ಕರ್ನಾಟಕ

karnataka

ತೆರಿಗೆ ಪೂರ್ವ ಲಾಭದಲ್ಲಿ 1 ಲಕ್ಷ ಕೋಟಿ ಮಿತಿ ದಾಟಿದ ರಿಲಯನ್ಸ್​​​​: ಈ ಸಾಧನೆ ಮಾಡಿದ ಭಾರತದ ಮೊದಲ ಕಂಪನಿ - RIL cross lakh cr pre tax profit

By ETV Bharat Karnataka Team

Published : Apr 23, 2024, 8:17 AM IST

ದೇಶದ ಆರ್ಥಿಕ ಸದೃಢತೆ ಕಂಪನಿ ಅನೇಕ ಮೈಲಿಗಲ್ಲುಗಳನ್ನು ಸಾಧಿಸಲು ಸಹಾಯ ಮಾಡಿದೆ. ಈ ವರ್ಷ ರಿಲಯನ್ಸ್ ತೆರಿಗೆ ಪೂರ್ವ ಲಾಭದಲ್ಲಿ 1 ಲಕ್ಷ ಕೋಟಿ ಮಿತಿಯನ್ನು ದಾಟಿದೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಕಂಪನಿಯಾಗಿದೆ ಎಂಬ ವಿಚಾರವನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ ಮುಕೇಶ್​ ಅಂಬಾನಿ ಸಂತಸ ವ್ಯಕ್ತಪಡಿಸಿದ್ದಾರೆ.

Etv BharatReliance becomes first Indian company to cross Rs 1 lakh crore threshold in pre-tax profits
Etv Bharaತೆರಿಗೆ ಪೂರ್ವ ಲಾಭದಲ್ಲಿ 1 ಲಕ್ಷ ಕೋಟಿ ಮಿತಿ ದಾಟಿದ ರಿಲಯನ್ಸ್​​​​: ಈ ಸಾಧನೆ ಮಾಡಿದ ಭಾರತದ ಮೊದಲ ಕಂಪನಿt

ನವದೆಹಲಿ:ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾರ್ಚ್ 2024 ಕ್ಕೆ ಕೊನೆಗೊಂಡ ವರ್ಷಕ್ಕೆ ರೂ 10 ಲಕ್ಷ ಕೋಟಿಯ ಒಟ್ಟು ಆದಾಯವನ್ನು ವರದಿ ಮಾಡಿದೆ. ಗ್ರಾಹಕರು ಕಂಪನಿಯ ಮೇಲೆ ನಂಬಿಕೆ ಇಟ್ಟಿರುವ ದ್ಯೋತಕವಾಗಿ ಶೇ 2.6 ರಷ್ಟು ಬೆಳವಣಿಗೆ ಸಾಧಿಸಿದೆ. ಕಂಪನಿಯ ವ್ಯವಹಾರಗಳು ವರ್ಷದಿಂದ ವರ್ಷಕ್ಕೆ ಅಪ್‌ಸ್ಟ್ರೀಮ್ ಆಗುತ್ತಿರುವುದರಿಂದ ಉತ್ತಮ ಬೆಳವಣಿಗೆ ಸಾಧಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.

ರಿಲಯನ್ಸ್ ಇಂಡಸ್ಟ್ರೀಸ್​ನ ಬೆಳವಣಿಗೆಯಲ್ಲಿ ಜಿಯೋದ ಪಾತ್ರ ಗಣನೀಯವಾಗಿದೆ. 42.4 ಮಿಲಿಯನ್ ಚಂದಾದಾರರನ್ನು ಜಿಯೋ ಹೊಂದಿದೆ. Jio ಪ್ಲಾಟ್‌ಫಾರ್ಮ್‌ಗಳ ಆದಾಯವು ವಾರ್ಷಿಕವಾಗಿ ಶೇ 11.7ರಷ್ಟು ಹೆಚ್ಚಳ ಕಂಡಿದೆ. ರಿಲಯನ್ಸ್ ರಿಟೇಲ್‌ಗೆ ಆದಾಯವು ವಾರ್ಷಿಕ 17.8 ರಷ್ಟು ಬೆಳವಣಿಗೆಯೊಂದಿಗೆ ಒಂದು ಶತಕೋಟಿಗಿಂತ ಹೆಚ್ಚಿನ ದಾಖಲೆ ವ್ಯವಹಾರದ ಹೆಜ್ಜೆಗಳನ್ನು ಇಡುವಂತೆ ಮಾಡಿದೆ.

