ಕರ್ನಾಟಕ

karnataka

'I am alive': ನಾನು ಜೀವಂತವಾಗಿದ್ದೇನೆಂದು ಹೇಳಿಕೊಂಡ ನಟಿ ಪೂನಂ ಪಾಂಡೆ

By ETV Bharat Karnataka Team

Published : Feb 3, 2024, 12:49 PM IST

Updated : Feb 3, 2024, 1:33 PM IST

ಗರ್ಭಕಂಠದ ಕ್ಯಾನ್ಸರ್​​ನಿಂದ ನಟಿ ಸಾವನ್ನಪ್ಪಿದ್ದಾರೆ ಎಂದು ನಿನ್ನೆ ಪೂನಂ ಪಾಂಡೆ ಅವರ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆ ತಿಳಿಸಿತ್ತು. ಆದ್ರೆ ನಟಿ ಜೀವಂತವಾಗಿದ್ದಾರೆ. I am alive ಎಂದು ನಟಿ ಸ್ವತಃ ಹೇಳಿಕೊಂಡಿದ್ದಾರೆ.

Poonam Pandey
ಪೂನಂ ಪಾಂಡೆ

ಬಾಲಿವುಡ್​​​ ನಟಿ ಹಾಗೂ ರೂಪದರ್ಶಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್​​ನಿಂದ ಸಾವನ್ನಪ್ಪಿದ್ದಾರೆ ಎಂದು ನಿನ್ನೆ ನಟಿಯ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆ ತಿಳಿಸಿತ್ತು. ಆ ಪ್ರಕಾರ ಮಾಧ್ಯಮಗಳು ಸುದ್ದಿ ಹಂಚಿಕೊಂಡಿದ್ದವು. ಪೂನಂ ಪಾಂಡೆ ನಿಧನ ಸುಳ್ಳು ಸುದ್ದಿ ಎಂಬುದು ಇಂದು ಬಯಲಾಗಿದೆ.

ಸ್ವತಃ ಪೂನಂ ಪಾಂಡ ಮಾತನಾಡಿರೋ ವಿಡಿಯೋ ಇಂದು ಅವರ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಆಗಿದೆ. ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೂನಂ ಪಾಂಡೆ ಹೀಗೆ ಮಾಡಿದ್ದಾರೆ. ಈ ಮೂಲಕ ಅವರು ಆಯ್​ ಆ್ಯಮ್​ ಅಲೈವ್​​ ಎಂದು ಹೇಳಿಕೊಂಡಿದ್ದಾರೆ.

ಪೂನಂ ಪಾಂಡೆ ಅವರ ''ನಿಧನದ ಸುದ್ದಿ'' (ನಟಿಯೇ ಹರಡಿದ ಫೇಕ್​ ನ್ಯೂಸ್​) ಮನರಂಜನಾ ಕ್ಷೇತ್ರವನ್ನು ದಿಗ್ಭ್ರಮೆಗೆ ತಳ್ಳಿತ್ತು. ಹಲವು ಖ್ಯಾತ ಸೆಲೆಬ್ರಿಟಿಗಳು ಸಹ, ಪೂನಂ ಇನ್ನಿಲ್ಲ ಎಂದೇ ಗ್ರಹಿಸಿ ಸಂತಾಪ ಸೂಚಿಸಿದ್ದರು. ಅದಾಗ್ಯೂ, ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿದ ಮಾಡೆಲ್​ ಇಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಸಾವಿನ ಸುತ್ತಲಿನ ವದಂತಿಗಳಿಗೆ ಫುಲ್​ ಸ್ಟಾಪ್​​ ಇಟ್ಟಿದ್ದಾರೆ. ನಿನ್ನೆ ನಟಿಯ ಅಕೌಂಟ್​ನಿಂದ ಸಾವಿನ ಸುದ್ದಿ ಶೇರ್ ಆಗುತ್ತಿದ್ದಂತೆ ಇದು ಫೇಕ್​ ನ್ಯೂಸ್​​, ಪ್ರಚಾರದ ಗಿಮಿಕ್​ ಎಂದು ಹಲವರು ಊಹಿಸಿದ್ದರು.

ಇದನ್ನೂ ಓದಿ:ವೈವಾಹಿಕ ಸಮಸ್ಯೆ​ to ರಾಜ್ ಕುಂದ್ರಾ ಕೇಸ್​: ಪೂನಂ ಪಾಂಡೆ ವಿವಾದಗಳಿವು!

ಇಂದು ನಟಿಯ ಇನ್​ಸ್ಟಾಗ್ರಾಮ್​​ನಲ್ಲಿ ಶೇರ್ ಆದ ವಿಡಿಯೋ ಪೋಸ್ಟ್‌ನಲ್ಲಿ, ತಾವು ಜೀವಂತವಾಗಿರೋ ವಿಚಾರವನ್ನು ದೃಢೀಕರಿಸಿ ಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆಯ ಮಹತ್ವದ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ನಿನ್ನೆ ನಟಿ ಗರ್ಭಕಂಠದ ಕ್ಯಾನ್ಸರ್​ನಿಂದಲೇ ಇಹಲೋಕ ತ್ಯಜಿಸಿದ್ದು ಎಂದು ಹೇಳಲಾಗಿತ್ತು. ಗರ್ಭಕಂಠದ ಕ್ಯಾನ್ಸರ್​​ನಿಂದಾಗುವ ಸಾವುಗಳನ್ನು ತಡೆಗಟ್ಟುವಲ್ಲಿ ಹೆಚ್​ಪಿವಿ ವ್ಯಾಕ್ಸಿನೇಷನ್ ಮತ್ತು ವೈದ್ಯಕೀಯ ಪರೀಕ್ಷೆಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಗರ್ಭಕಂಠದ ಕ್ಯಾನ್ಸರ್ ಅನ್ನು ಪರಿಣಾಮಕಾರಿಯಾಗಿ ಎದುರಿಸಲು ಪ್ರತೀ ಮಹಿಳೆಯು ಅಗತ್ಯ ಜ್ಞಾನ ಹೊಂದಬೇಕಿದೆ, ಜೊತೆಗೆ ಜಾಗೃತಿ ಮೂಡಿಸುವಲ್ಲಿ ಸಾಮೂಹಿಕ ಕ್ರಮ ಅಗತ್ಯವಿದೆ ಎಂದು ನಟಿ ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಗರ್ಭಕಂಠದ ಕ್ಯಾನ್ಸರ್‌ನಿಂದ ನಟಿ ಪೂನಂ ಪಾಂಡೆ ನಿಧನ

ಮತ್ತೊಂದು ವಿಡಿಯೋದಲ್ಲಿ ಪಾಂಡೆ ನೆಟ್ಟಿಗರನ್ನು ಉದ್ದೇಶಿಸಿ ಮಾತನಾಡಿದ್ದು, ತಮ್ಮ ಸಾವಿನ ಸುಳ್ಳು ಸುದ್ದಿಯಿಂದ ಅನೇಕರ ನೋವಿಗೆ ಕಾರಣವಾಗಿದ್ದಕ್ಕಾಗಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ಆಗಾಗ್ಗೆ ಕಡೆಗಣಿಸಲ್ಪಡುವ ಗರ್ಭಕಂಠದ ಕ್ಯಾನ್ಸರ್ ಸಮಸ್ಯೆಯ ಬಗ್ಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿವುದು ತನ್ನ ಉದ್ದೇಶವಾಗಿತ್ತು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

Last Updated :Feb 3, 2024, 1:33 PM IST

ABOUT THE AUTHOR

...view details