ಕರ್ನಾಟಕ

karnataka

ಉತ್ತರ ಕನ್ನಡದಲ್ಲಿ 202 ಹೋಮ್​ ಗಾರ್ಡ್​ ಹುದ್ದೆಗಳಿಗೆ ನೇಮಕಾತಿ; ಜಿಲ್ಲಾಡಳಿತದಿಂದ ಅಧಿಸೂಚನೆ

By ETV Bharat Karnataka Team

Published : Feb 26, 2024, 3:38 PM IST

ಗೃಹ ರಕ್ಷಕರ ದಳ ಸಂಸ್ಥೆ ಸ್ವಯಂ ಸೇವಕ ಸಂಸ್ಥೆಯಾಗಿದ್ದು, ಇಲ್ಲಿ ಕೆಲಸ ಮಾಡಲು ಇಚ್ಛಿಸುವ ಆಕಾಂಕ್ಷಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು.

home guards job notification from Uttara kannada District
home guards job notification from Uttara kannada District

ಬೆಂಗಳೂರು: ಉತ್ತರ ಕನ್ನಡ ಜಿಲ್ಲಾ ಗೃಹ ರಕ್ಷಕ ದಳದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 202 ಹುದ್ದೆಗಳ ಭರ್ತಿಗೆ ಜಿಲ್ಲಾಡಳಿತ ಅಧಿಸೂಚನೆ ಹೊರಡಿಸಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಧಿಸೂಚನೆ

ಹುದ್ದೆ ವಿವರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಚಿಂಡಿಯಾ, ಮಲ್ಲಾಪುರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಹಳಿಯಾಳ, ದಾಂಡೇಲಿ, ಜೊಯಿಡಾ ಘಟಕ, ಉಪ ಘಟಕದಲ್ಲಿ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ: ಅಭ್ಯರ್ಥಿಗಳು ಎಸ್​ಎಸ್​ಎಲ್​ಸಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ:ಅಭ್ಯರ್ಥಿಗಳು ಕನಿಷ್ಠ 19 ಮತ್ತು ಗರಿಷ್ಠ 50 ವರ್ಷ ವಯೋಮಿತಿ ಹೊಂದಿರಬೇಕು.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆಫ್​​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಜಿಲ್ಲಾ ಸಮಾದೇಷ್ಟರ ಕಚೇರಿ, ಗೃಹರಕ್ಷಕ ದಳ, ಸರ್ವೋದಯ ನಗರ ದಿವೇಕರ್​​ ಕಾಮರ್ಸ್​​ ಕಾಲೇಜು ಎದುರಿಗೆ ಕೋಡಿಬಾಗ, ಕಾರವಾರ, ಇಲ್ಲಿ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಪ್ರತಿ ಪಡೆದು. ಇದೇ ವಿಳಾಸಕ್ಕೆ ಸಲ್ಲಿಸಬೇಕು.

ಅಭ್ಯರ್ಥಿಗಳು ಆಧಾರ್​​ ಪ್ರತಿ, ಎಸ್​ಎಸ್​ಎಲ್​ಸಿ ಅಂಕ ಪಟ್ಟಿಯ ನಕಲು ಮತ್ತು ತಾಲೂಕು ವೈದ್ಯಾಧಿಕಾರಿಗಳಿಂದ ದೈಹಿಕ ಸಧೃಡತೆಯ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಕೆ ಮಾಡಬೇಕು.

ವೇತನ: ಗೃಹ ರಕ್ಷಕರ ದಳ ಸಂಸ್ಥೆ ಸ್ವಯಂ ಸೇವಕ ಸಂಸ್ಥೆಯಾಗಿದ್ದು, ಇದು ಖಾಯಂ ನೌಕರಿ ಅಲ್ಲ. ವೇತನ ಮತ್ತು ವಿಶೇಷ ಭತ್ಯೆಯನ್ನು ಸಂಸ್ಥೆ ನೀಡುವುದಿಲ್ಲ. ಬದಲಾಗಿ ಸರ್ಕಾರ ನಿಗದಿಸಿದ ಗೌರವ ಧನವನ್ನು ಕರ್ತವ್ಯ ನಿರ್ವಹಿಸುವ ಅವಧಿವರೆಗೆ ಪಾವತಿಸಲಾಗುವುದು.

ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಫೆಬ್ರವರಿ 28 ಆಗಿದೆ.

ಹುದ್ದೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ ಕಾರವಾರದಲ್ಲಿನ ಜಿಲ್ಲಾ ಗೃಹ ರಕ್ಷಕ ದಳ ಕಚೇರಿಗೆ ಅಭ್ಯರ್ಥಿಗಳು ಸಂಪರ್ಕಿಸಬಹುದು. ಇಲ್ಲವೇ 08382- 200137/ 226361 ಇಲ್ಲಿಗೆ ಸಂಪರ್ಕಿಸಬಹುದು.

1000 ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗೆ ಅಧಿಸೂಚನೆ;

ರಾಜ್ಯ ಸರ್ಕಾರದ ಕಂದಾಯ ಇಲಾಖೆಯಲ್ಲಿ ಸಾವಿರ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳ ಭರ್ತಿಗೆ ಕೆಇಎ ಅಧಿಸೂಚನೆ ಹೊರಡಿಸಿದೆ. ಪಿಯುಸಿ ಓದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 21,400 - 42,000 ರೂ. ಮಾಸಿಕ ವೇತನ ನಿಗದಿಸಲಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ ನಿಗದಿಸಲಾಗಿದೆ. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಏಪ್ರಿಲ್​ 1 ಆಗಿದೆ. ಈ ಹುದ್ದೆ ಕುರಿತು ವಿವರವಾದ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಸೇರಿದಂತೆ ಸಂಪೂರ್ಣ ವಿವರಗಳಿಗೆ kea.kar.nic.inಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಭರ್ತಿಗೆ ಕೆಇಎ ಅಧಿಸೂಚನೆ

ABOUT THE AUTHOR

...view details