್ಲಿ ಕಥೆ ಮುಕ್ತಾಯವಾಗುತ್ತದೆ .

ಬಾಹುಬಲಿ ಅನಿಮೇಟೆಡ್ ವರ್ಷನ್​​ (ETV Bharat)

ಚಿತ್ರದ ಕಥೆಯನ್ನು ರಾಜಮೌಳಿ ಅವರ ತಂದೆ ವಿ.ವಿಜಯೇಂದ್ರ ಪ್ರಸಾದ್ ಬರೆದಿದ್ದರು. ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಎಂ.ಎಂ.ಕೀರವಾಣಿ ಸಂಯೋಜಿಸಿದ್ದಾರೆ. ಛಾಯಾಗ್ರಹಣ, ನಿರ್ಮಾಣ ವಿನ್ಯಾಸ ಮತ್ತು ವಿಎಫ್‌ಎಕ್ಸ್ ಅನ್ನು ಕ್ರಮವಾಗಿ ಕೆ.ಕೆ.ಸೆಂಥಿಲ್ ಕುಮಾರ್, ಸಾಬು ಸಿರಿಲ್ ಮತ್ತು ವಿ.ಶ್ರೀನಿವಾಸ್ ಮೋಹನ್ ನಿರ್ವಹಿಸಿದ್ದಾರೆ.

ಇದನ್ನೂ ಓದಿ:ಭಾರತದಲ್ಲಿ 24 ಗಂಟೆಯೊಳಗೆ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಲಿರಿಕಲ್ ಸಾಂಗ್ 'ಪುಷ್ಪ ಪುಷ್ಪ' - Pushpa Song Record

ಈಗ ಎ ಗ್ರಾಫಿಕ್ ಇಂಡಿಯಾ ಮತ್ತು ಆರ್ಕ ಮೀಡಿಯಾ ವರ್ಕ್ಸ್ ಪ್ರೊಡಕ್ಷನ್ ಅಡಿಯಲ್ಲಿ ಎಸ್.ಎಸ್.ರಾಜಮೌಳಿ-ಶರದ್‌ದೇವರಾಜನ್ ಕ್ರಿಯೆಟೀವ್ ಮುಖ್ಯಸ್ಥರಾಗಿರುತ್ತಾರೆ. ಜೀವನ್ ಜೆ ಕಾಂಗ್-ನವೀನ್ ಜಾನ್ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಇವರೆಲ್ಲರೂ ನಿರ್ಮಾಣದಲ್ಲಿ ಪಾಲುದಾರರಾಗಿರುತ್ತಾರೆ.

ಇದನ್ನೂ ಓದಿ:ಟೀಸರ್​ನಲ್ಲೇ ಕುತೂಹಲ ಕೆರಳಿಸಿದ ರವಿಚಂದ್ರನ್​​ ಅಭಿನಯದ 'ದಿ ಜಡ್ಜ್​​​ಮೆಂಟ್' - The Judgement Teaser

ಈ ಅನಿಮೇಟೆಡ್‌ನಲ್ಲಿ ಸಾಹಸ, ರಾಜಕೀಯ ಅಚ್ಚರಿಗಳು, ನಾಟಕ, ಮೋಸ, ಯುದ್ಧ, ಹೀರೋಗಿರಿ, ವಿಶ್ವಾಸ, ಧೈರ್ಯ ಎಲ್ಲಾ ಅಂಶಗಳು ಸೇರಿಕೊಂಡಿವೆ. ಕೇವಲ ಮಕ್ಕಳು ಮಾತ್ರವಲ್ಲದೇ ವಿಶಾಲ ಪ್ರೇಕ್ಷಕ ವರ್ಗಕ್ಕೆ ಭಾರತೀಯ ಅನಿಮೇಶನ್ ಅನ್ನು ಮರು ರೂಪಿಸಿರುವುದು ವಿಶೇಷ. ಇಂತಹ ಪವರ್ ಪ್ಯಾಕ್ಡ್ ಆ್ಯಕ್ಷನ್ ಸೀರಿಸ್ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಮೇ 17, 2024ರಿಂದ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗಲು ಸಜ್ಜಾಗಿದೆ

ABOUT THE AUTHOR

...view details