ಸರಾಸರಿ ಬ್ರೆಂಟ್ ಕಚ್ಚಾ ತೈಲದ ಬೆಲೆಯಲ್ಲಿ ಶೇ 13.5 ಕುಸಿತದಿಂದಾಗಿ ಕಂಪನಿಯ O2C ಆದಾಯವು ಪ್ರಾಥಮಿಕವಾಗಿ ಶೇಕಡಾ 5 ರಷ್ಟು ಕಡಿಮೆಯಾಗಿದೆ. ಆದರೆ ಕಂಪನಿಯ ಇತರ ವಿಭಾಗಗಳು ಲಾಭದಾಯವಾಗಿರುವುದರಿಂದ ಭಾಗಶಃ ಸರಿದೂಗಿಸಲಾಗಿದೆ ಎಂದು ಆರ್‌ಐಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ತೈಲ ಮತ್ತು ಅನಿಲ ವಿಭಾಗದಿಂದ ಆದಾಯವು 48 ಪ್ರತಿಶತದಷ್ಟು ಹೆಚ್ಚಾಗಿದೆ.

ಕಂಪನಿಯ ಹಣಕಾಸು ವರದಿ ಬಗ್ಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಖೇಶ್ ಅಂಬಾನಿ, "ರಿಲಯನ್ಸ್​ ವ್ಯವಹಾರಗಳು ಭಾರತೀಯ ಆರ್ಥಿಕತೆಯ ವಿವಿಧ ಕ್ಷೇತ್ರಗಳ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿವೆ. ರಾಷ್ಟ್ರೀಯ ಆರ್ಥಿಕತೆ, ದೃಢವಾದ ಹಣಕಾಸು ಮತ್ತು ಕಾರ್ಯಾಚರಣೆಯ ಕಾರ್ಯಕ್ಷಮತೆಯನ್ನು ಬಲಗೊಳಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಆರ್ಥಿಕ ಸದೃಢತೆ ಕಂಪನಿಯು ಅನೇಕ ಮೈಲಿಗಲ್ಲುಗಳನ್ನು ಸಾಧಿಸಲು ಸಹಾಯ ಮಾಡಿದೆ. ಈ ವರ್ಷ ರಿಲಯನ್ಸ್ ತೆರಿಗೆ ಪೂರ್ವ ಲಾಭದಲ್ಲಿ ರೂ 100,000 ಕೋಟಿ( 1ಲಕ್ಷ ಕೋಟಿ ರೂ.) ಮಿತಿಯನ್ನು ದಾಟಿದ ಮೊದಲ ಭಾರತೀಯ ಕಂಪನಿಯಾಗಿದೆ ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ. ಚಲನಶೀಲತೆ ಮತ್ತು ಸ್ಥಿರ ವೈರ್‌ಲೆಸ್ ಸೇವೆಗಳಿಂದ ಬೆಂಬಲಿತವಾಗಿರುವ ಚಂದಾದಾರರಿಗೆ ವೇಗವರ್ಧಿತ ವಿಸ್ತರಣೆ ಮಾಡಿರುವುದರಿಂದ ಡಿಜಿಟಲ್ ಸೇವೆಗಳ ವಿಭಾಗದ ಕಾರ್ಯಕ್ಷಮತೆ ಹೆಚ್ಚಿದೆ ಎಂದು ಅಂಬಾನಿ ಹೇಳಿದ್ದಾರೆ.

10 ಕೋಟಿಗಿಂತ ಹೆಚ್ಚು 5 ಜಿ ಗ್ರಾಹಕರು: 108 ಮಿಲಿಯನ್‌ಗಿಂತಲೂ ಹೆಚ್ಚು ನಿಜವಾದ 5G ಗ್ರಾಹಕರೊಂದಿಗೆ ಜಿಯೋ ಭಾರತದಲ್ಲಿ 5G ರೂಪಾಂತರವನ್ನು ಮುನ್ನಡೆಸುತ್ತಿದೆ. ಇದುವರೆಗೆ 2G ಬಳಕೆದಾರರನ್ನು ಸ್ಮಾರ್ಟ್‌ಫೋನ್‌ಗಳಿಗೆ ಅಪ್‌ಗ್ರೇಡ್ ಮಾಡುವುದರಿಂದ ಹಿಡಿದು, AI- ಚಾಲಿತ ಪರಿಹಾರಗಳನ್ನು ನೀಡುವವರೆಗೂ ರಾಷ್ಟ್ರದ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ಜಿಯೋ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಎಂದು ಅಂಬಾನಿ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ:ಲೋಕಸಭೆ ಚುನಾವಣೆಯಿಂದ 9 ಲಕ್ಷ ತಾತ್ಕಾಲಿಕ ಉದ್ಯೋಗ ಸೃಷ್ಟಿ: ಉದ್ಯಮ ತಜ್ಞರು - Elections Generate Jobs

ABOUT THE AUTHOR

...view details